Karnataka Election: ನಾಮಪತ್ರ ವೇಳೆ ಶೆಟ್ಟರ್‌ ಜೊತೆ ಕಾಣಿಸಿಕೊಂಡ ಕಾರ್ಪೊರೇಟರ್‌ ಅರೆಸ್ಟ್‌!

Chetan Hirekerur: ರಾಜ್ಯ ಚುನಾವಣೆಯ (Karnataka Election) ಕಾವು ಎಲ್ಲೆಡೆ ಗರಿಗೆದರಿದೆ. ಪಕ್ಷ ಗೆಲ್ಲಲು ಅಭ್ಯರ್ಥಿಗಳು ಸಕಲ ಸಿದ್ಧತೆ, ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ, ಇನ್ನೂ ಕೆಲವರು ಬಿಜೆಪಿ (Bjp) ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕೂಡ ಒಬ್ಬರು. ಶೆಟ್ಟರು ಬಿಜೆಪಿಯಿಂದ ಟಿಕೆಟ್ ಕೊಡದಿದ್ದದ್ದಕ್ಕೆ ಮುನಿಸಿಕೊಂಡು ಕಾಂಗ್ರೆಸ್ (Congress) ಪಕ್ಷ ಸೇರಿದ್ದು, ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿದ್ದಾರೆ. ಆದರೆ, ಇದೀಗ ಶೆಟ್ಟರ್ ಗೆ ಆಘಾತವೊಂದು ಉಂಟಾಗಿದೆ.

 

ಹೌದು, ನಾಮಪತ್ರ ವೇಳೆ ಶೆಟ್ಟರ್‌ ಜೊತೆ ಇದ್ದ ಪಕ್ಷೇತರ ಕಾರ್ಪೊರೇಟರ್ ಚೇತನ್ ಹಿರೇಕೆರೂರು (Chetan Hirekerur) ಅವರನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೇತನ್ ಬಂಧನದ ಹಿನ್ನೆಲೆ ಶೆಟ್ಟರ್ ಆತನ ಮನೆಗೆ ಭೇಟಿ ನೀಡಿದ್ದು,
ಆತನ ಕುಟುಂಬದವರೊಂದಿಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ.
ಜೊತೆಗೆ ಹುಬ್ಬಳ್ಳಿಯ ವಕೀಲರ ಸಂಘದ ಪ್ರಚಾರ ಸಭೆಯಲ್ಲಿ ಮಾತನಾಡಿದ ಶೆಟ್ಟರು, “ ನಾನು ಚೇತನ ಹಿರೇಕೆರೂರ್ ಗೆ ಒಳ್ಳೆ ನಾಗರಿಕನಾಗಿ ಬದುಕು ಎಂದು ಹೇಳಿದ್ದೆ. ಮೊದಲು ಚೇತನ್ ಗುಂಡಾಗಿರಿ ಮಾಡ್ತಿದ್ದ. ಆದರೆ, ಐದಾರು ತಿಂಗಳಿಂದ ಅವನು ಗುಂಡಾಗಿರಿ ಎಲ್ಲವನ್ನು ಬಿಟ್ಟಿದ್ದ. ಇತ್ತೀಚೆಗೆ ಅವನ ಮೇಲೆ ಯಾವುದೇ ಕೇಸ್ ಇರಲಿಲ್ಲ, ನಾಮಪತ್ರ ಸಲ್ಲಿಕೆ ವೇಳೆ ನಾನು ಅವನನ್ನು ಕರೆದಿರಲಿಲ್ಲ. ಅವನೇ ನಾಮಪತ್ರ ಸಲ್ಲಿಸೋ ಮೆರವಣಿಗೆಯಲ್ಲಿ ಬಂದಿದ್ದ. ಆದರೆ, ಮರುದಿನ ಆತನನ್ನು ಗುಂಡಾ ಕಾಯ್ದೆ ಅಡಿ ಅರೆಸ್ಟ್ ಮಾಡಿದ್ದಾರೆ. ಶೆಟ್ಟರು ಗೆಲ್ಲಬಾರದು ಎಂದು ಅರೆಸ್ಟ್ ಮಾಡಿಸಿದ್ದಾರೆ. ಅರೆಸ್ಟ್ ಮಾಡೋದಿದ್ರೆ ಆರು ತಿಂಗಳ ಮೊದಲೇ ಮಾಡಬೇಕಿತ್ತು. ಇದಕ್ಕೆಲ್ಲ ಕಾರಣ ಸಂಸದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ನಾಲ್ಕೈದು ಜನ ರೌಡಿಗಳಿಗೇ ಟಿಕೆಟ್ ಕೊಡಲಾಗಿದೆ. ಮೋದಿ ಮಂಡ್ಯಕ್ಕೆ ಬಂದಾಗ ಫೈಟರ್ ರವಿಗೆ ಕೈ ಮುಗಿದಿದ್ದರು. ಆದರೆ, ಗುಂಡಾಗಿರಿ ಎಲ್ಲವನ್ನು ಬಿಟ್ಟಿದ್ದ ಚೇತನ್ ನನ್ನು ಬಂಧಿಸಿದ್ದಾರೆ ಎಂದು ಜೋಶಿ ವಿರುದ್ಧ ಕಿಡಿಕಾರಿದರು. ನಾನು ಹಿಂದೆ ಮತ್ತು ಇನ್ನು ಮುಂದೆ ಕೂಡ ಗುಂಡಾಗಿರಿಗೆ ಸಪೋರ್ಟ್ ಮಾಡಿಲ್ಲ, ಮಾಡಲ್ಲ. ಕಾಂಗ್ರೆಸ್ ನಲ್ಲಿ ಅಗ್ನಿಪರೀಕ್ಷೆಗೆ ಇಳಿದಿದ್ದೇನೆ ಎಂದು ಸಭೆಯಲ್ಲಿ ಶೆಟ್ಟರ್ ಹೇಳಿದರು.

ಇದನ್ನೂ ಓದಿ: Dog Attack Boy: ಏಳು ನಾಯಿಗಳ ದಾಳಿಯಿಂದ ಗೆದ್ದು ಬಂದ ಬಾಲಕ! ಅಷ್ಟಕ್ಕೂ ಈ ಬಾಲಕ ದಾಳಿಯಿಂದ ಪಾರಾಗಲು ಮಾಡಿದ್ದೇನು ಗೊತ್ತಾ?

Leave A Reply

Your email address will not be published.