Daily Summer Special Trains: ಬೇಸಿಗೆ ಸಮಯದಲ್ಲಿ ರೈಲ್ವೇ ಇಲಾಖೆ ನೀಡಿತು ಪ್ರಯಾಣಿಕರಿಗೆ ಖುಷಿ ಸುದ್ದಿ!

Daily Summer Special Trains: ರೈಲು(Train)ಪ್ರಯಾಣ ಎಂದರೆ ಹೆಚ್ಚಿನವರ ಪಾಲಿಗೆ ಅಚ್ಚು ಮೆಚ್ಚು. ನೆಚ್ಚಿನ ತಾಣಗಳ ಸೌಂದರ್ಯ ಸವಿಯುತ್ತಾ ಸಾಗುವ ಪಯಣದ ಹಾದಿಯ ಖುಷಿಯೇ ಬೇರೆ. ನಮ್ಮ ರೈಲ್ವೇ ಸೇವೆಗಳ ಬಗ್ಗೆ ನಮಗಿಂತ ಹೆಚ್ಚಾಗಿ ಬೇರೆ ಯಾರಿಗೆ ತಾನೇ ಗೊತ್ತಿರಲು ಸಾಧ್ಯ !! ಈಗಾಗಲೇ ಭಾರತೀಯ ರೈಲ್ವೆ (Indian Railways) ತನ್ನ ಪ್ರಯಾಣಿಕರ(Passengers) ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, (WiFi Facility) ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜನಸಾಮಾನ್ಯರ ನೆಚ್ಚಿನ ಸಂಚಾರ ವ್ಯವಸ್ಥೆಯಲ್ಲಿ ರೈಲ್ವೇ ಸೇವೆಯು ಕೂಡ ಒಂದಾಗಿದೆ. ಇದೀಗ, ರೈಲ್ವೆ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿಯೊಂದನ್ನು(Good News) ನೀಡಿದೆ.

Image source: Twitter

 

ಈಗಾಗಲೇ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದ್ದು, ಹೀಗಾಗಿ ರಜೆಯಲ್ಲಿ ಓಡಾಟ ನಡೆಸುವ ಮಂದಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಬೇಸಿಗೆ ರಜೆಯ(Holiday,) ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಪ್ರಯಾಣಿಕರಿಗಾಗಿ ಹಲವು ವಿಶೇಷ ರೈಲುಗಳ ಸಂಚಾರ ನಡೆಸಲು ಮುಂದಾಗಿದೆ. ಬೇಸಿಗೆಯ ರಜಾದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವ ಹಿನ್ನೆಲೆ ರಜಾದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲ್ವೇ ಪ್ರಯಾಣ(Daily Summer Special Trains) ಆರಂಭಿಸಲು ನಿರ್ಧರಿಸಲಾಗಿದೆ.

ಆ ರೈಲುಗಳ ವಿವರ ಹೀಗಿದೆ:
ಸೋಲಾಪುರ-ಹೈದರಾಬಾದ್ ರೈಲು ಸಂಖ್ಯೆ.07004 ಇಂದು ಏಪ್ರಿಲ್ 24 ರಿಂದ ಮೇ 14 ರವರೆಗೆ ಸಂಚಾರ ಮಾಡಲಿದೆ. ಈ ರೈಲು ಮಧ್ಯಾಹ್ನ 1.20ಕ್ಕೆ ಸೊಲ್ಲಾಪುರದಿಂದ ಹೊರಡಲಿದ್ದು ರಾತ್ರಿ 8.30ರ ವೇಳೆಗೆ ತನ್ನ ಕೊನೆಯ ಸ್ಟೇಷನ್ ಗೆ ತಲುಪಲಿದೆ.

ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯ ಅನುಸಾರ, ಹೈದರಾಬಾದ್‌ನಿಂದ ಸೊಲ್ಲಾಪುರಕ್ಕೆ ರೈಲು ನಂ. 07003 ಈ ತಿಂಗಳ 24 ರಿಂದ ಮೇ 14 ರವರೆಗೆ ಪ್ರತಿದಿನ ವಿಶೇಷ ರೈಲು ಓಡಾಟ ನಡೆಸಲಿದೆ. ಈ ರೈಲು ಹೈದರಾಬಾದ್‌ನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12.20ಕ್ಕೆ ತನ್ನ ಕೊನೆಯ ಸ್ಟೇಷನ್ ಗೆ ತಲುಪಲಿದೆ.ಈ ರೈಲುಗಳು ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರ್, ಗಂಗಾಪುರ ರಸ್ತೆ ಮುಖಾಂತರ ಪ್ರಯಾಣ ಮಾಡಿ ತಮ್ಮ ಕೊನೆಯ ಸ್ಟೇಷನ್​ಗೆ ತಲುಪಲಿದೆ. ಹೀಗಾಗಿ, ರೈಲ್ವೆ ಪ್ರಯಾಣಿಕರಿಗೆ ಬೇಸಿಗೆಯ ಸಮಯದಲ್ಲಿ ಪ್ರಯಾಣ ಬೆಳೆಸಲು ರೈಲ್ವೆ ಇಲಾಖೆ ನೆರವಾಗಿದೆ.

 

ಇದನ್ನು ಓದಿ: SSLC Exam Evaluation: SSLC ಪರೀಕ್ಷೆ ಮೌಲ್ಯಮಾಪನ ಇಂದಿನಿಂದ ಆರಂಭ., ಫಲಿತಾಂಶ ಬಿಡುಗಡೆ ಮಾಹಿತಿ ತಿಳಿಯಿರಿ! 

Leave A Reply

Your email address will not be published.