V. Somanna: ಸಿದ್ದರಾಮಯ್ಯರಿಗಾಗಿ ಒದೆ ತಿಂದಿದ್ರಾ ವಿ. ಸೋಮಣ್ಣ ?; ಹಳೆಯ ಒದೆ ವಿಷ್ಯ ನೆನಪಿಸಿದ ಸೋಮಣ್ಣ !
V.Somanna: ಇದೇ ಸಿದ್ದರಾಮಯ್ಯನವರಿಗಾಗಿ ಕೆಲಸ ಮಾಡುವಾಗ ನಾನು ಒದೆ ತಿಂದಿದ್ದೆ ಎಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ಅವರು ಹೇಳಿದ್ದಾರೆ. 2006ರಲ್ಲಿ ಕೆಲಸ ಮಾಡುವಾಗ ನಾನು ಸಿದ್ಧರಾಮಯ್ಯನವರಿಗಾಗಿ ಏಟು ತಿಂದಿದ್ದೇನೆ. ಇದು ಅವರಿಗೆ ನೆನಪಿರಲಿ ಎಂದು ನೆನಪಿಸಿದ್ದಾರೆ ಸೋಮಣ್ಣ.
ಚಾಮರಾಜನಗರದಲ್ಲಿ ಇಂದು ಮಾತನಾಡಿದ ಅವರು, ಸಿದ್ಧರಾಮಯ್ಯನವರು ‘ ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಮ್ಮಿ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ‘ ಎಂದು ನಯವಾಗಿ ಎಚ್ಚರಿಕೆ ನೀಡಿದ್ದಾರೆ. ” ಈಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿಯೂ ಅಲ್ಲ, ನಾವಿಬ್ಬರೂ ಚುನಾವಣಾ ಕಣದ ಅಭ್ಯರ್ಥಿಗಳು ” ಎಂದು ಸೋಮಣ್ಣ ಹೇಳಿದ್ದಾರೆ.
ಬೆಲ್ ಬೆಳಗ್ಗೆಯೇ ಪ್ರಚಾರಕ್ಕೆ ತೆರಳಿದ್ದ ಅವರನ್ನು ಭೇಟಿಯಾದ ಮಾಧ್ಯಮದವರು ಮಾತನಾಡಿಸಿದರು. ಆಗ, ” ಸಿದ್ದರಾಮಯ್ಯನವರು ವಿ. ಸೋಮಣ್ಣ ಯಾರು ಎಂದು ಕೇಳಿದ್ದಾರೆ’ ಎಂದು ಸೋಮಣ್ಣನವರ ಗಮನಕ್ಕೆ ತಂದರು. ಆಗ( V.Somanna ) ಸೋಮಣ್ಣ ಬೇಸರದಿಂದ ಉತ್ತರಿಸಿದ್ದಾರೆ. ನಾನು 2006 ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ಕೆಲಸ ಮಾಡಿದ್ದೆ. ಚಾಮರಾಜ ಕ್ಷೇತ್ರದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ನಾನು ವಾಸ್ತವ್ಯ ಹೂಡಿದ್ದೆ. ಆಗ, ದೇವಲಾಪುರ ಎಂಬಲ್ಲಿ ನಾನು ಸಿದ್ದರಾಮಯ್ಯನವರಿಗಾಗಿ ಮತಯಾಚನೆ ಮಾಡಲು ಹೋದಾಗ ಅಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದರು ” ಎಂದು ಸೋಮಣ್ಣ ಹಳೆಯದನ್ನು ನೆನಪಿಸಿಕೊಂಡಿದ್ದಾರೆ.
” ಅವತ್ತು ನಾನು ಪ್ರಚಾರಕ್ಕೆಂದು ಹೋಗಿದ್ದಾಗ ಸಿದ್ದರಾಮಯ್ಯನವರ ವಿರೋಧಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದರು. ನನ್ನ ಕಾರಿಗೆ ಕಲ್ಲು ಹೊಡೆದಿದ್ದರು. ಆ ಸಂದರ್ಭ ನನ್ನ ಕಾರಿನ ಗಾಜು ಪುಡಿಯಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ನನ್ನ ಜತೆ ಇದ್ದು ಅವರೂ ಪ್ರತಿಭಟನೆಗೆ ಇಳಿದಿದ್ದಾರೆ. ಆಗಿನ ಗಲಾಟೆಯಲ್ಲಿ ಗಲಾಟೆಯಲ್ಲಿ ನನ್ನ ಬಟ್ಟೆಗಳನ್ನೂ ಹರಿದು ಹಾಕಿದ್ದರು ’’ ಎಂದು ಸೋಮಣ್ಣ(V. Somanna) ಇಂದು ವಿವರಿಸಿದ್ದಾರೆ.
“ಅವತ್ತು ಇದೇ ಸೋಮಣ್ಣ ಸಿದ್ದರಾಮಯ್ಯನವರಿಗಾಗಿ ಪ್ರಚಾರ ಮಾಡಿದ್ದು, ಅವರಿಗಾಗಿ ಒದೆ ತಿಂದಿದ್ದು, ಈಗ ಇವೆಲ್ಲವನ್ನೂ ಸಿದ್ದರಾಮಯ್ಯನವರು ಇಂದು ಮರೆತಿದ್ದಾರೆ. ನಾನು ಅವರನ್ನು ಇಂದಿಗೂ ಗೌರವದಿಂದಲೇ ‘ ಸಾಹೇಬರೇ ’ ಎಂದು ಕರೆಯುತ್ತೇನೆ. ಆದರೆ, ಅವರು ನನ್ನನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ”
” ನಾವಿಲ್ಲಿ ಯಾರೂ ಶಾಶ್ವತರಲ್ಲ, ಒಂದಲ್ಲ ಒಂದು ದಿನ ನಾವೆಲ್ಲ ಹೋಗಲೇಬೇಕು. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ನ ಸ್ವಲ್ಪ ಕಡಿಮೆ ಮಾಡ್ಕೋಬೇಕು. ಅವರು ಮನಸ್ಥಿತಿ ಸರಿ ಮಾಡ್ಕೋಬೇಕು. ಗಾಂಭೀರ್ಯತೆಯಿಂದ ಹೆಜ್ಜೆ ಹಾಕಬೇಕು ಅಂತ ಮಾತ್ರ ಹೇಳ್ತೀನಿ ” ಎಂದು ಹೇಳಿದ್ದಾರೆ ಸೋಮಣ್ಣ. ನಾನು ಈಗಲೂ ಯಾವುದೇ ಹಳ್ಳಿಗೆ ಹೋದ್ರೆ ನಾಲ್ಕು ಜನರ ಹೆಸರು ಹೇಳ್ತೀನಿ. ಆ ಮಟ್ಟಿಗೆ ನನಗೆ ಊರಿನ ಸಂಪರ್ಕ ಇದೆ ಎಂದು ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ: Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ?