Actor Avinash: ಜಗತ್ತಿನಲ್ಲಿ ಕೇವಲ 2000 ಮಕ್ಕಳು ಮಾತ್ರ ಹೀಗಿರೋದು: ವಿಕಲಾಂಗ ಮಗನ ಬಗ್ಗೆ ಕಣ್ಣೀರಿಟ್ಟ ಅವಿನಾಶ್- ಮಾಳವಿಕಾ !

Actor Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Season 5)ರ ವೀಕೆಂಡ್ ನಲ್ಲಿ ಅವಿನಾಶ್ ಸಾಧಕರ ಕುರ್ಚಿಯಲ್ಲಿ ಆಸೀನರಾಗಲಿದ್ದಾರೆ. ರಂಗಭೂಮಿ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಜೊತೆಗೆ ದೇವರು ವರದಾನವಾಗಿ ನೀಡಿರುವ ತಮ್ಮ ಮಗನ ಬಗ್ಗೆ ತಮ್ಮ ಮನದ ಮಾತುಗಳನ್ನು ಕಾರ್ಯಕ್ರಮದಲ್ಲಿ ಹಂಚಿ ಕೊಂಡಿರುವ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ನಟ ಅವಿನಾಶ್ (actor Avinash) ಅವರು ಈ ವಾರದ ‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ರ ಅತಿಥಿ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ವಿಲನ್ ಹಾಗೂ ಪೊಲೀಸ್ ಪಾತ್ರ ಮಾಡಿ ಮಿಂಚಿರೋ ಅವರಿಗೆ ಸಾಧಕರ ಕುರ್ಚಿ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ. ಈ ವೇಳೆ ಅವರು ತಮ್ಮ ಬದುಕಿನ ಪಯಣ ತೆರೆದಿಟ್ಟಿದ್ದಾರೆ. ಅವಿನಾಶ್ ಮಗ ವಿಶೇಷಚೇತನ. ಅವನ ಪರಿಸ್ಥಿತಿ ನೆನೆದು ಅವಿನಾಶ್ ಹಾಗೂ ಮಾಳವಿಕಾ (Malavika Avinash) ದಂಪತಿ ಭಾವುಕರಾಗಿದ್ದಾರೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ನಟ ಅವಿನಾಶ್ ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸಾಧಕರ ಕುರ್ಚಿಯಲ್ಲಿ ಅವಕಾಶ ಪಡೆದುಕೊಂಡಿದ್ದು, ತಮ್ಮ ಸಾಧನೆಯ ಹಾದಿಯ ನೆನಪುಗಳನ್ನು ಮೆಲುಕು ಹಾಕಲು ಝೀ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮ ಅನುವು ಮಾಡಿಕೊಟ್ಟಿದೆ. ಇದರಿಂದ ಎಷ್ಟೋ ಮಂದಿಗೆ ಸ್ಪೂರ್ತಿಯಾದರು ಅಚ್ಚರಿಯಿಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ ಅವಿನಾಶ್ ಅವರ ಧರ್ಮಪತ್ನಿ ನಟಿ ಮಾಳವಿಕಾ ಅವಿನಾಶ್(Malavika Avinash) ಕೂಡ ಬಣ್ಣದ ಲೋಕದಲ್ಲಿ ನಾನಾ ಪಾತ್ರ ನಿರ್ವಹಣೆ ಮಾಡಿದ್ದಾರೆ. ತಮ್ಮ ಮಗನ ಬಗ್ಗೆ ಮಾತನಾಡಿರುವ ಈ ಜೋಡಿ ಭಾವುಕರಾಗಿದ್ದಾರೆ. ತಮ್ಮ ಪುತ್ರ ವಿಶೇಷ ಚೇತನ ಎಂಬುದನ್ನು ಕೊರತೆ ಎಂದು ಭಾವಿಸದೆ ದೇವರ ಪ್ರಸಾದವೆಂದು ಒಪ್ಪಿಕೊಂಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಜೋಡಿ ನಂ 1 ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿದ್ದ ಸಂದರ್ಭ ಗಣೇಶ ಹಬ್ಬದ ಪ್ರಯುಕ್ತ ನಡೆದ ಮಹಾ ಸಂಗಮದ ವೇಳೆ ಕೂಡ ಮಗನನ್ನು(Avinash Son) ನೆನೆದು ಕಣ್ಣೀರು ಹಾಕಿದ್ದರು. ಇದೀಗ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಂದರ್ಭ ಈ ರೀತಿಯ ಮಕ್ಕಳು ಮನೆಯಲ್ಲಿದ್ದಾಗ ಜಗತ್ತು ಹೇಗೆ ಸ್ವೀಕರಿಸುತ್ತದೆ? ಸಮಾಜದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಕೆಲವೊಮ್ಮೆ ಎಷ್ಟು ತ್ರಾಸದಾಯಕವಾಗುತ್ತದೆ ಎಂಬ ಮನದ ನೋವನ್ನು ನಟ ಅವಿನಾಶ್ ಬಿಚ್ಚಿಟ್ಟಿದ್ದಾರೆ.
‘ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಹೀಗೆ ಇದ್ದಾರೆ. ಒಬ್ಬೊಬ್ಬರು ಒಂದೊಂದು ತರ ಅವನ ಬಗ್ಗೆ ಮಾತನಾಡುವರು. ಕೆಲವೊಂದು ಸಲ ನಮ್ಮ ಮನೆಯಲ್ಲಿಯೇ ಯಾಕೆ ಹೀಗೆ? ಎಂಬ ಪ್ರಶ್ನೆ ಕಾಡುತ್ತದೆ. ಎಲ್ಲರ ಮನೆ ಮಕ್ಕಳು ಶಾಲೆಗೆ ಹೋಗುವ ಹಾಗೆ ಇಲ್ಲವೇ ಸೋಷಿಯಲ್ ಗ್ಯಾದರಿಂಗ್‌ಗಳಿಗೆ ನಾವು ಹೋಗೋದೇ ಇಲ್ಲ. ಹೋದರೆ ಏನು ಮಾತಾಡಬೇಕು ಎಂಬುದೇ ತಿಳಿಯುವುದಿಲ್ಲ. ಒಂದು ವೇಳೆ ಹೊರಗೆ ಹೋದರೆ, ಅವಿನಾಶ್ ಮಗ ಕಣೋ ಇವರು…ಅಲ್ಲೊಂದು ದೇವಸ್ಥಾನವಿದೆ ಅಲ್ಲಿ ಹೋಗಿ ತಾಯಿತ ಕಟ್ಟಿಸಿ’ ಎಂದೆಲ್ಲ ಹೇಳುತ್ತಾರೆ ಎಂದು ಆ ಸಂದರ್ಭ ಮಾನಸಿಕವಾಗಿ ಆಗುವ ವೇದನೆಯನ್ನು ಮಾಳವಿಕಾ ಅವರು ತಿಳಿಸಿದ್ದಾರೆ.

