Home Breaking Entertainment News Kannada Amala Paul: ಬೆತ್ತಲೆಯಾಗಿ ನಟಿಸಿರೋ ನನಗೆ ‘ಲಿಪ್ ಲಾಕ್’ ಯಾವ ಲೆಕ್ಕ! ಪಡ್ಡೆಗಳಿಗೆ ಅಮಲೇರಿಸಿದ ಅಮಲಾ...

Amala Paul: ಬೆತ್ತಲೆಯಾಗಿ ನಟಿಸಿರೋ ನನಗೆ ‘ಲಿಪ್ ಲಾಕ್’ ಯಾವ ಲೆಕ್ಕ! ಪಡ್ಡೆಗಳಿಗೆ ಅಮಲೇರಿಸಿದ ಅಮಲಾ ಪೌಲ್!

Amala Paul
Image source: Google

Hindu neighbor gifts plot of land

Hindu neighbour gifts land to Muslim journalist

Amala Paul : ಬಾಲಿವುಡ್ ನಟಿ ಅಮಲಾ ಪೌಲ್, ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರವಾಗಿ ಸಾಕಷ್ಟು ಸುದ್ಧಿಯಾಗುತ್ತಿರುತ್ತಾರೆ. ಬಳಿಕ ಅದಕ್ಕೆ ತಮ್ಮದೇ ಸ್ಟೈಲಿನಲ್ಲಿ ರಿಪ್ಲೇ ನೀಡುತ್ತಾರೆ. ಅಂತೆಯೇ ಸದ್ಯ ಅಮಲಾ ಪೌಲ್ ಅವರು ಇದೀಗ ಲಿಪ್ ಲಾಕ್ ವಿಚಾರವಾಗಿ ಸುದ್ಧಿಯಾಗುತ್ತಿದ್ದಾರೆ.

ಹೌದು, ಅಮಲಾ ಪೌಲ್ (Amala Paul) ಹಾಗೂ ಪೃಥ್ವಿರಾಜ್ (Prithviraj) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ಆಡು ಜೀವಿತಂ’ (Aadu Jivitham) ಸಿನಿಮಾ ರಿಲೀಸ್ ಗೂ ಮೊದಲೇ ಸಾಕಷ್ಟು ಸುದ್ಧಿಯಾಗುತ್ತಿದೆ. ಇತ್ತೀಚೆಗಷ್ಟೆ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಜನರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಟ್ರೈಲರ್ ನಲ್ಲಿ ಅಮಲಾ ಪೌಲ್ ಮತ್ತು ನಾಯಕ ಪೃಥ್ವಿರಾಜ್ ಲಿಪ್ ಲಾಕ್ (Lip Lock) ಮಾಡಿಕೊಂಡಿರೋ ದೃಶ್ಯವಿದ್ದು, ಈ ದೃಶ್ಯ ಸಖತ್ ವೈರಲ್ ಕೂಡ ಆಗಿದೆ.

ಟ್ರೈಲರ್ ನಲ್ಲಿನ ಲಿಪ್ ಲಾಕ್ ದೃಶ್ಯ ವೈರಲ್ ಆಗ್ತಿದ್ದಂತೆ ಪಡ್ಡೆ ಹುಡುಗರು ಮೈ ಬೆಚ್ಚಗೆ ಮಾಡಿಕೊಂಡ್ರೆ, ಕೆಲವು ನೆಟ್ಟಿಗರು ಅಮಲಾ ಪೌಲ್ ಗೆ ಕಾಲೆಳೆಯುವುದರ ಜೊತೆಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿ ಕಿಚಾಯಿಸಿದ್ದಾರೆ. “ಇಂತಹ ದೃಶ್ಯಗಳಲ್ಲಿ ನಟಿಸುವುದಕ್ಕೆ ನಿಮಗೆ ಏನೂ ಅನಿಸುವುದಿಲ್ಲವಾ?, ಇಂತಹ ಸೀನ್ ಗಳಲ್ಲಿ ಅಷ್ಟೊಂದು ಸಖತ್ತಾಗಿ ನಟಿಸ್ತಿರಲ್ಲ ಹೇಗೆ? ಎಂದು ಇನ್ನೂ ಕಾಲೆಳೆದಿದ್ದಾರೆ. ಇಷ್ಟೆಲ್ಲ ಪ್ರಶ್ನೆಗಳನ್ನು ಓದಿಕೊಂಡು ಅಮಲಾ ಸುಮ್ಮನೆ ಕೂತಿಲ್ಲ. ಅವುಗಳಿಗೆ ತಮ್ಮದೇ ಆದ ರೀತಿಯಲ್ಲೇ ಉತ್ತರಿಸಿದ್ದಾರೆ.

ಅಂದಹಾಗೆ ಲಿಪ್ ಲಾಕ್ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅಮಲಾ ಪೌಲ್, ಈ ಹಿಂದಿನ ಸಿನಿಮಾದಲ್ಲಿ ಕಥೆಗೆ ಅಗತ ಯವಿರುವುದರಿಂದ ಹಾಗೂ ಕಥೆಗೆ ಅನುಗುಣವಾಗಿ ಬೆತ್ತಲೆಯಾಗಿಯೇ ನಟಿಸಿದ್ದೇನೆ. ಇನ್ನು ಇದರ ಮುಂದೆ ಲಿಕ್ ಲಾಕ್ ನನಗೆ ಲೆಕ್ಕಕ್ಕೇ ಇಲ್ಲ ಎಂದು ಬೋಲ್ಡ್ ಉತ್ತರವನ್ನೇ ಕೊಟ್ಟಿದ್ದಾರೆ. ಈ ಮೂಲಕ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ತಮಗೆ ಯಾವುದೇ ಮುಜುಗರವಿಲ್ಲವೆಂದು ಹೇಳಿಕೊಂಡಿದ್ದಾರೆ.

ಇನ್ನು ಈ ಸಿನಿಮಾವು ಮಲಯಾಳಂ ಬರಹಗಾರ ಬೆಂಜಮಿನ್ ಬರೆದ ‘ಆಡು ಜೀವಿದಂ’ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದಲ್ಲಿ ನಜೀಬ್ ಮೊಹಮ್ಮದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಪತ್ನಿಯಾಗಿ ನಟಿ ಅಮಲಾ ಪೌಲ್ ನಟಿಸಿದ್ದಾರೆ. ʼಆಡು ಜೀವಿತಂʼ ಇದೇ ಬರುವ ಅಕ್ಟೋಬರ್ 20 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Be careful while using mobile : ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ! ಫೋನ್ ಯೂಸ್ ಮಾಡುವಾಗ ಈ 5 ವಿಷಯ ನೆನಪಿಡಿ, ಸ್ವಲ್ಪ ಯಾಮಾರಿದ್ರೂ ಜೈಲು ಪಾಲಾಗ್ತೀರಾ