Home Breaking Entertainment News Kannada Pooja Hegde: ಸಲ್ಮಾನ್ ಬೆಡಗಿ, ಮಂಗಳೂರಿನ ಕಾಡಿನಲ್ಲಿ ಓಡಾಟ! ಯಾವ ಹಣ್ಣಿನ ಹುಡುಕಾಟದಲ್ಲಿ ಪೂಜಾ?

Pooja Hegde: ಸಲ್ಮಾನ್ ಬೆಡಗಿ, ಮಂಗಳೂರಿನ ಕಾಡಿನಲ್ಲಿ ಓಡಾಟ! ಯಾವ ಹಣ್ಣಿನ ಹುಡುಕಾಟದಲ್ಲಿ ಪೂಜಾ?

Pooja Hegde
Image source: tribune India

Hindu neighbor gifts plot of land

Hindu neighbour gifts land to Muslim journalist

Actress Pooja Hegde: ಸೌತ್ ಬ್ಯೂಟಿ ಪೂಜಾ ಹೆಗ್ಡೆ ಅವರು ತುಳು ಕುಟುಂಬಕ್ಕೆ ಸೇರಿದ್ದು ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಖ್ಯಾತಿ ಪಡೆದಿದ್ದಾರೆ.ಉಡುಪಿ ಮೂಲದ ಪೂಜಾ ಹೆಗ್ಡೆ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ ಆಗಿದ್ದರೂ ಕೂಡ ತನ್ನ ತವರೂರ ನಂಟನ್ನು ಬಿಟ್ಟಿಲ್ಲ. ಕರಾವಳಿಯ ಮಂದಿಗೆ ದೈವ ದೇವರ ವಿಚಾರದಲ್ಲಿ ವಿಶೇಷ ಗೌರವ ಇರುವಂತೆ ಪೂಜಾ ಕುಟುಂಬದವರು ಕೂಡ ಮಂಗಳೂರಿನವರಾಗಿರುವ ಹಿನ್ನೆಲೆ ದೈವ ಕೋಲ, ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಪೂಜಾ ಹೆಗ್ಡೆ(Actress Pooja Hegde) ಬಿಡುವು ಸಿಕ್ಕಾಗಲೆಲ್ಲಾ ಅಜ್ಜಿ ಮನೆ ಮಂಗಳೂರಿಗೆ (Mangalore) ಭೇಟಿ ನೀಡುತ್ತಾರೆ.

ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಪ್ರಚಾರದಲ್ಲಿ ತೊಡಗಿದ್ದರು. ಈಗ ಕೆಲಸಕ್ಕೆ ವಿರಾಮ ಹೇಳಿ ಕರಾವಳಿಗೆ ಲಗ್ಗೆ ಇಟ್ಟಿರುವ ಬ್ಯೂಟಿ ತನ್ನ ನೆಚ್ಚಿನ ನಳಪಾಕದ ಸವಿಯುಂಡು ಬಾಯಿ ಚಪ್ಪರಿಸಿದ್ದಾರೆ. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿರುವ ಪೂಜಾ ಹೆಗ್ಡೆಗೆ ಸೀಫುಡ್ ಅಂದ್ರೆ ಪಂಚಪ್ರಾಣ!

ಈ ಸಲ ನಟಿ ಏಡಿ ಸುಕ್ಕ ತಿನ್ನಲು ಮುಂಬೈನಿಂದ ಫ್ಲೈಟ್ ಹತ್ತಿ ಬಂದಿದ್ದಾರೆ.ಮಂಗಳೂರು ಎಂದಾಗ ನೆನಪಿಗೆ ಬರೋದು ಕಡಲತೀರ, ಮೀನು. ಕರಾವಳಿ ಜಿಲ್ಲೆಯಲ್ಲಿ ಸೀಫುಡ್​ಗೆ ಕೊರತೆ ಬರುವುದುಂಟೆ ? ಸದ್ಯ ನಟಿ ಮಂಗಳೂರಿಗೆ ಬಂದು ರುಚಿಕರವಾದ ಏಡಿಯ ಸುಕ್ಕವನ್ನು ಬಾಯಿ ಚಪ್ಪರಿಸಿಕೊಂಡು ಸವಿದಿದ್ದಾರೆ. ಅಷ್ಟೆ ಅಲ್ಲದೇ ಕಾಡಿಗೆ ಎಂಟ್ರಿ ಕೊಟ್ಟು ಹೆಬ್ಬಲಸು ಕಿತ್ತು ಪೆಜಕಾಯಿ ಹಣ್ಣಿನ ಸವಿಯನ್ನು ಉಂಡಿದ್ದಾರೆ.

ಅಜ್ಜಿಯ ಮನೆಯ ನಾಯಿಯ ಜೊತೆ ಆಟವಾಡಿ ಮುದ್ದಾಡಿದ್ದಾರೆ. ಒಟ್ಟಿನಲ್ಲಿ ನಟಿ ಪೂಜಾ ಹೆಗ್ಡೆ ತನ್ನ ನೆಚ್ಚಿನ ಊರಲ್ಲಿ ಜಾಲಿ ಮೂಡಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಕುರಿತ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯಕ್ಕೆ ಪೂಜಾ ಹೆಗ್ಡೆ ಮಹೇಶ್‌ ಬಾಬು ಜೊತೆ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದು ಮತ್ತಷ್ಟು ಒಳ್ಳೆಯ ಅವಕಾಶಕ್ಕೆ ನಟಿ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: Weekend With Ramesh:ಈ ವಾರ ಸಾಧಕರ ಸೀಟನ್ನು ಅಲಂಕರಿಸಲು ಬರಲಿದ್ದಾರೆ ಈ ಗ್ರೇಟ್ ಅತಿಥಿಗಳು!