Kolluru Temple: ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುವವರೇ ಈ ದಿನದಂದು ನಿಮಗೆ ದೇವರ ದರ್ಶನ ಭಾಗ್ಯ ಇಲ್ಲ!

Kollur Mookambika Temple: ಇತ್ತೀಚೆಗೆ ಜೊತೆಯಾಗಿ ರಜೆ ಸಿಕ್ಕಿ ಮನೆ ಮಂದಿಯ ಜೊತೆಗೆ ಪ್ರವಾಸ ಹೋಗುವವರ ಮಂದಿ ಹೆಚ್ಚುತ್ತಿದ್ದು, ಇದರ ಜೊತೆಗೆ ಮಕ್ಕಳಿಗೂ ಕೂಡ ಪರೀಕ್ಷೆಗಳೆಲ್ಲ ಮುಗಿದು ರಜೆಯಿರುವ ಹಿನ್ನೆಲೆ ಪ್ರವಾಸಿತಾಣ ದೇವಾಲಯಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ
ಕಳೆದ ಒಂದು ತಿಂಗಳಿನಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ(Kollur Mookambika Temple) ಆಗಮಿಸುವ ಭಕ್ತರ ಸಂಖ್ಯೆ(Devotees) ಹೆಚ್ಚಾಗಿದ್ದು, ಕೆಲವು ದಿನಗಳಿಂದ ಪ್ರತೀ ದಿನ ಸರಾಸರಿ 15 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಭಾನುವಾರ ರಾತ್ರಿ ವೇಳೆಗೆ ದಾಖಲೆ ಸಂಖ್ಯೆಯ 15 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ರವಿವಾರ ದೇವಾಲಯದ ಆವರಣದ ಒಳಗೆ ಹೊರಗೆ ಕಿಕ್ಕಿರಿದ ಜನಸಂದಣಿಯು ಕಂಡುಬಂದಿದೆ. ಈ ನಡುವೆ ಕೊಲ್ಲೂರು ದೇಗುಲದಲ್ಲಿ ಎ. 30ರಿಂದ ಮೇ 11ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ಜರುಗಲಿದ್ದು, ಇದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಇದೀಗ ಬರೋಬ್ಬರಿ 21 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ಪೀಠ ಚಲನೆ ಕ್ರಿಯೆ ಜರುಗಲಿರುವ ಹಿನ್ನೆಲೆ ಮೇ 2 ಮತ್ತು 3ರಂದು ಭಕ್ತರಿಗೆ ಶ್ರೀ ದೇವಿಯ ದರ್ಶನ ಮಾಡಲು ಅವಕಾಶ ಸಿಗುವುದಿಲ್ಲ ಎಂಬುದನ್ನು ಕೊಲ್ಲೂರು ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇವಾಲಯದ ಬ್ರಹ್ಮಕಲಶದ ಸಿದ್ಧತೆ ನಡೆಯುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳು ಏಪ್ರಿಲ್ 30ರಿಂದ ನಡೆಯಲಿದೆ. ಮೇ 1ರಂದು ಪೀಠ ಚಲನೆ, ಮೇ 4ರಂದು ಸಹಸ್ರ ಕಲಶ ಸ್ಥಾಪನೆ ಜರುಗಲಿದ್ದು, ಮೇ 5ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮಕಲಶಾಭಿಷೇಕ, ಮೇ 9ರಂದು ಬ್ರಹ್ಮರಥೋತ್ಸವ ಹಾಗೂ ಮೇ 11ರಂದು ಪೂರ್ಣ ಕುಂಭಾಭಿಷೇಕ ಜರುಗಲಿದೆ.

 

ಇದನ್ನು ಓದಿ: Dearness Allowance: Code Of Conduct ಮುಗಿದ ತಕ್ಷಣವೇ ಸಿಗಲಿದೆ ನೌಕರರಿಗೆ ತುಟ್ಟಿ ಭತ್ತೆ!

Leave A Reply

Your email address will not be published.