RTE Admission 2023 : ಆರ್‌ಟಿಯ ಮೂಲಕ ಪ್ರವೇಶಾತಿಗೆ ಶಾಲೆಗಳ ಆಯ್ಕೆ ಹೇಗೆ? ಇಲ್ಲಿದೆ ಇತರೆ ಸಂಪೂರ್ಣ ವಿವರ

RTE Admission 2023: ಈಗಾಗಲೇ ಆರ್‌ಟಿಇ (RTE) ಮೂಲಕ ಪ್ರವೇಶಾತಿ ಆರಂಭವಾಗಿದ್ದು, ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ (RTE Admission 2023) ಉಚಿತವಾಗಿ ಪ್ರವೇಶಕ್ಕೆ ಅರ್ಜಿ ಹಾಕಲು (RTE Application) ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 20-04- 2023 ಕೊನೆಯ ದಿನವಾಗಿತ್ತು. ಆದರೆ, ಇದೀಗ ಈ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ 10-05-2023 ಆಗಿದೆ.

 

ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ 1 ರಿಂದ 8ನೇ ತರಗತಿ ಪ್ರವೇಶಕ್ಕೆ ಆರ್‌ಟಿಇ ಮೂಲಕ ಪ್ರವೇಶಾತಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪೋಷಕರು ತಮ್ಮ ಮಕ್ಕಳನ್ನು ಆರ್‌ಟಿಇ(RTE) ಅಡಿಯಲ್ಲಿ ಶಾಲೆಗೆ ದಾಖಲಿಸುವ ಮೊದಲು ತಮ್ಮ ನೆರೆ-ಹೊರೆ ಖಾಸಗಿ ಶಾಲೆಗಳನ್ನು ಚೆಕ್ ಮಾಡಿಕೊಳ್ಳಿ. ನಂತರ ಅರ್ಜಿ ಸಲ್ಲಿಸಬೇಕು. ಇಲಾಖೆಯು ಈಗಾಗಲೇ ಶಾಲೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಟಿಯ ಮೂಲಕ ಪ್ರವೇಶಾತಿಗೆ ಶಾಲೆಗಳ ಆಯ್ಕೆ ಹೇಗೆ? ಇಲ್ಲಿದೆ ಇತರೆ ಸಂಪೂರ್ಣ ವಿವರ.

ಆರ್‌ಟಿಇ ಪ್ರವೇಶಕ್ಕೆ ನೆರೆ,ಹೊರೆ ಖಾಸಗಿ ಶಾಲೆಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

• ಅಧಿಕೃತ ವೆಬ್‌ಸೈಟ್ https://sdcedn.karnataka.gov.in/RTE2018/RTE2015/Form1_Public.aspx ಗೆ ಭೇಟಿ ನೀಡಿ.
• ಪಾಲಕರು ತಮ್ಮ ಜಿಲ್ಲೆ, ಬ್ಲಾಕ್, ಗ್ರಾಮ, ಇತರೆ ಮಾಹಿತಿ ನೀಡಿ
• ‘View in GIS-MAP’ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಕೆಳಗೆ ಶಾಲೆಗಳ ಪಟ್ಟಿ ಕಾಣಸಿಗುತ್ತದೆ.
• ಶಾಲೆ ಸೆಲೆಕ್ಟ್ ಮಾಡಿ
• RTE ಅಡಿ ಪ್ರವೇಶಕ್ಕೆ ಎಷ್ಟು ಸೀಟುಗಳು ಲಭ್ಯ ಎಂದು ಚೆಕ್ ಮಾಡಲು ‘25% RTE Seats’ ಎಂಬಲ್ಲಿ ಕ್ಲಿಕ್ ಮಾಡಿ

ವೇಳಾಪಟ್ಟಿ –
• 2023-24ನೇ ಸಾಲಿನ ಪ್ರವೇಶಾತಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಆ ಪ್ರಕಾರ ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 20-03-2023 ರಿಂದ 10-05-2023ವರೆಗೆ ಅವಕಾಶ ಇರಲಿದೆ.
• EID ಮೂಲಕ ಅರ್ಜಿ ಸಲ್ಲಿಸಿದ ದತ್ತಾಂಶದ ನೈಜತೆ ಪರಿಶೀಲನೆ ಹಾಗೂ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆಗೆ ದಿನಾಂಕ 21-03-2023 ರಿಂದ 11-05-2023ರವರೆಗೆ ಅವಕಾಶ ಇರಲಿದೆ.
• ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ದಿನಾಂಕ: 15-05-2023 ಆಗಿದೆ.
• ಆನ್‌ಲೈನ್‌ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ 18-05-2023 ಇರಲಿದೆ.
• ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ ಹಾಗೂ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ ದಿನಾಂಕ 19-05-2023 ರಿಂದ 20-05-2023ರವರೆಗೆ ಅಪ್‌ಲೋಡ್ ಮಾಡಲಾಗುವುದು.
• ಆನ್‌ಲೈನ್‌ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ದಿನಾಂಕ 06-06-2023 ಇರಲಿದೆ.
• ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ ಹಾಗೂ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ 07-06-2023 ರಿಂದ 15-06-2023ರವರೆಗೆ ಅಪ್‌ಲೋಡ್ ಮಾಡಲಾಗುತ್ತದೆ.

ಇದನ್ನೂ ಓದಿ: D.K Shivakumar: ತಂದೆಗೆ ವಯಸ್ಸಾಯಿತು ಅಂತ ಬಿಸಾಕಲು ಆಗುತ್ತಾ, ಹಿಂದುತ್ವ ಯಾರಪ್ಪನ ಸ್ವತ್ತಲ್ಲ !

Leave A Reply

Your email address will not be published.