ಹುಟ್ಟುವ ಎಲ್ಲಾ ಮಕ್ಕಳು ಕೂಡ ದೇವರ ಮಕ್ಕಳೇ. ಹೀಗೆ ಹುಟ್ಟಬೇಕು ಅಂತ ಯಾವ ಮಗು ಕೂಡ ಹುಟ್ಟಲ್ಲ. ಇದೇ ಮನೆಯಲ್ಲಿ ಹುಟ್ಟಬೇಕು ಎಂದು ಕೂಡ ಇರುವುದಿಲ್ಲ. ಮಗು ನಮ್ಮ ಪಾಲಿನ ದೇವರ ಪ್ರಸಾದ ಎಂದು ಸ್ವೀಕಾರ ಮಾಡಿದ್ದೇವೆ. ಆದರೆ ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಮಗುವಿನಲ್ಲಿ ಅಡಗಿರುವ ಪ್ರತಿಭೆ. ಸಾಮಾನ್ಯವಾಗಿ ದೇವರು ಯಾವುದೋ ಒಂದನ್ನು ಕಿತ್ತುಕೊಂಡು ಇನ್ನಾವುದೋ ರೂಪದಲ್ಲಿ ವರದಾನವಾಗಿ ವಿಶೇಷ ಶಕ್ತಿಯನ್ನು ನೀಡಿರುತ್ತಾರೆ. ನನ್ನ ಮಗನಿಗೆ ಮಾತಾಡಿದ್ದು ಕೇಳುತ್ತೆ ಆದರೆ ಮಾತನಾಡುವುದಕ್ಕೆ ಆಗುವುದಿಲ್ಲ. ನಡಿಗೆ ಬರ್ತಾ ಇದೆ’ ಎಂದು ಮಾಳವಿಕಾ ಮಾತನಾಡಿದ್ದರು. ದೇವರು ತಮ್ಮ ಮಗನ ಜೊತೆಗಿದ್ದಾನೆ’ ಎಂದು ಅವಿನಾಶ್ ಇದೆ ವೇಳೆ ಹೇಳಿಕೊಂಡಿದ್ದಾರೆ.

ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಬಗ್ಗೆ ಮಗನಿಗೆ ವಿಶೇಷ ಆಸಕ್ತಿ ಇರುವುದನ್ನು ಈ ಜೋಡಿ ಕಂಡುಕೊಂಡಿದ್ದಾರೆ. ಸಂಜೆ 6 ಗಂಟೆ ಮೇಲೆ ಮಾಳವಿಕಾ ಅವರು ರಾತ್ರಿ 8.30ಗಾದರು ಮಗನಿಗೆ ಊಟ ಮಾಡಿಸಬೇಕು ಎಂದು ಹೇಗಾದರೂ ರಾತ್ರಿ ಮನೆಯಲ್ಲಿಯೇ ಉಳಿಯುತ್ತಾರೆ. ಮಗನನ್ನು ಊಟ ಮಾಡಿಸಬೇಕಾದರೆ, ನಾಲ್ಕೈದು ಗ್ಯಾಜೆಟ್‌ನಲ್ಲಿ ಹಾಡುಗಳಿದ್ದು, ಅದರಲ್ಲಿಯೂ ಅವನಿಗೆ ಹಾಡಿನಲ್ಲಿ ಭಕ್ತಿ ಇರುವಂತಹ ಹಾಡೆಂದರೆ ಭಾರೀ ಅಚ್ಚುಮೆಚ್ಚು. ಮಗನಿಗೆ ಅರ್ಥ ಆಗುವುದು ಸಂಗೀತ ಮಾತ್ರ ಎಂದು ಈ ತಾರಾ ಜೋಡಿ ತಮ್ಮ ಮಗನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ : ನಾನು ಹುಟ್ಟಿದಾಗ ಯಾರೂ ಇರಲಿಲ್ಲ, ಹಾರ್ಟ್ ಅಟ್ಯಾಕ್ ಆದಾಗ ಇದ್ದದ್ದ ಇಬ್ಬರೇ…- ನಟ ವಿನೋದ್ ರಾಜ್

Leave A Reply

Your email address will not be published.