Karnataka polls: ನಾಮಪತ್ರ ಹಾಕಿದ್ದಾರೆ, ಆದ್ರೆ ಸಹಿಯೇ ಹಾಕಿಲ್ಲ ಆಸಾಮಿ: ಈ ಮಹಾ ಯಡವಟ್ಟ ಈಗ ಏನ್ ಮಾಡ್ತಾರೆ ಗೊತ್ತೇ ?
Karnataka polls : ಚಾಮರಾಜನಗರ: ಈತನೊಬ್ಬ ಮಾಯಾ ಯಡವಟ್ಟು ಮನುಷ್ಯ. ಅದೇನು ಅರ್ಜೆಂಟು ಆತನಿಗೆ ಕ್ಯಾಂಪೇನ್ ಹೋಗಲೋ, ಗೊತ್ತಿಲ್ಲ. ಸರ ಸರ ಅರ್ಜಿ ತುಂಬಿ, ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿಕೊಂಡು ನಾಮ ಪತ್ರ ಸಲ್ಲಿಸಿ ಹೊರಟಿದ್ದಾರೆ. ಹೊರಟಿದ್ದು ಎಲ್ಲಿಗೆ ಅಂದ್ರ? ಮತ್ತೆಲ್ಲಿಗೆ: ಸೀದಾ ಫೀಲ್ಡ್ ಗೆ- ಚುನಾವಣಾ (Karnataka polls ) ಪ್ರಚಾರಕ್ಕೆ.
ಎರಡೇ ದಿನದಲ್ಲಿ ಚುನಾವಣಾ ಕಚೇರಿಯಿಂದ ಸುದ್ದಿ ಬಂದಿದೆ. ” ಏನ್ಸಾರ್, ಎಲ್ಲಾ ಸರಿಯಾಗೇ ಅರ್ಜಿ ಬರೆದಿದ್ದೀರಿ. ಎಲ್ಲಾ ದಾಖಲೆಗಳನ್ನೂ ಪೂರೈಸಿದ್ದೀರಿ. ಆದ್ರೆ ಸಹಿಯೇ ಮಾಡಿಲ್ವಲ್ಲ ಸರ್ ” ಅಂತ ಚುನಾವಣಾ ಕಚೇರಿಯ ಅಧಿಕಾರಿ ಕರೆ ಮಾಡಿ ತಿಳಿಸಿದ್ದಾರೆ.
” ಹಂಗಾ, ಇರಪ್ಪ ತಾಳು, ಇಲ್ಲೊಂದು ಭಾಷಣ ಅದೆ, ಮುಗಿಸಿಕೊಂಡು ಬರ್ತೆ” ಅಂತ ಈ ಕ್ಯಾಂಡಿಡೇಟ್ ಹೇಳಿದ್ದಾರೆ. “ಅಯ್ಯೋ ಸಾರ್, ನಿಮ್ಗೆ ರೂಲ್ಸ್ ಗೊತ್ತಿಲ್ಲವೇ ? ಈಗಾಗಲೇ ನಿಮ್ ನಾಮಪತ್ರ ರಿಜೆಕ್ಟ್ ಆಗಿದೆ ” ಅಂತ ಅತ್ತಲಿಂದ ಅಧಿಕಾರಿ ಹೇಳಿ ಫೋನ್ ಕಟ್ ಮಾಡಿದ್ದಾರೆ. ಅತಿ ಉತ್ಸಾಹದಿಂದ ಭಾಷಣ ಮಾಡುತ್ತಿದ್ದ ಅಭ್ಯರ್ಥಿಯ ಭಾಷಣ ಅರ್ಧಕ್ಕೆ ಮೊಟಕುಗೊಂಡಿದೆ.
ಹೌದು, ನಾಮಪತ್ರ ಸಲ್ಲಿಕೆ ವೇಳೆ ಸಹಿ ಹಾಕದಿದ್ದರಿಂದ ನಾಮಿನೇಷನ್ ತಿರಸ್ಕೃತಗೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೂರ್ತಿ ಎಂಬವರು ನಾಮಪತ್ರ ಸಲ್ಲಿಕೆ ವೇಳೆ ಸಹಿ ಮಾಡಲು ಮರೆತು ಯಡವಟ್ಟು ಪ್ರದರ್ಶಿಸಿದ್ದರು. ಈಗ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ.
ಈಗ ಬಿಜೆಪಿ ಪರ ಮೂರ್ತಿ ಬೆಂಬಲ ಸೂಚಿಸಿದ್ದು, ವಿ. ಸೋಮಣ್ಣ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಚುನಾವಣಾ ಅಧಿಕಾರಿಗಳು ನಾಮಪತ್ರ ಸಲ್ಲಿಕೆ ವೇಳೆ ಎಲ್ಲವೂ ಸರಿಯಿದೆ ಎಂದು ಹೇಳಿದ್ದರು. ಆದರೆ, ಈಗ ಸಹಿ ಮಾಡಿಲ್ಲವೆಂದು ತಿರಸ್ಕೃತ ಮಾಡಿದ್ದಾರೆಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: D K Shivakumar: ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ -ಡಿ.ಕೆ.ಶಿವ ಕುಮಾರ್