Health Checkup for women: ಮಹಿಳೆಯರೇ ಗಮನಿಸಿ! ಈ ವೈದ್ಯಕೀಯ ತಪಾಸಣೆಗಳನ್ನು ನೀವು ಮಾಡದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

Health Checkup For Women: ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾ ಹೀನತೆ, ಅಪೌಷ್ಠಿಕತೆ, ಜಂಕ್ ಫುಡ್ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೆಚ್ಚಿನ ಮಹಿಳೆಯರು (Women) ಕಚೇರಿ ಮತ್ತು ಕುಟುಂಬದ ಜವಾಬ್ದಾರಿ (Family Responsibility) ನಡುವೆ ತಮ್ಮ ಆರೋಗ್ಯದ (Health)ಕಡೆ ನಿರ್ಲಕ್ಷ್ಯ ಧೋರಣೆ ತೋರುತ್ತಾರೆ. ಹೀಗಾಗಿ, ಎಷ್ಟೋ ಬಾರಿ ಮಹಿಳೆಯರ ಆರೋಗ್ಯದಲ್ಲಿ ( Women Health) ಸೂಕ್ಷ್ಮ ಆರೋಗ್ಯ ಸಮಸ್ಯೆಗಳು ತಮಗೆಯೇ ತಿಳಿಯದಂತೆ ಕಂಡು ಬರುತ್ತವೆ. ಹೀಗಾಗಿ, ಪ್ರತಿ ವರ್ಷ ಮಹಿಳೆಯರು ತಮ್ಮ ಆರೋಗ್ಯದ ತಪಾಸಣೆ(Health Checkup For Women) ಮಾಡಿಸುವುದು ಬಹು ಮುಖ್ಯ.

ಸಾಮಾನ್ಯವಾಗಿ ವಯಸ್ಸಾದಂತೆ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ವಿವಿಧ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳು ಮುಖ್ಯವಾಗಿವೆ. ಜಡ ಜೀವನಶೈಲಿಯು ದೇಹದ ಕ್ಯಾಲ್ಸಿಯಂ ಅನ್ನು ಕಸಿದುಕೊಳ್ಳುತ್ತದೆ. ವಾಕಿಂಗ್, ಓಟ ಅಥವಾ ಜಾಗಿಂಗ್‌ನಂತಹ ಯಾವುದೇ ದೈಹಿಕ ಚಟುವಟಿಕೆಯಲ್ಲಿ ದೇಹವನ್ನು ತೊಡಗಿಸಿ ಕೊಂಡರೆ, ಅದು ಮೂಳೆಯನ್ನು ಬಲಗೊಳಿಸಲು ನೆರವಾಗುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ-ಭರಿತ ಆಹಾರಗಳನ್ನು ಸೇವಿಸುವುದು ಉತ್ತಮ.

ನಮ್ಮ ದೇಹ ಆರೋಗ್ಯದಿಂದಿರಬೇಕಾದರೆ ಪ್ರತಿಯೊಬ್ಬರು ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು. ಇದು ದೇಹದಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ವಿಶೇಷವಾಗಿ ವಯಸ್ಸು 30 ದಾಟುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.​ಇತ್ತೀಚಿನ ದಿನಗಳಲ್ಲಿ ಸ್ತನ್ಯ ಕ್ಯಾನ್ಸರ್ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿದ್ದು, ವೈದ್ಯಕೀಯ ತಪಾಸಣೆ ಮಾಡಿಸುವುದು ಉತ್ತಮ.ಈ ಸಮಸ್ಯೆ ಕಂಡುಬಂದರೆ ಗುಣಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ, ನೀವು ವೈದ್ಯರಿಂದ ಹಸ್ತಚಾಲಿತ ಸ್ಕ್ರೀನಿಂಗ್ ಅನ್ನು ಮಾಡಿಸಿಕೊಳ್ಳಬಹುದು. ಇದರಿಂದ ರೋಗದ ಲಕ್ಷಣಗಳನ್ನು ಪರಿಶೀಲನೆ ಮಾಡುವ ಜೊತೆಗೆ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಂಡುಬಂದರೆ ಮಹಿಳೆಯರಿಗೆ ಮ್ಯಾಮೊಗ್ರಫಿ ಮಾಡಲು ಸಲಹೆ ನೀಡಲಾಗುತ್ತದೆ.

ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಪ್ರೋಟೀನ್ , ಪೋಷಕಾಂಶಗಳು ಮತ್ತು ಕ್ಯಾಲ್ಸಿಯಂ ಸೇವಿಸಬೇಕು. ಆದರೆ, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ 3 ಕೊರತೆ ಉಂಟಾದರೆ ಮಹಿಳೆಯರಲ್ಲಿ ಮೂಳೆಗಳು ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತವೆ. ಇದರಿಂದಾಗಿ, ಈ ಎರಡೂ ಜೀವಸತ್ವಗಳ ಮಟ್ಟವನ್ನು ಪ್ರತಿ ವರ್ಷ ಪರಿಶೀಲಿಸಬೇಕು. ವಿಟಮಿನ್ ಕೆ, ವಿಟಮಿನ್, ಮೆಗ್ನೀಸಿಯಮ್ ಮತ್ತು ರಂಜಕವು ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಇದರ ಜೊತೆಗೆ ಆಹಾರ, ಉತ್ತಮ ನಿದ್ರೆ ಮತ್ತು ವ್ಯಾಯಾಮ, ಇವೆಲ್ಲವೂ ಒಟ್ಟಾಗಿ ದೇಹವನ್ನು ಒಳಗೆ ಮತ್ತು ಹೊರಗೆ ಬಲವಾಗಿ ಮತ್ತು ಮೂಳೆಗಳನ್ನು ಬಲಿಷ್ಟವಾಗಿ ಇರಿಸುತ್ತವೆ.

ವಯಸ್ಸು 30 ದಾಟುತ್ತಿದ್ದಂತೆ ಬಿಪಿ, ಶುಗರ್ ಅಣ್ಣ ತಮ್ಮಂದಿರ ಹಾಗೆ ಹೆಚ್ಚಿನವರಲ್ಲಿ ಕಂಡುಬರುತ್ತವೆ. ಮಧುಮೇಹ ಮತ್ತು ಹೃದ್ರೋಗವು ಈ ಎರಡು ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಕಟು ಸತ್ಯ. ಹೀಗಾಗಿ, ಈ ಅಪಾಯ ಬರದಂತೆ ತಡೆಯಲು ರಕ್ತದ ಸಕ್ಕರೆಯ HBA1C ಮತ್ತು ಕೊಲೆಸ್ಟ್ರಾಲ್‌ನ ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಿಸುವುದು ಒಳ್ಳೆಯದು.

ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಥೈರಾಯ್ಡ್ ಕೂಡ ಒಂದಾಗಿದ್ದು, ಥೈರಾಯ್ಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡುವಾಗ ಇದರಲ್ಲಿ T3, T4 ಮತ್ತು TSH ಹಾರ್ಮೋನ್‌ಗಳ ಮಟ್ಟವು ಕಾಣಿಸುತ್ತದೆ. ಇವುಗಳ ಉತ್ಪಾದನೆ ಹೆಚ್ಚು ಇಲ್ಲವೇ ಕಡಿಮೆ ಆದಾಗ ಥೈರಾಯ್ಡ್ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ವೈದ್ಯಕೀಯ ತಪಾಸಣೆ ಮಾಡಿಸುವುದು ಒಳ್ಳೆಯದು.

ಮಹಿಳೆಯರಲ್ಲಿ ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆ ಕೂಡ ಕಂಡುಬರುವ ಸಾಧ್ಯತೆಗಳಿದ್ದು, ಹೀಗಾಗಿ, ಇವುಗಳ ಕಾರ್ಯ ಕ್ಷಮತೆಯ ಪರೀಕ್ಷೆ ಮಾಡುವುದು ಉತ್ತಮ. ಸಂಪೂರ್ಣ ರಕ್ತ ಕಣಗಳ ಪರೀಕ್ಷೆಯನ್ನು CBC ಎನ್ನಲಾಗುತ್ತದೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲಾಸ್ಮಾ, ಪ್ಲೇಟ್ಲೆಟ್‌ಗಳು, ಹಿಮೋಗ್ಲೋಬಿನ್ ಮುಂತಾದವುಗಳು ಕಂಡುಬರುತ್ತವೆ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬರುವ ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.

 

ಇದನ್ನು ಓದಿ: 7th Pay Commission: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ!

Leave A Reply

Your email address will not be published.