Government Scheme: ರೈತರೇ, ನಿಮ್ಮಲ್ಲಿ ಒಣ ಭೂಮಿ ಇದ್ಯಾ: ಹಾಗಾದ್ರೆ ಕೇಂದ್ರ ಸರ್ಕಾರ ನೀಡುತ್ತೆ ತಿಂಗಳಿಗೆ 1 ಲಕ್ಷ ರೂಪಾಯಿ !

Share the Article

PM Kusum Yojana: ಕೃಷಿ ಭಾರತದ ಆರ್ಥಿಕತೆಯ ಪ್ರಮುಖ ಪ್ರೇರಕ ಶಕ್ತಿಯಾಗಿದೆ. ದೇಶವು ಕೃಷಿಯಿಂದ ಉದ್ಯಮದತ್ತ ಸಾಗಿದ್ದರೂ, ಭಾರತದಲ್ಲಿ ಕೃಷಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಹೀಗಾಗಿ ದೇಶದ ರೈತರಿಗೆ (former) ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (central government) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ಯು Pradhan Mantri Kisan Urja Suraksha evem Utthan Mahabhiyan (PM KUSUM) ಕೂಡ ರೈತರಿಗೆ ಪ್ರಯೋಜನ ನೀಡುವ ಒಂದು ಯೋಜನೆಯಾಗಿದೆ. ಈ ಯೋಜನೆ ಮೂಲಕ ರೈತರು ಪ್ರತಿ ಎಕರೆಗೆ ವಾರ್ಷಿಕ ರೂ.1 ಲಕ್ಷದವರೆಗೆ ಆದಾಯ ಗಳಿಸಬಹುದು.

ಪ್ರಧಾನ ಮಂತ್ರಿ ಕುಸುಮ್ ಯೋಜನೆಯನ್ನು (PM KUSUM YOJANA) ಕೇಂದ್ರವು 2019ರಲ್ಲಿ ರೈತರಿಗೆ ಪರಿಚಯಿಸಿತು. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರ ಜಮೀನುಗಳಲ್ಲಿ ಸೋಲಾರ್ ಪಂಪ್‌ಗಳನ್ನು ಸ್ಥಾಪಿಸಲಿದೆ. ಇದರಿಂದ ರೈತರು ತಮ್ಮ ಹೊಲಗಳಿಗೆ ಉಚಿತವಾಗಿ ನೀರಾವರಿ ಮಾಡಬಹುದು. ಈ ಯೋಜನೆಯ ಮೂಲಕ ರೈತರು 25 ವರ್ಷಗಳವರೆಗೆ ಆದಾಯ ಪಡೆಯಬಹುದು. ರೈತರು, ಮಾತ್ರವಲ್ಲ ಈ ಕೆಳಗಿನ ಎಲ್ಲರೂ ಈ ಸ್ಕೀಮ್ ನ ಲಾಭವನ್ನು ಪಡೆಯಬಹುದು. Individual farmers/ group of farmers/ cooperatives/panchayats/ Farmer Producer Organisations (FPO)/Water User associations (WUA) ಮುಂತಾದವರು PM Kusum na ಲಾಭವನ್ನು ಪಡೆಯಬಹುದು.

