Indian railways: IRCTC ಯಿಂದ ರೈಲು ಪ್ರಯಾಣಿಕರಿಗೆ ವಾರ್ನಿಂಗ್! ಈ ನಕಲಿ ಅಪ್ಲಿಕೇಶನ್ ಬಳಸದಂತೆ ತಾಕೀತು!

Indian Railways: ರೈಲ್ವೆ ಇಲಾಖೆ ರೈಲ್ವೇ ಪ್ರಯಾಣಿಕರಿಗೆ ಬಹು ಮುಖ್ಯ ಮಾಹಿತಿಯನ್ನು ಹಂಚಿಕೊಂಡಿದೆ. ರೈಲ್ವೆ ಪ್ರಯಾಣ ಮಾಡುವ ಸಲುವಾಗಿ ನೀವು ಟಿಕೇಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC ) ವಿವಿಧ ಅಪ್ಲಿಕೇಶನ್ಗಳನ್ನು ನೀವು ಬಳಸುವಾಗ ಜಾಗ್ರತೆ ವಹಿಸಲು ಸೂಚಿಸಿದ್ದು, ನಕಲಿ ಅಪ್ಲಿಕೇಶನ್ ಬಳಸುವುದರಿಂದ ಫೋನ್ ಹ್ಯಾಕ್( Phone Hack)ಆಗುವ ಸಾಧ್ಯತೆಯ ಬಗ್ಗೆ ಕೂಡ ಐಆರ್ಟಿಸಿ (IRCTC)ಎಚ್ಚರಿಕೆ ನೀಡಿದೆ.

 

ರೈಲ್ವೇ ಪ್ರಯಾಣ(Indian Railways) ಮಾಡುವಾಗ ಹೆಚ್ಚಿನ ಮಂದಿ ಆನ್ಲೈನ್ ಬುಕಿಂಗ್ ವ್ಯವಸ್ಥೆಯ ಮೂಲಕ ರೈಲು ಟಿಕೆಟ್ ಕಾಯ್ದಿರಿಸುವುದು ಸಾಮಾನ್ಯ. ಟಿಕೆಟ್ ಬುಕ್ಕಿಂಗ್ ಮಾಡುವ ಸಲುವಾಗಿ ಇಂದು ಹಲವಾರು ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತಿದೆ. ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಯೇ ಟಿಕೆಟ್ ಕಾಯ್ದಿರಿಸುವ ಅವಶ್ಯಕತೆ ಈಗಿಲ್ಲ. ಐಆರ್ಸಿಟಿಸಿ(IRCTC) ಯ ಅಧಿಕೃತ ವೆಬ್ಸೈಟ್ ಮೂಲಕ ರೈಲು ಟಿಕೆಟ್ಗಳನ್ನು ಕಾಯ್ದಿರಿಸಲು ಅವಕಾಶವಿದೆ. ಆದರೆ, ನಕಲಿ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಮೋಸ ಹೋಗದಂತೆ ಎಚ್ಚರಿಕೆ ನೀಡಿರುವ ಐಆರ್ಸಿಟಿಸಿ, ರೈಲು ಟಿಕೆಟ್ ಕಾಯ್ದಿರಿಸುವ ಬಳಕೆದಾರರಿಗೆ ಆಂಡ್ರಾಯ್ಡ್ ಅಪ್ಲಿಕೇಶನ್ ‘ಐಆರ್ಸಿಟಿಸಿಕನೆಕ್ಟ್.apk’ ಅನ್ನು ಇನ್ಸ್ಟಾಲ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ಈ ನಕಲಿ ಅಪ್ಲಿಕೇಶನ್ ‘ಐಆರ್ಸಿಟಿಸಿಕನೆಕ್ಟ್.apk ಅನ್ನು ಬಳಸದಂತೆ ಐಆರ್ಸಿಟಿಸಿ ತನ್ನ ಬಳಕೆದಾರಿಗೆ ಸಲಹೆ ನೀಡಿದ್ದು, ಸೋಶಿಯಲ್ ಮೀಡಿಯಾದ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಅಪ್ಲಿಕೇಶನ್ ಅನ್ನು ಹರಿಬಿಡಲಾಗುತ್ತಿದೆ. ಈ ನಕಲಿ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಇಲ್ಲವೇ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, ನಿಮ್ಮ ವೈಯಕ್ತಿಕ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ದಟ್ಟವಾಗಿದ್ದು, ನಕಲಿ ಅಪ್ಲಿಕೇಶನ್ ನೋಡಲು ಐಆರ್ಸಿಟಿಸಿ ಅಪ್ಲಿಕೇಶನ್ ರೀತಿಯಲ್ಲೇ ಕಂಡುಬರುವ ಹಿನ್ನೆಲೆ ನಕಲಿ ವೆಬ್ಸೈಟ್ ನಡುವಿನ ವ್ಯತ್ಯಾಸ ತಿಳಿಯುವುದು ಕೊಂಚ ಕಷ್ಟವಾಗುತ್ತದೆ.ನಿಮ್ಮ ಫೋನ್ ಮೂಲಕ ಯುಪಿಐ ಸಂಖ್ಯೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಬಳಸಿ ಅಪ್ಲಿಕೇಷನ್ ತೆರೆಯಬೇಕಾಗುತ್ತದೆ. ಹೀಗಾಗಿ, ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ಇದರಿಂದ ‘ಐಆರ್ಸಿಟಿಸಿ ಕನೆಕ್ಟ್.apk ಅಪ್ಲಿಕೇಶನ್ ಡೌನ್ಲೋಡ್ ಮಾಡದಂತೆ ಅದೇ ರೀತಿ ಅನುಮಾನಾಸ್ಪದ ರೀತಿಯಲ್ಲಿ ಯಾವುದೇ ಅಪ್ಲಿಕೇಷನ್ ಕಂಡುಬಂದರೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ಆಂಡ್ರಾಯ್ಡ್ ನಲ್ಲಿ ಗೂಗಲ್ ಪ್ಲೇ ಮತ್ತು ಐಫೋನ್ ಗಳಲ್ಲಿ ಆಪಲ್ ಆಪ್ ಸ್ಟೋರ್ ರೀತಿಯಲ್ಲಿ ಅಪ್ಲಿಕೇಶನ್ ಸ್ಟೋರ್ ಗಳಿಂದ ಮಾತ್ರ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದು ಉತ್ತಮ. ಐಆರ್ಸಿಟಿಸಿಯ ‘ಐಆರ್ಸಿಟಿಸಿ ರೈಲ್ ಕನೆಕ್ಟ್’ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ಇಲ್ಲವೇ ಆಪಲ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಇದರ ಜೊತೆಗೆ IRCTC ಯಾವುದೇ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ ಹಾಗೂ ಈ ಮಾಹಿತಿಗಾಗಿ ಕರೆ ಕೂಡ ಮಾಡುವುದಿಲ್ಲ. ಹೀಗಾಗಿ, ಅಪ್ಲಿಕೇಷನ್ ಬಳಕೆ ಮಾಡುವಾಗ ಜಾಗ್ರತೆ ವಹಿಸಲು ಬಳಕೆದಾರರಿಗೆ ಸೂಚನೆ ನೀಡಿದೆ.

 

ಇದನ್ನು ಓದಿ: Rohit Sharma: ಐಪಿಎಲ್ ನಲ್ಲಿ ಅಪರೂಪದ ದಾಖಲೆ ಮಾಡಿದ ರೋಹಿತ್!

 

Leave A Reply

Your email address will not be published.