Teeth care: ಪೋಷಕರೇ ಎಚ್ಚರ..!! ನಿಮ್ಮ ಮಕ್ಕಳು ಯಾವ ರೀತಿಯ ‘ಟೂತ್ ಪೇಸ್ಟ್’ ಬಳಸುತ್ತಾರೆ? ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ!!
Teeth care: ಸಣ್ಣ ಮಕ್ಕಳ ವಿಚಾರಕ್ಕೆ ಬಂದಾಗ ಪೋಷಕರು (parents) ತುಂಬಾ ಜಾಗರೂಕತೆಯಿಂದ ಇರಬೇಕು. ಅವರನ್ನು ಸೂಕ್ಷ್ಮವಾಗಿ ಕಾಳಜಿ ಮಾಡಬೇಕು. ಬೆಳಗ್ಗಿನ ಬ್ರಷ್ (toothbrush) ಇಂದ ಹಿಡಿದು ರಾತ್ರಿ ಮಲಗುವವರೆಗೂ ಹುಷಾರಾಗಿ ನೋಡಿಕೊಳ್ಳಬೇಕು. ಯಾಕಂದ್ರೆ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅನಾರೋಗ್ಯ ಉಂಟಾಗುತ್ತದೆ.
ಸದ್ಯ ಪೋಷಕರು ಮಕ್ಕಳ ಪ್ರತಿ ಹೆಜ್ಜೆಯಲ್ಲೂ ಕಾಳಜಿ ವಹಿಸುತ್ತಾರೆ. ಹಾಗಿದ್ದಾಗ ಸಣ್ಣ ಪುಟ್ಟ ವಿಚಾರಗಳು ಬಗ್ಗೆಯೂ ಹೆಚ್ಚು ಗಮನಹರಿಸಬೇಕು (Teeth care). ಹೌದು, ಪೋಷಕರು ಬಳಸುವ
‘ಟೂತ್ ಪೇಸ್ಟ್’ (toothpaste) ಅನ್ನೇ ಮಕ್ಕಳೂ ಬಳಸುತ್ತಾರೆ. ಆದರೆ, ಇದು ತಪ್ಪು ಎಂದು ಹೇಳುತ್ತೆ ಅಮೆರಿಕನ್ ಡೆಂಟಲ್ ಅಸೋಸಿಯೇಷನ್. ಹಾಗಿದ್ದರೆ, ಮಕ್ಕಳು ಯಾವ ಟೂತ್ ಪೇಸ್ಟ್ ಬಳಸಬೇಕು? ಬನ್ನಿ ಮಾಹಿತಿ ತಿಳಿಯೋಣ.
ಮಕ್ಕಳ ಟೂತ್ ಪೇಸ್ಟ್ ಹಾಗೂ ವಯಸ್ಕರ ಟೂತ್ ಪೇಸ್ಟ್ ಒಂದೇ ರೀತಿ ಇರುವುದಿಲ್ಲ. ವ್ಯತ್ಯಾಸಗಳಿರುತ್ತವೆ. ಮಕ್ಕಳ ಪೇಸ್ಟ್ ನಲ್ಲಿ ಹಲ್ಲುಗಳ ದಂತಕವಚವನ್ನು ಹಾನಿಮಾಡುವ ರಾಸಾಯನಿಕ ಇರುವುದಿಲ್ಲ. ಹಾಗಾಗಿ ಅವರಿಗೆ ಮಕ್ಕಳದೇ ಟೂತ್ ಪೇಸ್ಟ್ ನೀಡಬೇಕು. ಮಕ್ಕಳಿಗೆ ಬಟಾಣಿ ಗಾತ್ರದ ಟೂತ್ ಪೇಸ್ಟ್ ನೀಡಿ.
ಫ್ಲೋರೈಡ್ ಟೂತ್ ಪೇಸ್ಟ್ ನ್ನು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಬೇಡಿ. ಯಾಕಂದ್ರೆ ಸಾಮಾನ್ಯವಾಗಿ ಸಣ್ಣ ಮಕ್ಕಳು ಸರಿಯಾಗಿ ಬ್ರಷ್ ಮಾಡೋದಿಲ್ಲ. ಅದರಲ್ಲೂ ಕೆಲವು ಮಕ್ಕಳು ಬ್ರಷ್ ಮಾಡುತ್ತಾ ಟೂತ್ ಪೇಸ್ಟ್ ತಿನ್ನುವ ಹವ್ಯಾಸ ಹೊಂದಿರುತ್ತಾರೆ. ಫ್ಲೋರೈಡ್ ಟೂತ್ ಪೇಸ್ಟ್ ನೀಡಿದರೆ, ಮಕ್ಕಳು ಅದನ್ನು ತಿಂದಾಗ ಅವರ ದೇಹದಲ್ಲಿ ಫ್ಲೋರೈಡ್ ಸಂಗ್ರಹವಾಗುತ್ತದೆ.
ದೇಹದಲ್ಲಿ ಅತಿಯಾದ ಫ್ಲೋರೈಡ್ ಸಂಗ್ರಹವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿ ಫ್ಲೋರೈಡ್ ಇಲ್ಲದಿರುವ ಟೂತ್ ಪೇಸ್ಟ್ ಮಕ್ಕಳಿಗೆ ನೀಡಿ.
ಬರೇಲಿ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಅಧ್ಯಯನವನ್ನು ನಡೆಸಿದ್ದು, ಮಕ್ಕಳ ಹಲ್ಲುಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ಸೂಕ್ತವಾದ ಟೂತ್ ಪೇಸ್ಟ್ ಮಕ್ಕಳು ಬಳಸದಿದ್ದರೆ, ಅವರ ಹಲ್ಲುಗಳಿಗೆ ಹಾನಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಅಲ್ಲದೆ, ಟೂತ್ ಪೇಸ್ಟ್‌ನ್ನು ಸಣ್ಣ ಪ್ರಮಾಣದಲ್ಲಿ ಬಳಸಬೇಕು ಎನ್ನಲಾಗಿದೆ.
ಇದನ್ನು ಓದಿ: Daily Summer Special Trains: ಬೇಸಿಗೆ ಸಮಯದಲ್ಲಿ ರೈಲ್ವೇ ಇಲಾಖೆ ನೀಡಿತು ಪ್ರಯಾಣಿಕರಿಗೆ ಖುಷಿ ಸುದ್ದಿ!