ಈ ಯೋಜನೆ ಮೂಲಕ ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್‌ಗಳನ್ನು ಅಳವಡಿಸಬಹುದು. ಇದಕ್ಕೆ ಸರ್ಕಾರ ಸಹಾಯಧನ ನೀಡುತ್ತದೆ. ರೈತರು ತಮ್ಮ ಹೊಲಗಳಿಗೆ ಉಚಿತವಾಗಿ ನೀರಾವರಿ ಮಾಡಬಹುದು. ಸೋಲಾರ್ ಸಿಸ್ಟಮ್’ನ್ನ ಸ್ಥಾಪಿಸುವುದರಿಂದ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯ ಮೂಲಕ ಬೆಳೆಗಳನ್ನು ಬೆಳೆಯಬಹುದು. ಹಾಗೆಯೇ ವಿದ್ಯುತ್ ಕೂಡಾ ಉತ್ಪಾದಿಸಬಹುದು. ನಿಮ್ಮ ಬಳಕೆಗೆ ಹೆಚ್ಚುವರಿಯಾಗಿ ನೀವು ವಿದ್ಯುತ್ ಉತ್ಪಾದಿಸಿದರೆ ಅದನ್ನು ಸರ್ಕಾರ ನಿಯಮಿಸಿದ ವಿದ್ಯುತ್ ವಿತರಣಾ ನಿಗಮಕ್ಕೆ ಮಾರಾಟ ಮಾಡುವ ಮೂಲಕ ನೀವು ಹಣವನ್ನು ಕೂಡಾ ಗಳಿಸಬಹುದು. ಇನ್ನು ಕೃಷಿಗೆ ಯೋಗ್ಯವಿಲ್ಲದ ಖಾಲಿ ಭೂಮಿ ಇದ್ದರೆ ಅದನ್ನು ಸರ್ಕಾರಕ್ಕೆ ಗುತ್ತಿಗೆ ನೀಡಿದರೆ ಜಮೀನಿನಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲು ಸರ್ಕಾರವು ನಿಮಗೆ ಬಾಡಿಗೆಯನ್ನು ಕೂಡಾ ನೀಡುತ್ತದೆ.

ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ಸೌರ ಫಲಕಗಳನ್ನು ಅಳವಡಿಸಲಿರುವ ಸ್ಥಳವು ವಿದ್ಯುತ್ ಉಪ ಕೇಂದ್ರದಿಂದ 5 ಕಿ.ಮೀ ದೂರದ ಒಳಗೆ ಇರಬೇಕಾಗುತ್ತದೆ. ಆದರೆ ಇಲ್ಲಿನ ಸೌರ ವಿದ್ಯುತ್‌ನ್ನು ಕೃಷಿ ಉದ್ದೇಶಗಳಿಗೆ ಮಾತ್ರವೇ ಬಳಸಬೇಕಾಗುತ್ತದೆ. ಒಮ್ಮೆ ಹೂಡಿಕೆ ಮಾಡಿದರೆ, ಸುಮಾರು 25 ವರ್ಷಗಳವರೆಗೆ ಇದರ ಪ್ರಯೋಜನವನ್ನು ರೈತಾಪಿ ವರ್ಗ ಪಡೆಯಬಹುದು. ಇಲ್ಲಿ ಪ್ರಕೃತಿ ಪ್ರತಿ ಎಕರೆಗೆ ವರ್ಷಕ್ಕೆ 60,000 ರೂಪಾಯಿಯಿಂದ 1,00,000 ಲಕ್ಷದವರೆಗೆ ಆದಾಯ ಪಡೆಯಬಹುದು.

ಅಲ್ಲದೆ, ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಅನ್ನು ಹೊಂದಲು 60% ವರೆಗೆ ಸಹಾಯಧನವನ್ನು ಕೂಡಾ ಪಡೆಯಬಹುದು. ಇದರಲ್ಲಿ ಶೇ.30 ರಷ್ಟು ಕೇಂದ್ರ ಹಾಗೂ ಶೇ.30 ರಷ್ಟು ರಾಜ್ಯ ಸರಕಾರ ನೀಡುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು 50 ಪರ್ಸೆಂಟ್ ಸಬ್ಸಿಡಿಯನ್ನು ನೀಡುತ್ತದೆ. ಸಾಮಾನ್ಯವಾಗಿ 30% ರಷ್ಟು ಮೊತ್ತವನ್ನು ಬ್ಯಾಂಕ್‌ನಿಂದ ಸಾಲವಾಗಿ ತೆಗೆದುಕೊಂಡರೆ ಆಗ ಸೋಲಾ‌ರ್ ಫಲಕಗಳನ್ನು ಅಳವಡಿಸಬಹುದು.

ಪಿಎಂ ಕುಸುಂ ಯೋಜನೆಯಡಿ ಅರ್ಜಿ ಸಲ್ಲಿಸಲು https://www.india.gov.in/ ಲಿಂಕ್ ಗೆ ಭೇಟಿ ನೀಡಿ.
ಅಲ್ಲಿ ಕೇಳುವ ವಿವಿಧ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ, passive ಉತ್ಪತ್ತಿ ನಿಮ್ಮದಾಗಿಸಿಕೊಳ್ಳಿ.

Leave A Reply