Vinod Raj: ನಾನು ಹುಟ್ಟಿದಾಗ ಯಾರೂ ಇರಲಿಲ್ಲ, ಹಾರ್ಟ್ ಅಟ್ಯಾಕ್ ಆದಾಗ ಇದ್ದದ್ದು ಇಬ್ಬರೇ…- ನಟ ವಿನೋದ್ ರಾಜ್
VinodRaj: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಕುರಿತಂತೆ ದಿನಂಪ್ರತಿ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ. ಇತ್ತೀಚೆಗಷ್ಟೆ ನಿರ್ದೇಶಕರಾದ ಪ್ರಕಾಶ್ ರಾಜ್ ಮೆಹು ತಮ್ಮ ಫೇಸ್ಬುಕ್ನಲ್ಲಿ (Facebook) ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು,(Marriage)ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಪೋಸ್ಟ್( The post VinodRaj)ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಲೀಲಾವತಿ ಅವರು ಕೂಡ ಸ್ಪಷ್ಟನೆ ನೀಡಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(Actress Leelavathi) ಅವರ ಮಗನಾದ ವಿನೋದ್ ರಾಜ್(Vinod Raj) ಮದುವೆಯಾಗಿರುವ ಫ್ಯಾಮಿಲಿ ಫೋಟೊವನ್ನು ರಿಲೀಸ್ ಮಾಡಿದ ಬಳಿಕ ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ನಿರ್ದೇಶಕ ಮತ್ತು ಡಾ. ರಾಜ್ ಕುಟುಂಬಕ್ಕೆ ಒಂದು ಕಾಲದಲ್ಲಿ ಅತೀ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಫೇಸ್ಬುಕ್ನಲ್ಲಿ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡಿದ್ದು ಇದೀಗ ವಿನೋದ್ ರಾಜ್ ಮತ್ತು ನಟಿ ಲೀಲಾವತಿ ಅವರು ಪ್ರಕಾಶ್ ರಾಜ್ ಮೇಹು ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಿನಿವುಡ್ ಯೂಟ್ಯೂಬ್ ಚಾನೆಲ್ ನಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರೂ ಪ್ರಕಾಶ್ ರಾಜ್ ಮೇಹು ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್ ರಾಜ್ ಮೇಹು ಅವರು ಮಾಡಿದ ಪೋಸ್ಟ್ ಗಳಿಗೆ ಈಗಾಗಲೇ ಹಿರಿಯ ನಟಿ ಲೀಲಾವತಿ ಅವರು ಪ್ರತಿಕ್ರಿಯೆ ನೀಡಿದ್ದು ಗೊತ್ತೇ ಇದೆ. ಇದರ ಜೊತೆಗೆ ಏಕಾಂಗಿಯಾಗಿ ನಟಿ ಲೀಲಾವತಿ ಮಗನನ್ನು ಹೇಗೆ ಸಾಕಿದರು ಎಂಬುದನ್ನು ವಿನೋದ್ ರಾಜ್ ಈ ಸಂದರ್ಭ ಬಾಯಿಬಿಟ್ಟಿದ್ದಾರೆ.
ಇದರ ಜೊತೆಗೆ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿನೋದ್ ರಾಜ್, “ನೋ ಕಂಪ್ಲೈಂಟ್ಸ್.. ನೋ ಕಮೆಂಟ್ಸ್..ನೋಯಿಸಬೇಡಿ ಎಂದು ಮಾತ್ರ ಹೇಳುತ್ತಿದ್ದೇನೆ” ಎಂದು ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದು,”ನನಗೆ ನನ್ನ ತಾಯಿ ಮುಖ್ಯ ಎಂಬುದು ಕೂಡ ತಪ್ಪಾ?” ಎಂದು ಸಂದರ್ಶನದಲ್ಲಿ ಹೇಳಿದ್ದು, ತನ್ನ ತಾಯಿ ಲೀಲಾವತಿ ಅವರಿಗೆ ಸಿಗಬೇಕಾಗಿದ್ದ ಗೌರವ, ಅವರು ಅನುಭವಿಸಿದ ನೋವಿನ ಬಗ್ಗೆ ಕೂಡ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ತಾನು ಹುಟ್ಟಿದ ಸಮಯದಲ್ಲಿ ಯಾರೂ ತಿರುಗಿಯೂ ನೋಡಿಲ್ಲ ಎಂದು ಕಿಡಿ ಕಾರಿದ್ದಾರೆ.
ನನಗೆ ಮದುವೆಯಾಗಿದೆ ಎಂಬುದನ್ನು ಹೇಳಿಕೊಂಡು ಜಾಹೀರಾತು ಮಾಡುವ ಅವಶ್ಯಕತೆ ನನಗಿಲ್ಲ. ಮನೆಯವರೆಲ್ಲರೂ ಒಪ್ಪಿದ್ದಾರಲ್ಲಾ ಅಷ್ಟು ಸಾಕು ನನಗೆ! ಎಲ್ಲರೂ ನೆಮ್ಮದಿಯಾಗಿಯೇ ಜೀವಿಸುತ್ತಿದ್ದೇವೆೆ. ನನಗೆ ಈ ಬಗ್ಗೆ ಜಾಹೀರಾತು ಬೇಕಾಗಿಲ್ಲ. ನಮ್ಮ ಆತ್ಮೀಯರೆಲ್ಲರಿಗೂ ತಿಳಿದಿದೆ. ಅವರೇನಾದರು ಡಂಗೂರ ಸಾರಿದರೇ? ಇಲ್ವಲ್ಲ ಆದರೆ ಸಮಾಜ ತನ್ನನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಬೇಸರ ತಂದಿದೆ ಎಂಬುದಾಗಿ ವಿನೋದ್ ರಾಜ್ ಯೂಟ್ಯೂಬ್ ಚಾನೆಲ್ ನಲ್ಲಿ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ನೋಡಿಕೊಂಡು ತನ್ನೆಲ್ಲ ನೋವನ್ನು ತಾಯಿ ಮರೆಯುವ ಪ್ರಯತ್ನ ಮಾಡಿದ್ದಾರೆ. ನನ್ನ ತಾಯಿ ಇಷ್ಟು ವರ್ಷ ನನ್ನನ್ನು ಬೆಳೆಸಿದ್ದು, ಸುಸ್ತಾಗಿದ್ದಾರೆ ಅಂತ ಅವರನ್ನು ಬಿಟ್ಟು ಹೋಗಲು ಸಾಧ್ಯವೇ? ಅವರವರ ಮಕ್ಕಳಿಗೆ ಅವರವರ ತಾಯಿ ಮುಖ್ಯ. ಅದೇ ರೀತಿ ನನಗೂ ನನ್ನ ತಾಯಿ ಮುಖ್ಯ ಎಂದು ವಿನೋದ್ ರಾಜ್ ಹೇಳಿಕೊಂಡಿದ್ದಾರೆ. “ನನ್ನ ತಾಯಿ ನನ್ನನ್ನು ಹೆತ್ತ ಸಂದರ್ಭ ಯಾರೊಬ್ಬರೂ ತಿರುಗಿಯು ಸಹ ನೋಡಿಲ್ಲ. ನನ್ನ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಸಂದರ್ಭ ಜೊತೆಗೆ ನನಗೆ ಹಾರ್ಟ್ ಅಟ್ಯಾಕ್(Heartattack) ಆದಾಗ ಇಬ್ಬರೇ ಬಂದಿದ್ದು. ಕಲಾವಿದರಾದ ಶ್ರೀನಿವಾಸ್ ಮೂರ್ತಿ ಮತ್ತು ಕಲಾವಿದರಾದ ಎಸ್ ನಾರಾಯಣ್ ಇಬ್ಬರೇ ಆ ಸಂದರ್ಭ ಸಾಂತ್ವನ ಹೇಳಿದ್ದು, ಬೇರೆ ಯಾರು ಕೂಡ ನಮ್ಮೊಂದಿಗೆ ಮಾತಾಡಿಲ್ಲ. ಹಾಗೆಂದು ನಮಗೆ ಯಾರ ಮೇಲೂ ಕೋಪವಿಲ್ಲ.” ಎಂದು ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಯಾರಿಗಾದರೂ ತೊಂದರೆ ನೀಡಿದ್ದೇವಾ” ಎಂದು ಪ್ರಶ್ನಿಸಿ ವಿನೋದ್ ರಾಜ್, ನಮ್ಮನ್ನು ನಮ್ಮಷ್ಟಕ್ಕೆ ಇರಲು ಬಿಡಿ ಎಂದು ಕೇಳಿಕೊಂಡಿದ್ದಾರೆ.