Chardham Yatra 2023: ಚಾರ್‌ಧಾಮ್ ಯಾತ್ರೆಗೆ ಹೊರಟಿರುವವರಿಗೆ ಸರಕಾರ ನೀಡಿದೆ ಸಲಹೆ! ಇದನ್ನು ಖಂಡಿತ ಫಾಲೋ ಮಾಡಿ
Chardham Yathra: ಜೀವನದಲ್ಲಿ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆ ಮಾಡಿದರೆ ಜೀವನ ಸಾರ್ಥಕ ಎಂಬುದು ಹಲವರ ನಂಬಿಕೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್ ಯಾತ್ರೆ ಕೂಡ ಒಂದಾಗಿದೆ. ಚಾರ್ ಧಾಮ್ ಯಾತ್ರೆಗಳೆಂದರೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗು ಬದರಿನಾಥ್ ಆಗಿದೆ. ಆದರೆ ಉತ್ತರಾಖಂಡದ ಚಾರ್ ಧಾಮ್ ಗಳು ಹಿಮಾಲಯದ ಎತ್ತರದ ಶಿಖರಗಳ ಮೇಲೆ ನೆಲೆಗೊಂಡಿದ್ದು, ರಾತ್ರಿಯಿಡೀ ಹಿಮಪಾತ ಹಾಗೂ ಕೆಳಗಿನ ಬಯಲು ಪ್ರದೇಶಗಳಲ್ಲಿ ಮಳೆ ಸುರಿಯುತ್ತಲೇ ಇದೆ .
ಅದಲ್ಲದೆ ಉತ್ತರಾಖಂಡದ ಶಿಖರಗಳ ಎತ್ತರವು ಸಮುದ್ರ ಮಟ್ಟದಿಂದ 2700 ಮೀಟರ್‌ಗಿಂತ ಹೆಚ್ಚಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಸ್ಥಳಗಳಿಗೆ ಭೇಟಿ ನೀಡುವ ಭಕ್ತರು ವಿಪರೀತ ಚಳಿ, ಕಡಿಮೆ ಆದ್ರತೆ ಮತ್ತು ಕಡಿಮೆ ಆಮ್ಲಜನಕದ ಅಂಶದಿಂದ ಭಕ್ತರ ಆರೋಗ್ಯವು ಅನೇಕ ಬಾರಿ ಹದಗೆಡುವ ಸಾಧ್ಯತೆ ಇರುತ್ತದೆ.
ಚಾರ್ ಧಾಮ್ ಯಾತ್ರೆಯು ಏಪ್ರಿಲ್ 22 ರಿಂದ ಪ್ರಾರಂಭವಾಗುತ್ತದೆ. ಅಂದರೆ ಏಪ್ರಿಲ್‌ನಿಂದ ನವೆಂಬರ್ ತಿಂಗಳವರೆಗೆ ಯಾತ್ರಾರ್ಥಿಗಳು ಯಾತ್ರೆ ಕೈಗೊಳ್ಳಬಹುದು. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಮುಖ್ಯವಾಗಿ ಹಲವಾರು ಭಕ್ತರು ಭೇಟಿ ನೀಡುವ ಚಾರ್ ಧಾಮ್ ಸ್ಥಳದಲ್ಲಿ ಭಕ್ತರ ಹಿತರಕ್ಷಣೆಗಾಗಿ ಕೆಲವು ಆರೋಗ್ಯ ಸಲಹೆ ನೀಡಲಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ, ಚಾರ್ ಧಾಮ್ ಯಾತ್ರೆಗೆ (Chardham Yathra) ಮುಂಚಿತವಾಗಿ ಯೋಜನೆಯನ್ನು ಸಿದ್ದಪಡಿಸಿ ಮತ್ತು ಪ್ಯಾಕಿಂಗ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಪ್ರಯಾಣದ ಮೊದಲು ಪ್ರತಿದಿನ ಉಸಿರಾಟದ ವ್ಯಾಯಾಮ ಮಾಡಿ, 20-30 ನಿಮಿಷಗಳ ವಾಕಿಂಗ್ ಮಾಡಿ. ನಿಮ್ಮ ವಯಸ್ಸು 50 ವರ್ಷಕ್ಕಿಂತ ಹೆಚ್ಚಿದ್ದರೆ ಮತ್ತು ನೀವು ಅಧಿಕ ಬಿಪಿ, ಶುಗರ್, ಹೃದ್ರೋಗ ಅಥವಾ ಅಸ್ತಮಾದಿಂದ ಬಳಲುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಫಿಟ್‌ನೆಸ್ ಅನ್ನು ಪರೀಕ್ಷಿಸಿಕೊಳ್ಳಿ ಎಂದು ಸರ್ಕಾರ ಸೂಚನೆ ನೀಡಿದೆ.
