D.K Shivakumar: ತಂದೆಗೆ ವಯಸ್ಸಾಯಿತು ಅಂತ ಬಿಸಾಕಲು ಆಗುತ್ತಾ, ಹಿಂದುತ್ವ ಯಾರಪ್ಪನ ಸ್ವತ್ತಲ್ಲ !

D.K Shivakumar: ಉಡುಪಿಯ ಬೈಂದೂರಿನಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಡಿಕೆಶಿ (D.K Shivakumar), ಕೆಲವು ಮಾತುಗಳನ್ನಾಡಿದ್ದು, ಹಿಂದುತ್ವದ ಬಗ್ಗೆ ನುಡಿದಿದ್ದಾರೆ. “ ತಂದೆಗೆ ವಯಸ್ಸಾಯ್ತು ಅಂತ ಬಿಸಾಕಲು ಆಗುತ್ತಾ, ಹಿಂದುತ್ವ ಯಾರಪ್ಪನ ಸ್ವತ್ತಲ್ಲ” ಎಂದು ಹೇಳಿದ್ದಾರೆ.

 

ಕೇಸರಿ ಶಾಲು ಹಾಕಿಕೊಂಡಿರುವವರು ‘ಕೈ’ ಹಿಡಿಯಲು ಬಂದಿದ್ದಾರೆ. ಅವರಿಗೆ ನಮಸ್ಕಾರ. ಹಿಂದುತ್ವ ಯಾರ ಆಸ್ತೀನೂ ಅಲ್ಲ, ನಾನು, ಸಿದ್ದರಾಮಯ್ಯ ಹಿಂದೂ ಅಲ್ವಾ? ನಾನು ಧರ್ಮಸ್ಥಳ, ಶೃಂಗೇರಿ ಹೋಗಿದ್ದೇನೆ. ಕೊಲ್ಲೂರಿಗೂ ಹೋಗಲಿದ್ದೇನೆ ಎಂದರು.

ನಾನು ನಿನ್ನೆ ಬಿಜೆಪಿ ಭವಿಷ್ಯ ಮುಕ್ತಾಯವಾಯ್ತು ಅಂದೆ, ಅದಕ್ಕೆ ಬೊಮ್ಮಾಯಿ, ನಿನ್ನ ಪಕ್ಷದಿಂದಲೇ ಬಿಜೆಪಿಗೆ ಬರುತ್ತಿರುವುದು. ಪಾತಾಳಕ್ಕೆ ಹೋಗಿರುವುದು ಕಾಂಗ್ರೇಸ್ (Congress) ಎಂದು ಹೇಳಿದರು. ಬಿಜೆಪಿಯಲ್ಲಿ ದುಡಿದವರಿಗೆ ಗೌರವ ಇಲ್ಲ, ಹಾಗಾಗಿ ಬಿಜೆಪಿ ಮೇಲೆ ಅಸಮಾಧಾನ ಹೊತ್ತು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಲ್ಲಿ ಹಿರಿತನಕ್ಕೆ ಗೌರವ ಇದೆ. ತಂದೆಗೆ ವಯಸ್ಸಾಯ್ತು ಅಂತ ಬಿಸಾಕಲು ಆಗುತ್ತಾ? ಹಿರಿಯರನ್ನು ಗೌರವಿಸಬೇಕು ಎಂದು ಡಿಕೆಶಿ ಹೇಳಿದರು.

“ಬಿಜೆಪಿಯಿಂದ ಏನೂ ಒಳಿತಾಗಿಲ್ಲ. ಗ್ಯಾಸ್‌ ಬೆಲೆ ಏರಿಕೆಯಾಯ್ತು. ರೈತರಿಗೆ ಗೊಬ್ಬರದ ಬೆಲೆ ಹೆಚ್ಚಾಯ್ತು. ಅಚ್ಚೇ ದಿನ ಬಂದೇ ಇಲ್ಲ. ಮೂರು ಜನ ಎಂಎಲ್‌ಎ ನಮ್ಮ ಸಿಡಿ ಪ್ರಸಾರ ಮಾಡಬೇಡಿ ಅಂತ ಸ್ಟೇ ತೆಗೆದುಕೊಂಡಿದ್ದಾರೆ. ಪರಿಶುದ್ಧ ಆಗಿದ್ದವರು ಯಾಕೆ ಸ್ಟೇ ತೆಗೆದುಕೊಂಡರು. ಜನಧನ್‌ ಮೂಲಕ ಏನು ಸಹಾಯ ಮಾಡಿದ್ದೀರಿ, ಮೋದಿ ನೋಡಿ, ಓಟ್ ನೀಡಿ ಅಂತಾರೆ, ಮೋದಿ ಬಂದು ಆಡಳಿತ ಮಾಡುತ್ತಾರೆಯೇ” ಎಂದು ಪ್ರಶ್ನಿಸಿದರು.

“ಬಿಜೆಪಿಯಲ್ಲಿ ಭಾವನೆಗೆ ಬೆಲೆ ನೀಡುವುದಿಲ್ಲ. ಹಿರಿಯರಿಗೆ ಗೌರವ ಕೋಡುವುದಿಲ್ಲ. ಬಿಜೆಪಿಯಲ್ಲಿ (Bjp) ನಾಮ ನೂರಾರು, ದೈವ ಒಂದೇ, ಬಿಜೆಪಿ ಒಂದೇ ಅಜೆಂಡಾ ನಾವು ಹಿಂದೂ ನಾವು ಮುಂದು. ಆದರೆ, ಕಾಂಗ್ರೆಸ್ ನಾವೆಲ್ಲ ಒಂದು, ಇದು ನಮಗೂ ಅವರಿಗೆ ಇರುವ ವ್ಯತ್ಯಾಸ. ಪ್ರಮೋದ್ ಮಧ್ವರಾಜ್ ನನ್ನ ಆತ್ಮೀಯ, ಮೀನುಗಾರರಿಗೆ ಬಿಜೆಪಿ ಸಹಾಯ ಮಾಡುತ್ತಾರೆ ಹೋಗುತ್ತೇನೆ ಅಂತ‌ ಹೇಳಿದ್ದ. ಈಗ ಪ್ರಮೋದ್ ಕೆಳಗೆ ಕುಳಿತುಕೊಳ್ಳುತ್ತಾನೆ. ಈಗ ಗಾಳ ಹಾಕೊಂಡ್ ಕುಳಿತುಕೊಳ್ಳಬೇಕು ಎಲ್ಲಿ ಮೀನು ಸಿಗುತ್ತದೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ಕರಾವಳಿಯಲ್ಲಿ ಅಲೆ ಎಬ್ಬಿಸಲು ಬರ್ತಿದ್ದಾರೆ ಹಿಂದೂ ಫೈರ್ ಬ್ರಾಂಡ್, ಬುಲ್ಡೋಜರ್ ಬಾಬಾ, ದಿನಾಂಕ ಗಮನಿಸಿ

Leave A Reply

Your email address will not be published.