Govt Employees: ಸರಕಾರಿ ನೌಕರರೇ ಶೇ.17 ರಷ್ಟು ಹೆಚ್ಚಳ ಜಾರಿಗೆ ಅನುದಾನ -ಆರ್ಥಿಕ ಇಲಾಖೆಯಿಂದ ಸೂಚನೆ
Govt Employees: ಸರ್ಕಾರಿ ನೌಕರರಿಗೆ (Govt Employees) ಸಿಹಿಸುದ್ದಿ ಇಲ್ಲಿದೆ. ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಜಾರಿಗೆ ಅನುದಾನಕ್ಕೆ ಆರ್ಥಿಕ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಕಳೆದ ಮಾರ್ಚ್ 1 ರಂದು ವೇತನ ಹೆಚ್ಚಳಕ್ಕೆ ಸರ್ಕಾರಿ ನೌಕರರು ಮುಷ್ಕರ (Govt Employees Strike) ನಡೆಸಿದ್ದು, ಈ ಹಿನ್ನೆಲೆ ರಾಜ್ಯ ಸರ್ಕಾರವು ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಹಾಗೇ ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು. ಸದ್ಯ ಶೇ.17 ರಷ್ಟು ವೇತನ ಹೆಚ್ಚಳವು ಏಪ್ರಿಲ್ 1 ರಿಂದಲೇ ಜಾರಿಗೆ ಬಂದಿದ್ದು, ಹೆಚ್ಚಳಕ್ಕೆ ಅಗತ್ಯವಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಬೇರೆ ಇಲಾಖೆಗಳಿಗೆ ಸೂಚನೆ ನೀಡಿದೆ.
“ವೇತನ ಹೆಚ್ಚಳ ಮಾಡಲು ಅಗತ್ಯವಾಗಿರುವ ಅನುದಾನವನ್ನು ಇತರೆ ಭತ್ಯೆಗಾಗಿ ಒದಗಿಸಲಾಗಿರುವ ಅನುದಾನದಿಂದ ಪಡೆದು ಹೆಚ್ಚಳ ಮಾಡಬೇಕು. ಅನುದಾನದಲ್ಲಿ ಕೊರತೆಯಾದರೆ ವಿವಿಧ ಬೇಡಿಕೆಗಳ ಅಡಿಯಲ್ಲಿ ಖಾಲಿ ಹುದ್ದೆಗಳಿಗಾಗಿ ಒದಗಿಸಿರುವ ಅನುದಾನದಿಂದ ಪುನರ್ವಿನಿಯೋಗ ಮಾಡಲಾಗುವುದು” ಎಂದು ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ.
“ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ (7th Pay Commission) ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆʼʼ ಎಂದು ಈ ಮೊದಲು ಸರ್ಕಾರದ ಆದೇಶದಲ್ಲಿ ಪ್ರಕಟಿಸಲಾಗಿತ್ತು.
ಆರ್ಥಿಕ ಇಲಾಖೆ ಹೊರಡಿಸಿದ ಸುತ್ತೋಲೆ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ.
ವೇತನ ಹೆಚ್ಚಳವು ಸರ್ಕಾರಿ ನೌಕರ ಮೂಲ ವೇತನದ ಮೇಲೆ 17% ಆಗಿರುತ್ತದೆ. ಅದನ್ನು ಆಧರಿಸಿ ಯಾವ ಶ್ರೇಣಿಯ ನೌಕರರಿಗೆ ಎಷ್ಟು ಹೆಚ್ಚಿನ ವೇತನ ಲಭಿಸಲಿದೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.