Air Travel Tips: ವಿಮಾನ ಪ್ರಯಾಣದ ವೇಳೆ ಈ ವಿಚಾರ ತಿಳಿದಿರಲಿ!!

Air Travel Tips: ವಿಮಾನ (flight) ಪ್ರಯಾಣ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗೂ ಭಯವೂ ಹೌದು, ಅತಿ ಎತ್ತರದಲ್ಲಿ ಸಾಗಬೇಕಾದರೆ ಭಯ ಸಹಜ. ಆದರೆ, ನಿಮಗೆ ತಿಳಿದಿರಬೇಕಾದ ವಿಷಯ ಏನಂದ್ರೆ, ವಿಮಾನ ಪ್ರಯಾಣದ ವೇಳೆ (Air Travel Tips) ಇವುಗಳನ್ನು ಮಾಡಲೇಬಾರದು. ಹಾಗೂ ಈ ಕೆಲವು ವಿಚಾರಗಳು ನಿಮಗೆ ತಿಳಿದಿರಲಿ.

 

ವಿಮಾನದಲ್ಲಿ ಪ್ರಯಾಣ ಮಾಡುವಾಗ ಬಾಯಾರಿಕೆಯಾದರೆ, ಅಲ್ಲಿನ ನೀರು ಕುಡಿಯುವುದು ಉತ್ತಮವಲ್ಲ ಎಂದು ಹೇಳಲಾಗಿದೆ. ಯಾಕೆಂದರೆ, ವಿಮಾನದ ನೀರಿನ ಟ್ಯಾಂಕ್‌ (Water tank) ಆಗಾಗ ತೊಳೆಯುವುದಿಲ್ಲ. ಅಲ್ಲಿನ ನೀರು (Water) ಶುದ್ಧವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ನೀರು ಆರ್ಡರ್ ಮಾಡುವ ಮುನ್ನ ಯೋಚಿಸಿ.

ನಿಮ್ಮ ಬಾಟಲ್ (bottle) ನೀರು ಕುಡಿಯಿರಿ. ವಿಮಾನ ಮೇಲೇರುತ್ತಾ ಹೋದಂತೆ ದೇಹಕ್ಕೆ ಸರಾಗವಾಗಿ ಆಮ್ಲಜನಕದ ಪರಿಚಲನೆ ಆಗುತ್ತಿರಬೇಕು ಅದಕ್ಕಾಗಿ ಹೆಚ್ಚು ನೀರು ಕುಡಿಯುತ್ತಿರಿ.
ಪ್ರಯಾಣದ ವೇಳೆ ಆರೋಗ್ಯದಲ್ಲಿ ಏರುಪೇರಾದರೆ ವಿಮಾನಲ್ಲಿರುವ ಪರಿಚಾರಿಕೆಯರಿಗೆ ತಿಳಿಸಿ. ವಿಮಾನ ಟೇಕ್‌ ಆಫ್‌ ಆಗುವ ಮೊದಲೇ ನಿದ್ದೆ ಮಾಡಬೇಡಿ, ಕಿವಿ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮ ತಲೆನೋವು (headache) ಬರುವ ಸಾಧ್ಯತೆ ಇದೆ.

ವಿಮಾನದಲ್ಲಿರುವ ದಿಂಬು, ಹೊದಿಕೆಯನ್ನು ಬಳಸುವುದು ಉತ್ತಮವಲ್ಲ ಎಂದು ಹೇಳಲಾಗಿದೆ. ವಿಮಾನ ಪ್ರಯಾಣದ ವೇಳೆ ಹಲವಾರು ಜನರು ಹೊದಿಕೆಯನ್ನು ಬಳಸಿರುತ್ತಾರೆ. ಅಲ್ಲದೆ,
ಪ್ರತಿ ಪ್ರಯಾಣದ ನಂತರ ಇದನ್ನು ತೊಳೆದಿರುವುದಿಲ್ಲ.

ಕಾಫಿ (coffee), ಟೀ (tea) ಮಾಡಲು ಯಾವ ನೀರು ಬಳಸಿದ್ದಾರೆ? ಶುದ್ಧವಾಗಿದೆಯಾ? ಗೊತ್ತಿಲ್ಲ. ಹಾಗಾಗಿ ಕಾಫಿ, ಟೀ ಕುಡಿಯಬೇಡಿ.
ಕ್ಯಾನ್ಡ್‌ ಡ್ರಿಂಕ್‌ಗಳನ್ನು ಕುಡಿಯಬಹುದು. ಕೆಫಿನ್‌ ಇರುವ ಪೇಯಗಳು ಎತ್ತರದಲ್ಲಿರುವಾಗ ಕುಡಿಯುವುದು ಒಳ್ಳೆಯದಲ್ಲ. ಇದು ದೇಹವನ್ನು ಡೀಹೈಡ್ರೇಟ್‌ ಮಾಡುತ್ತದೆ. ಜೊತೆಗೆ ಕಾರ್ಬೋನೇಟೆಡ್‌ ಡ್ರಿಂಕ್‌ಗಳೂ ಅಷ್ಟು ಒಳ್ಳೆಯದಲ್ಲ.

ವಿಮಾನ ಪ್ರಯಾಣದ ವೇಳೆ ಕಾಂಟಾಕ್ಟ್‌ ಲೆನ್ಸ್‌ (contact lens) ಧರಿಸುವುದನ್ನು ಆದಷ್ಟು ಕಡಿಮೆ ಮಾಡಿ. ಇಲ್ಲದಿದ್ದರೆ ಕಣ್ಣಿನಲ್ಲಿ ಉರಿತ ಉಂಟಾಗಬಹುದು. ಆದರೆ ಬದಲು ಕನ್ನಡಕ ಧರಿಸಿ. ಇದು ಉತ್ತಮ. ಹಾಗೆಯೇ ಏರ್‌ ವೆಂಟ್‌ ಸ್ವಿಚ್ಚನ್ನು ಆಫ್‌ ಮಾಡಬೇಡಿ. ಯಾಕೆಂದರೆ, ಇದು ನಿಮ್ಮ ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ನಿಮಗೆ ಉತ್ತಮ ಗಾಳಿ ನೀಡುತ್ತದೆ.

ಇದನ್ನೂ ಓದಿ: Actor Chethan: ಗಡೀಪಾರು ಶಿಕ್ಷೆಯಿಂದ ನಟ ಚೇತನ್​ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

Leave A Reply

Your email address will not be published.