Sharukh khan: ಯಾರೋ ಕೈ ಕತ್ತರಿಸ್ತಾರೆ ಅನ್ನೋ ವಿಚಿತ್ರ ಭಯದಲ್ಲಿ ಒದ್ದಾಡುತ್ತಿದ್ದಾರೆ ಶಾರುಖ್‌ ಖಾನ್, ಅಯ್ಯೋ! ಬಾಲಿವುಡ್ ಬಾದ್‌ಷಾಗೆ ಆದದ್ದೇನು?

Sharukh khan: ಬಾಲಿವುಡ್(Bollywood) ಬಾದ್‌ಷಾ ಶಾರೂಖ್‌ ಖಾನ್(Shahrukh Khan) ಇತ್ತೀಚಿನ ತಮ್ಮ ಸಂದರ್ಶನವೊಂದರಲ್ಲಿ ತನಗಿರೋ ವಿಚಿತ್ರ ಭಯದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಇಂಥಾ ವಿಚಿತ್ರ ಭಯ ಯಾಕೆ ಬಂತು, ಅದರ ಹಿನ್ನೆಲೆ ಏನು ಅನ್ನೋದೇ ಇಂಟರೆಸ್ಟಿಂಗ್.

 

ಬಾಲಿವುಡ್ ಬಾದ್‌ಷಾ ಆಗಿ ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾರಂಗವನ್ನು ಆಳಿದವರು ಶಾರೂಖ್‌ ಖಾನ್. ನೂರಾರು ಸಿನಿಮಾಗಳಲ್ಲಿ ನಟಿಸಿರುವ, ನಟಿಸುತ್ತಿರುವ, ಶಾರುಖ್ ಹಲವಾರು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದರಿಂದಾಗಿ ದೇಶ ಮಾತ್ರವಲ್ಲ, ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಈ ಬಾದ್‌ಷಾನಿಗೆ ಅದೊಂದು ವಿಚಿತ್ರ ಭಯ ಕಾಡ್ತಿದೆಯಂತೆ.

ಹೌದು ಅನುಪಮ್ ಖೇರ್(Anupam Kher) ಶೋನಲ್ಲಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನಗಿರೋ ವಿಚಿತ್ರ ಭಯದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಇಂಥಾ ವಿಚಿತ್ರ ಭಯ ಯಾಕೆ ಬಂತು, ಅದರ ಹಿನ್ನೆಲೆ ಏನು ಅನ್ನೋದೇ ಇಂಟರೆಸ್ಟಿಂಗ್ ಆಗಿದೆ. ಆದರೆ ಅದನ್ನು ತಿಳಿಯೋ ಮೊದಲು, ನೀವೆಲ್ಲರೂ ಶಾರುಖ್ ಅವರನ್ನು ಹಲವರಾರು ಸಿನಿಮಾಗಳಲ್ಲಿ(Cinema) ಅವರು ವಿಶಿಷ್ಟ ರೀತಿಯಲ್ಲಿ ಕೈ ಎತ್ತುವುದನ್ನು ಗಮನಿಸಿರಬಹುದು. ಅವರಿಗೇ ಅಂತ ಒಂದು ವಿಶಿಷ್ಟ ಮ್ಯಾನರಿಸಂ ಇದೆ. ಅದೊಂದು ಬಹಳ ಆಪ್ತವಾಗಿದ್ದು ಒಂದು ರೀತಿಯಲ್ಲಿ ತಬ್ಬಿಕೊಳ್ಳುವ ರೀತಿಯಲ್ಲಿ ಇರುತ್ತದೆ.

ಹೀಗಿರುವ ಒಂದು ಭಂಗಿಗಾಗಿ ಶಾರೂಖ್ ಪಡೋ ಕಷ್ಟ ಅಷ್ಟಿಷ್ಟಲ್ಲ. ಹೌದಂತೆ, ಈ ಭಯದ ಬಗ್ಗೆ ಮಾತನಾಡಿದ ಶಾರುಖ್ “ಈ ಫೇಮಸ್ ಫೋಬಿಯಾಗಳು(Phobia) ಇವೆಯಲ್ಲಾ, ಅಂಥ ಭಯಗಳು ನನಗಿಲ್ಲ. ನನಗೆ ಕತ್ತಲೆ ಬಗ್ಗೆ ಭಯ(Fear) ಇಲ್ಲ. ಎತ್ತರದಲ್ಲಿ ನಿಂತರೆ, ಆಳ ನೋಡಿದರೆ ಭಯ ಆಗುವುದಿಲ್ಲ. ಆದರೆ, ಸಿನಿಮಾದಲ್ಲಿರಲಿ, ರಿಯಲಲ್ಲಿ ಇರಲಿ, ಕೈ ಮೇಲೆತ್ತಿದಾಗ ಮಾತ್ರ ವಿಚಿತ್ರ ಭಯ ಆವರಿಸುತ್ತದೆ. ಆ ಹೊತ್ತಿಗೆ ಯಾರಾದರೂ ನನ್ನ ಕೈಯನ್ನು ಕತ್ತರಿಸಿಬಿಟ್ಟರೆ ಅನ್ನೋ ಯೋಚನೆ ಬರುತ್ತದೆ. ಇದೊಂದು ವಿಚಿತ್ರ ವಿಷಯ. ನನಗೆ ಈಗಲೂ ಅದು ಅತಿಯಾಗಿ ಕಾಡುತ್ತದೆ” ಎಂದು ಹೇಳಿದ್ದಾರೆ.