ಶಿಖರ ಹತ್ತುವಾಗ ಪ್ರತಿ ಒಂದು ಗಂಟೆಗೆ ಅಥವಾ ಪ್ರತಿ ಎರಡು ಗಂಟೆಗಳ ಸ್ವಯಂಚಾಲಿತ ಸಮಯದಲ್ಲಿ 5 ರಿಂದ 10 ನಿಮಿಷಗಳ ವಿರಾಮ ತೆಗೆದುಕೊಳ್ಳಿ.
ಪ್ರವಾಸದ ಸಮಯದಲ್ಲಿ ಔಷಧಿಗಳು, ಪ್ರಿಸ್ಕಿಪ್ಪನ್‌ಗಳು ಮತ್ತು ಎಲ್ಲಾ ಉಪಕರಣಗಳನ್ನು ನಿಮ್ಮೊಂದಿಗೆ ಇರಲಿ .
ನಿಮ್ಮೊಂದಿಗೆ ಬೆಚ್ಚಗಿನ ಉಣ್ಣೆಯ ಬಟ್ಟೆಗಳು, ರೇನ್‌ಕೋಟ್‌ಗಳು ಅಥವಾ ಛತ್ರಿಗಳು ಸದಾ ಜೊತೆಗಿರಲಿ ಮತ್ತು ಅವಶ್ಯಕತೆ ಇದ್ದಲ್ಲಿ ತಪ್ಪದೇ ಉಪಯೋಗಿಸಿ.
ಮುಖ್ಯವಾಗಿ ಚಾರ್ಧಾಮ್ ಮಾರ್ಗದಲ್ಲಿ ಯಾತ್ರಾರ್ಥಿಗಳಿಗಾಗಿ ವೈದ್ಯಕೀಯ ಪರಿಹಾರ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳ ವ್ಯವಸ್ಥೆಗಳಿವೆ. ಅವುಗಳ ನಕ್ಷೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಪ್ರಯಾಣದ ಸಮಯದಲ್ಲಿ, ಯಾರಾದರೂ ಉಸಿರಾಟದ ತೊಂದರೆ, ಎದೆ ನೋವು, ನಿರಂತರ ಕೆಮ್ಮು, ತಲೆತಿರುಗುವಿಕೆ ಅಥವಾ ನಡೆಯಲು ತೊಂದರೆ, ವಾಂತಿ, ದೇಹ ಮರಗಟ್ಟುವಿಕೆ ಅಥವಾ ಶೀತವನ್ನು ಅನುಭವಿಸಿದರೆ, ತಕ್ಷಣ ಹತ್ತಿರದ ವೈದ್ಯಕೀಯ ಕೇಂದ್ರದಲ್ಲಿ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ಉತ್ತರಾಖಂಡದ ಚಾರ್ ಧಾಮ್ ಗಳು ಭಕ್ತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Pratap Simha: ಸೋಮಣ್ಣ ಪರ ಮತಯಾಚನೆ, ಸಾರ್ವಜನಿಕರಿಂದ ತೀವ್ರ ತರಾಟೆ, ಮೂಕರಾಗಿ ನಿಂತ ಪ್ರತಾಪ್ ಸಿಂಹ!!!