POCSO Case: ಪುತ್ರಿಯರ ಮೇಲೆ ಅತ್ಯಾಚಾರ ಆರೋಪ, ಆರೋಪದಲ್ಲಿ ಹುರುಳಿಲ್ಲ ಎಂದು ಖುಲಾಸೆಗೊಳಿಸಿದ ನ್ಯಾಯಾಲಯ

Pocso father Acquits: ಮಂಗಳೂರು, ಏ 25: ತಮ್ಮ ತಂದೆಯ ವಿರುದ್ದವೇ ಇಬ್ಬರು ಹೆಣ್ಣು ಮಕ್ಕಳು ಮಾಡಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ (Pocso father Acquits) ನ್ಯಾಯಾಲಯವು ಆದೇಶ ನೀಡಿದೆ.

 

ಮಂಗಳೂರಿನ ಕಾಟಿಪಳ್ಳದ ನಿವಾಸಿ ಅಬ್ದುಲ್‌ ಹಕೀಂ (48) ಇದೀಗ ಖುಲಾಸೆಗೊಂಡ ಆರೋಪಿ. ತಮ್ಮ ಹೆಣ್ಣು ಮಕ್ಕಳಿಬ್ಬರು ತಾವು ಅಪ್ರಾಪ್ತರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ತಂದೆ ಅತ್ಯಾಚಾರ ಎಸಗಿದ್ದಾರೆ ಎಂದು ಆ ಇಬ್ಬರು ಮಕ್ಕಳು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ಈ ಪೈಕಿ ಕಿರಿಯ ಮಗಳ ಆರೋಪ ಪ್ರಕರಣದಲ್ಲಿ ತನಿಖೆ ನಡೆಸಿದ ನ್ಯಾಯಾಲಯವು ಎರಡು ತಿಂಗಳ ಹಿಂದೆಯೇ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈಗ ಹಿರಿಯ ಮಗಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದೆ ಕೋರ್ಟು. ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ಟಿಎಸ್‌ಸಿ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಹೆಚ್ಚಿನ ವಿಚಾರಣೆ ನಡೆಸಿ ಆರೋಪಿಯ ಮೇಲೆ ಆರೋಪ ಸಾಬೀತು ಮಾಡಲು ಯಾವುದೇ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲ ಎಂದಿದ್ದಾರೆ. ಹಾಗೂ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ.

ಆರೋಪಿಯ ಅಬ್ದುಲ್‌ ಹಕೀಂ ಪರವಾಗಿ ಲೆಕ್ಸ್‌ ಜ್ಯೂರಿಸ್‌ ಲಾ ಚೇಂಬರ್‌ ಮಂಗಳೂರಿನ ನ್ಯಾಯವಾದಿಗಳಾದ ಆಸಿಫ್‌ ಬೈಕಾಡಿ, ಮಹಮ್ಮದ್‌ ಅಸ್ಗರ್ ಮುಡಿಪು, ಶ್ರೀನಿಧಿ ಪ್ರಕಾಶ್‌, ರುಬಿಯ ಅಖ್ತರ್‌ ಮತ್ತು ನಿರೀಕ್ಷಾ ಬಲವಾಗಿ ವಾದ ಮಂಡಿಸಿದ್ದರು.

ಇದನ್ನೂ ಓದಿ: Kumaraswamy- Radhika: ಕುಮಾರಸ್ವಾಮಿ – ರಾಧಿಕಾ ಮಧ್ಯೆ ಬಿರುಕು, ಆಸ್ಪತ್ರೆಗೆ ಯಾಕ್ ಬರ್ಲಿಲ್ಲ ಸೆಕೆಂಡ್ ವೈಫು ?

Leave A Reply

Your email address will not be published.