ಇನ್ನು ಶಾರೂಖ್ ಅವರಿಗೆ ಇನ್ನೊಂದು ಭಯವಿದೆ. ಅದೇನೆಂದರೆ ಕುದುರೆ! ಅನೇಕ ಸಿನಿಮಾಗಳಲ್ಲಿ ನೀವು ಕುದುರೆ ರೈಡ್(Horse ride) ಮಾಡೋ ಶಾರೂಖ್ ಅವರನ್ನು ನೋಡಿರಬಹುದು. ಅದನ್ನು ಅವರು ಖುಷಿಯಲ್ಲಿ ಮಾಡಿಲ್ಲ. ಬಹಳ ಕಷ್ಟಪಟ್ಟು ಭಯದಲ್ಲಿ ಮಾಡಿದ್ದಾರೆ. ಆದರೆ ಮುಖದಲ್ಲಿ ಆ ಫೀಲಿಂಗ್ ಕಾಣದಂತೆ ನಟಿಸಿದ್ದಾರೆ.

ಅಂದಹಾಗೆ ಶಾರುಖ್ ಖಾನ್ ನೇರವಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೀರಿಯಲ್ ಮೂಲಕ. ಶಾರೂಖ್ ನಟಿಸಿದ ಮೊದಲ ಸೀರಿಯಲ್ ‘ಫೌಜಿ’. ಇದು ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಆ ಬಳಿಕ ಅವರು ಕೆಲವೊಂದಿಷ್ಟು ಸೀರಿಯಲ್‌ಗಳಲ್ಲಿ ನಟಿಸಿದರು. ಶಾರೂಖ್ ಖಾನ್ ಹಿರಿತೆರೆಗೆ ಕಾಲಿಟ್ಟದ್ದು 1992ರಲ್ಲಿ. ಆ ತೊಂಭತ್ತರ ದಶಕದಿಂದ ಇಲ್ಲಿವರೆಗೆ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮೊದಲೇ ಹೇಳಿದಂತೆ ಒಂದು ಕಾಲದಲ್ಲಿ ಬಾಲಿವುಡನ್ನು ಆಳಿದ ಶಾರುಖ್ ಆಮೇಲೆ ಒಂದಿಷ್ಟು ಕಾಲ ಸುಮ್ಮನಾಗಿದ್ದರು. ಯಾಕಂದ್ರೆ ಅವರ ಸಿನಿಮಾಗಳು ಅಂಥಾ ಸದ್ದು ಮಾಡಲಿಲ್ಲ. ಈ ದಶಕದಲ್ಲಂತೂ ಅವರು ಹೇಳಿಕೊಳ್ಳುವಂಥಾ ಸಿನಿಮಾ ನೀಡಿಲ್ಲ. ಆದರೆ ಪಠಾಣ್ ಹೊರತುಪಡಿಸಿ. ಈ ಸಿನಿಮಾ ರಿಲೀಸ್ ಆಗಿ ಪ್ರಖ್ಯಾತಿ ಜೊತೆಗೆ ಹಣವನ್ನೂ ಗಳಿಸಿದೆ. ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ ಶಾರೂಖ್ ಸಾಕಷ್ಟು ಸದ್ದು ಮಾಡಿದ್ದಾರೆ.

ಇದನ್ನೂ ಓದಿ: Sonam khan: ಅಂದು ಬೆತ್ತಲೆ ದೃಶ್ಯ ಮಾಡಿ ಜೋರಾಗಿ ಅತ್ತಿದ್ದೆ, ಸಮಾಧಾನ ಮಾಡೋಕೆ ಅವರು ಮಾಡಿದ್ದೇನು ಗೊತ್ತಾ! ಅಚ್ಚರಿ ಸಂಗತಿ ಬಿಚ್ಚಿಟ್ಟ ಓಯೆ ಓಯೆ ನಟಿ ಸೋನಮ್​ ಖಾನ್

Leave A Reply

Your email address will not be published.