Palmistry: ಅಂಗೈನಿಂದಲೇ ತಿಳಿಯಬಹುದು ನಿಮ್ಮ ಸಂಗಾತಿಯ ಸೀಕ್ರೇಟ್‌ ವಿಷಯಗಳನ್ನು!!!

Palmistry: ನಿಮ್ಮ ಜೀವನ ಸಂಗಾತಿಯನ್ನು ನೀವು ಈ ರೀತಿ ಇರಬೇಕು ಕಲ್ಪನೆ ಮಾಡಿಕೊಂಡಿರುತ್ತೀರಿ. ಅದಲ್ಲದೆ ಜೀವನ ಸಂಗಾತಿ ನಿಮಗೆ ಅದೃಷ್ಟವಂತರಾಗುತ್ತಾರೆಯೇ. ನಿಮ್ಮ ಜೀವನ ಸಂಗಾತಿಯ ಗುಣಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ ನಿಮಗೆ ಇದ್ದೇ ಇರುತ್ತದೆ. ಹಾಗೆಯೇ ಸಾಮುದ್ರಿಕ ಶಾಸ್ತ್ರದಲ್ಲಿ (Palmistry) ವ್ಯಕ್ತಿಯ ಅಂಗೈಯನ್ನು ನೋಡಿ ಜೀವನದ ಹಲವು ರಹಸ್ಯಗಳನ್ನು ತಿಳಿಯಬಹುದಾಗಿದೆ. ಹೌದು, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ನಮ್ಮ ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ನಮ್ಮ ಅಂಗೈಯಲ್ಲಿರುವ ರೇಖೆಗಳು, ಚಿಹ್ನೆಗಳು ಹಾಗೂ ನಿರ್ಮಾಣಗೊಂಡ ಆಕೃತಿಗಳಿಂದ ತಿಳಿಯಬಹುದು. ಒಬ್ಬ ವ್ಯಕ್ತಿಯು ಎಷ್ಟು ಅದೃಷ್ಟಶಾಲಿ ಎಂಬುದನ್ನು ಸಹ ಇದು ತೋರಿಸುತ್ತದೆ.

 

ಮುಖ್ಯವಾಗಿ ಮೃದುವಾದ ಅಂಗೈಯುಳ್ಳವರಿಗೆ ಬಹಳ ಸುಖ-ಸಂತೋಷ ಸಿಗುತ್ತದೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಗಟ್ಟಿಯಾದ ಅಂಗೈ ಹೊಂದಿರುವವರು ತುಂಬಾ ಶ್ರಮಜೀವಿಗಳು. ತಮ್ಮ ಶ್ರಮದಿಂದ ಸಂತೋಷ ಮತ್ತು ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಜನರಲ್ಲಿ ಸಮಯ ನಿರ್ವಹಣೆಯ ಕಲೆ ಅಗಾಧವಾಗಿರುತ್ತದೆ.

ಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಮಾಹಿತಿ ನೀಡಲಾಗಿದೆ. ಯಾರ ಅಂಗೈ ದೊಡ್ಡದಾಗಿದೆಯೋ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಜನರ ಮುಂದೆ ಯಾವಾಗಲೂ ಹಣದ ಕೊರತೆ ಇರುತ್ತದೆ, ಆದರೆ ಸಂತೋಷವು ಯಾವಾಗಲೂ ಅವರ ಜೀವನದಲ್ಲಿರುತ್ತದೆ. ಹಣದ ಕೊರತೆಯಿದ್ದರೂ, ಇಂತಹವರ ಜೀವನದಲ್ಲಿ ಸೌಕರ್ಯಗಳಿಗೆ ಕೊರತೆಯಿರಲ್ಲ.

ಇನ್ನು ವ್ಯಕ್ತಿಯ ಅಂಗೈ ಚಿಕ್ಕದಾಗಿದ್ದರೆ ಆತನ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ. ಯಾರ ಅಂಗೈ ಚಿಕ್ಕದಾಗಿದೆಯೋ ಅವರು ಸ್ಪಷ್ಟ ಮನಸ್ಸಿನವರು ಎಂದು ಹೇಳಲಾಗುತ್ತದೆ. ಇದಲ್ಲದೆ ಸಣ್ಣ ಅಂಗೈ ಹೊಂದಿರುವ ಜನರು ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಬಯಕೆ ಹೊಂದಿರುತ್ತಾರೆ.

 

ಇದನ್ನು ಓದಿ: Tamilnadu :ಎಲ್ಲೆಲ್ಲೂ ಮದ್ಯ, ಎಲ್ಲೆಲ್ಲೂ: ಮದುವೆ ಮನೆಯಿಂದ ಕ್ರೀಡಾಂಗಣದ ತನಕ ಮದ್ಯ ಸಪ್ಲೈಗೆ ಅನುಮತಿ ನೀಡಿದ ಸರ್ಕಾರ ! 

Leave A Reply

Your email address will not be published.