D.K.Suresh: ಕದನ ಕುತೂಹಲದ ಕನಕಪುರ: ಡಿಕೆ ಎಸ್ ನಾಮಪತ್ರ ತಿರಸ್ಕೃತ !!!
D.K.Suresh : ಕದನ ಕುತೂಹಲ ಮೂಡಿಸಿರುವ ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್(D.K.Suresh) ನಾಮಪತ್ರ ತಿರಸ್ಕ್ರತವಾಗಿದೆ ಎಂಬ ಬ್ರೇಕಿಂಗ್ ಮಾಹಿತಿ ಈಗ ಲಭ್ಯವಾಗಿದೆ.
ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ಬಿ ಫಾರಂ ಸಲ್ಲಿಸದ ಹಿನ್ನೆಲೆ ಅವರ ನಾಮಪತ್ರ ತಿರಸ್ಕ್ರತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಕನಕಪುರದ ಹಾಲಿ ಸಂಸದ ಡಿ.ಕೆ ಸುರೇಶ್ ನಾಮಪತ್ರವನ್ನು ಸಲ್ಲಿಸಿದ್ದರು. ಡಿ.ಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆ ಮುಂಜಾಗೃತವಾಗಿ ಡಿ.ಕೆ ಸುರೇಶ್ ಏಪ್ರಿಲ್ 19ರಂದು ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು.
ಈಗ ಡಿಕೆ ಶಿವಕುಮಾರ್ ಅವರ ನಾಮಪತ್ರ ಅಂಗೀಕಾರವಾಗಿದ್ದು, ಅವರ ತಮ್ಮ ಡಿ.ಕೆ ಸುರೇಶ್ ನಾಮಪತ್ರ ತಿರಸ್ಕ್ರತವಾಗಿದೆ. ಡಿ.ಕೆ ಸುರೇಶ್ ನಾಮಪತ್ರ ತಿರಸ್ಕೃತ ಆಗದೆ ಇದ್ದರೂ, ಹೇಗೂ ಅವರು ನಾಮಪತ್ರ ಹಿಂದೆಗೆದು ಕೊಳ್ಳುತ್ತಿದ್ದರು. ಆದ್ದರಿಂದ ಈಗ ನಾಮಪತ್ರ ತಿರಸ್ಕೃತ ಆದುದರಿಂದ ಏನೂ ತೊಂದರೆ ಇಲ್ಲ ಎನ್ನಲಾಗಿದೆ.
ಈ ನಡುವೆ ಸಿಎಂ ಕಚೇರಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ ಸಾಗಿದೆ ಎಂದು ಡಿಕೆಶಿಯವರು ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಿಎಂ ಬೊಮ್ಮಾಯಿ ಕಚೇರಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದರು.
‘ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ದೊಡ್ಡ ಮಟ್ಟದ ಯತ್ನ ನಡೆಯುತ್ತಿದೆ. ಅದರಲ್ಲಿ ಸಿಎಂ ಕಚೇರಿ, ಸಿಎಂ ಲೀಗಲ್ ಟೀಂ ಅನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ. ನಮ್ಮ ಅಭ್ಯರ್ಥಿಗಳ ಅಫಿಡವಿಟ್ ಡೌನ್ಲೋಡ್ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಿಎಂ ಬೊಮ್ಮಾಯಿಯೇ ನೇರ ಹೊಣೆಯಾಗುತ್ತಾರೆ. ಸಿಎಂ ಕಚೇರಿಯ ಕಾಲ್ ಡೀಟೇಲ್ಸ್ ತೆಗೆದು ತನಿಖೆ ನಡೆಸಬೇಕು, ಈ ಬಗ್ಗೆ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು’ ಎಂದು ಡಿಕೆಶಿ ಅವರು ಒತ್ತಾಯ ಮಾಡಿದ್ದರು.
ಇದನ್ನೂ ಓದಿ: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹತ್ಯೆಗೆ ಪ್ರತೀಕಾರ: ಭಾರತದ ಮೇಲೆ ದಾಳಿ ನಡೆಸಲಾಗುವುದು ಎಂದ ಅಲ್ ಖೈದಾ !