Actor Nandamuri Balakrishna wig price: ನಟ ಬಾಲಯ್ಯ ಧರಿಸೋ ಈ ವಿಗ್‌ ಬೆಲೆ ಎಷ್ಟೆಂದು ಗೊತ್ತಾದರೆ ನೀವು ಹೈರಾಣಾಗುವುದು ಖಚಿತ!

Actor Nandamuri Balakrishna Wig price: ಸಿನಿಮಾ (film) ಸಕ್ಸಸ್ ಆಗಬೇಕು ಅಂದ್ರೆ ಆಕ್ಟಿಂಗ್ ಜೊತೆಗೆ ಮುಖದ ಸೌಂದರ್ಯ ಕೂಡ ಇರಬೇಕು. ಈಗಿರುವ ನಟಿಯರೆಲ್ಲಾ ಸುಂದರಿಯರೇ. ನಟರೂ ಏನೂ ಕಮ್ಮಿ ಇಲ್ಲ. ಆದರೆ, ಕೆಲವು ನಟರಿಗೆ ತಲೆ ಕೂದಲು ಇಲ್ಲ, ಹಾಗಾಗಿ ವಿಗ್ (Wig) ಧರಿಸುತ್ತಾರೆ. ಅವರಲ್ಲಿ ತೆಲುಗು ಮಾಸ್ ನಟ ನಂದಮೂರಿ ಬಾಲಕೃಷ್ಣ (actor Nandamuri Balakrishna) ಅವರೂ ಒಬ್ಬರು. ನಂದಮೂರಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು, ಜನರನ್ನು ರಂಜಿಸಿದ್ದಾರೆ, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿಮಗೆ ತಿಳಿದಿರಬಹುದು ಇವರು ಹೆಚ್ಚಾಗಿ ತಮ್ಮೆಲ್ಲಾ ಸಿನಿಮಾಗಳಲ್ಲೂ ವಿಗ್ ಧರಿಸಿರುತ್ತಾರೆ. ಆದರೆ, ಬಾಲಯ್ಯ ಧರಿಸುವ ವಿಗ್ ಬೆಲೆ (Actor Nandamuri Balakrishna Wig price) ಎಷ್ಟು ಗೊತ್ತಾ? ಬೆಲೆ ತಿಳಿದ್ರೆ ನೀವೂ ಶಾಕ್ ಆಗೋದು ಖಂಡಿತ!!.

 

ಬಾಲಯ್ಯನ ಮೇಕಪ್ ಮ್ಯಾನ್ ವಾಸು ಕೊಪ್ಪಶೆಟ್ಟಿ ಸಂದರ್ಶನವೊಂದರಲ್ಲಿ, ನಟನ ವಿಗ್ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. ಬಾಲಯ್ಯ ಸಿನಿಮಾಗಾಗಿ ಕಡಿಮೆ ಗುಣಮಟ್ಟದ ವಿಗ್‌ಗಳನ್ನು ಬಳಸುವುದಿಲ್ಲ. ಬಾಲಕೃಷ್ಣ ಅವರು ಬಳಸುವ ವಿಗ್ ಬೆಲೆ ಲಕ್ಷಗಟ್ಟಲೆ ಇದೆ ಎಂದು ಹೇಳಿದರು.

ವಿಗ್ ಧರಿಸಿದಾಗ ಬಾಲಯ್ಯ‌ ಯುವ ವಯಸ್ಕನಂತೆ ಕಾಣುತ್ತಾರೆ. ಸಿನಿಮಾದಲ್ಲಿ ವಿಗ್ ಧರಿಸಿ ನಟಿಸಿದರೆ, ನೋಡಲು ಸಖತ್ ಆಗಿ ಕಾಣಿಸುತ್ತಾರೆ. ಅವರ ಹೇರ್ ಸ್ಟೈಲ್ ಗೆ ಹಲವು ಅಭಿಮಾನಿಗಳು ಸೋತಿದ್ದಾರೆ. ಅಲ್ಲದೆ, ಸಿನಿಮಾ ಕೂಡ ಸೂಪರಾ ಹಿಟ್ ಆಗುತ್ತದೆ, ಅದಕ್ಕೆಂದೇ ನಿರ್ಮಾಪಕರು ಬಾಲಯ್ಯನ ವಿಗ್‌ಗಾಗಿ ಲಕ್ಷಗಟ್ಟಲೆ ಹಣ ಸುರಿಯುತ್ತಾರೆ.

ಸದ್ಯ ನಟ ನಂದಮೂರಿ ಬಾಲಕೃಷ್ಣ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ಎಲ್ಲಾ ಸಿನಿಮಾಗಳಲ್ಲೂ ವಿಗ್ ಧರಿಸಿ ನಟಿಸುತ್ತಾರೆ. ಆಗಲೇ ಹಿರೋ ಲುಕ್ ಗೆ ಪವರ್ ಬರೋದು. ಮಸ್ತ್ ಆಗಿ ಕಾಣಿಸೋದು.

ಇದನ್ನೂ ಓದಿ: Karnataka Election: ಜಮೀರ್ ವಿರುದ್ಧ ಜಮಾಯಿಸಿದ ಕೊಳೆಗೇರಿ ಜನ: ಚಾಮರಾಜಪೇಟೆ ಕ್ಷೇತ್ರದಲ್ಲಿ ‘ ನಮ್ದುಕೆ ‘ ಈ ಸಲ ಕಷ್ಟ ಐತಿ !

Leave A Reply

Your email address will not be published.