Indian Navy jobs: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ : ಒಟ್ಟು ಹುದ್ದೆ-242, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.14!!

Indian Navy jobs: ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಪದವೀಧರ ಅಭ್ಯರ್ಥಿಗಳಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಭಾರತೀಯ ನೌಕಾಪಡೆ(Indian Navy jobs)
ಹುದ್ದೆ : ಶಾರ್ಟ್​ ಸರ್ವೀಸ್​ ಕಮಿಷನ್​ ಆಫೀಸರ್​
ಒಟ್ಟು ಹುದ್ದೆ : 242
ಮಾಸಿಕ ವೇತನ : 56,100 ರೂ.
ಅರ್ಜಿ ಸಲ್ಲಿಕೆ : ಆನ್ಲೈನ್
ಅರ್ಜಿ ಶುಲ್ಕ : ಇಲ್ಲ
ಹುದ್ದೆಯ ಸ್ಥಳ : ಭಾರತದಾದ್ಯಂತ

ಹುದ್ದೆ ವಿವರ:
ನೌಕಾಪಡೆಯಲ್ಲಿರುವ ಜನರಲ್​ ಸರ್ವೀಸ್​, ಏರ್​ ಟ್ರಾಫಿಕ್​, ನವರಲ್​ ಏರ್​​ ಆಪರೇಷನ್ಸ್​ ಆಫೀಸರ್​, ಪೈಲಟ್​​ ಲಾಜಿಸ್ಟಿಕ್​, ನೌಕಾ ಅರ್ಮನೆಂಟ್​ ಇನ್ಸ್​​ಪೆಕ್ಟೊರೇಟ್​ ಕೇಡರ್​, ಶಿಕ್ಷಣ, ಸೇರಿದಂತೆ ಹಲವು ವಿಭಾಗಗಳಲ್ಲಿ ಖಾಲಿ ಇರುವ 242 ಹುದ್ದೆಗಳ ಭರ್ತಿಗೆ ಮುಂದಾಗಿದೆ.

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಬಿಟೆಕ್, ಎಂಬಿಎ, ಎಂಎಸ್ಸಿ, ಎಂಸಿಎ, ಬಿಎಸ್ಸಿ, ಸೇರಿದಂತೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ:
ಜನವರಿ 2, 1999ರಿಂದ 2005 ಜನವರಿಗೆ 1ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಈ ಹುದ್ದೆಗಳನ್ನು ಮೆರಿಟ್​ ಜೊತೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಎನ್​ಸಿಸಿ ಅಭ್ಯರ್ಥಿಗಳಿಗೆ ಶೇ 5ರಷ್ಟು ವಿನಾಯಿತಿಯನ್ನು ಹೊಂದಿರುತ್ತಾರೆ.

ಈ ಹುದ್ದೆಗಳನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದಲ್ಲಿ 10 ವರ್ಷಗಳವರೆಗೆ ಶಾರ್ಟ್​ ಸರ್ವೀಸ್​ ಕಮಿಷನ್​ ಸೇವೆಯನ್ನು ನೀಡಲಾಗುತ್ತದೆ. ಈ ಹುದ್ದೆಯನ್ನು ಗರಿಷ್ಠ 2 ಅವಧಿಗೆ ಅಂದರೆ (02 ವರ್ಷಗಳು + 02 ವರ್ಷಗಳು) ಗರಿಷ್ಠ 04 ವರ್ಷಗಳವರೆಗೆ ವಿಸ್ತರಿಸಬಹುದು. ಸೇವಾ ಅಗತ್ಯತೆ, ಕಾರ್ಯಕ್ಷಮತೆ, ವೈದ್ಯಕೀಯ ಅರ್ಹತೆ ಮತ್ತು ಅಭ್ಯರ್ಥಿಗಳ ಇಚ್ಛೆ ಮೇರೆಗೆ ಈ ಹುದ್ದೆ ವಿಸ್ತರಣೆ ನಡೆಸಲಾಗುವುದು. ಈ ಹುದ್ದೆಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ : ಏಪ್ರಿಲ್​ 29ರಿಂದ
ಅರ್ಜಿ ಸಲ್ಲಿಕೆಗೆ ಕೊನೆ ದಿನ : ಮೇ.14

ಅಧಿಕೃತ ವೆಬ್ ಸೈಟ್ : joinindiannavy.gov.in.

 

ಇದನ್ನು ಓದಿ: Kolluru Temple: ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುವವರೇ ಈ ದಿನದಂದು ನಿಮಗೆ ದೇವರ ದರ್ಶನ ಭಾಗ್ಯ ಇಲ್ಲ! 

Leave A Reply

Your email address will not be published.