Day To Plant Tulsi: ಈ ದಿನ ತುಳಸಿ ಗಿಡವನ್ನು ನೆಟ್ಟು ನೋಡಿ, ಲಕ್ಷ್ಮಿ ಒಲಿದು ಬರ್ತಾಳೆ!

Day To Plant Tulsi: ಹಿಂದೂ ಧರ್ಮದಲ್ಲಿ(Hindu) ತುಳಸಿ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ತುಳಸಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಜೊತೆಗೆ ತುಳಸಿ ಗಿಡವನ್ನು ತಾಯಿ ಲಕ್ಷ್ಮಿಯ ರೂಪವೆಂದು ನಂಬಲಾಗುತ್ತದೆ. ಹೀಗಾಗಿ, ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ (Pooja)ಮಾಡುವ ಪದ್ಧತಿ ರೂಢಿಯಲ್ಲಿದೆ. ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು(Tulasi Plant) ನೆಡುವುದು ಮಂಗಳಕರವಾಗಿದ್ದು, ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಧನಾತ್ಮಕತ ಶಕ್ತಿ ಹೆಚ್ಚಾಗಿ ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ, ತುಳಸಿ ಗಿಡವನ್ನು ಸರಿಯಾದ ಕ್ರಮದಲ್ಲಿ ನೆಡದೆ ಇದ್ದಲ್ಲಿ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಹೆಚ್ಚಾಗಬಹುದು. ಹಾಗಾದರೆ, ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು? ಯಾವೆಲ್ಲ ದಿನಗಳಲ್ಲಿ ನೆಟ್ಟರೆ( Day To Plant Tulsi)ಅಶುಭ ಫಲಗಳು ಉಂಟಾಗುತ್ತವೆ ಎಂಬುದನ್ನು ತಿಳಿದಿರುವುದು ಒಳ್ಳೆಯದು.

 

ವಾಸ್ತು ಪ್ರಕಾರ ಕೂಡ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ಲಭ್ಯವಾಗಿ, ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿಂದ ಕೂಡ ಪೂಜನೀಯವಾಗಿ ಕಾಣುವುದನ್ನು ಗಮನಿಸಿರಬಹುದು. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಕೆಲವು ವಿಚಾರಗಳ ಕುರಿತು ಗಮನ ಹರಿಸಬೇಕು.

ಯಾವುದೇ ಪೂಜೆ ಪುನಸ್ಕಾರ ಮಾಡುವಾಗ ದಿನ ಮುಹೂರ್ತ ನೋಡುವಂತೆ ತುಳಸಿ ನೆಡುವಾಗ ಕೂಡ ಮಂಗಳಕರ ದಿನ ಯಾವುದು ಗೊತ್ತಾ?
ತುಳಸಿ ಗಿಡಗಳನ್ನು ನೆಡಲು ಗುರುವಾರ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ವಿಷ್ಣುವಿಗೆ ಸಮರ್ಪಿತವಾದ ದಿನವಾದ ಗುರುವಾರ ತುಳಸಿ ಗಿಡಗಳನ್ನು ನೆಡುವುದರಿಂದ ವಿಷ್ಣುವಿನ ಕೃಪೆ ದೊರೆಯುತ್ತದೆ. ಇದನ್ನು ಹೊರತುಪಡಿಸಿ, ತುಳಸಿ ಗಿಡ ನೆಡಲು ಕಾರ್ತಿಕ ಮಾಸ ಕೂಡ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟು ಇಡೀ ತಿಂಗಳು ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಹಚ್ಚಿದಲ್ಲಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ಇನ್ನುಳಿದ ದಿನಗಳಾದ ಶುಕ್ರವಾರ ತುಳಸಿ ಗಿಡವನ್ನು ನೆಟ್ಟರೆ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎಂಬ ನಂಬಿಕೆಯಿದೆ. ಶನಿವಾರದಂದು ತುಳಸಿ ಗಿಡವನ್ನು ನೆಟ್ಟರೆ ಆರ್ಥಿಕ ಸಮಸ್ಯೆಗಳು ಎದುರಾಗುವುದು ಕಡಿಮೆಯಾಗಲಿದೆ.

ತುಳಸಿ ಗಿಡಗಳನ್ನು ನೆಡಲು ಯಾವ ದಿನ ಸೂಕ್ತವಲ್ಲ ಎಂದು ಗಮನಿಸಿದರೆ, ಏಕಾದಶಿ ಹಾಗೂ ರವಿವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು ಎನ್ನುವುದನ್ನು ನೀವು ಕೇಳಿರಬಹುದು. ಅದೇ ರೀತಿ, ಏಕಾದಶಿಯ ದಿನದಂದು ತುಳಸಿ ಗಿಡವನ್ನು ನೆಡುವುದು ಒಳ್ಳೆಯದಲ್ಲ. ಇದಲ್ಲದೆ, ಸೋಮವಾರ ಮತ್ತು ಬುಧವಾರ ತುಳಸಿ ಗಿಡಗಳನ್ನು ನೆಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ.

ಇದರ ಜೊತೆಗೆ ಸೂರ್ಯಗ್ರಹಣ ಇಲ್ಲವೇ ಚಂದ್ರಗ್ರಹಣದ ದಿನ ಅಪ್ಪಿ ತಪ್ಪಿಯೂ ತುಳಸಿ ಗಿಡವನ್ನು ನೆಡಬಾರದು ಎಂಬ ನಂಬಿಕೆಯಿದೆ.ಈ ದಿನ ತುಳಸಿ ಗಿಡವನ್ನು ಮುಟ್ಟುವುದು ಕೂಡ ಒಳ್ಳೆಯದಲ್ಲ. ಗ್ರಹಣಕ್ಕೂ ಒಂದು ದಿನ ಮೊದಲೇ ತುಳಸಿ ದಳಗಳನ್ನು ಕೀಳುವುದು ಉತ್ತಮ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ನವಗ್ರಹದ ದೋಷಗಳು ನಿವಾರಣೆಯಾಗುವ ಜೊತೆಗೆ, ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿನ ಬಡತನವು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಮನೆಯ ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.

 

ಇದನ್ನು ಓದಿ:  Air India Pilot: ಸ್ನೇಹಿತೆಯನ್ನು ಕಾಕ್ ಪಿಟ್’ಗೆ ಕರೆಸಿ ಕೂರಿಸಿ ಪಾರ್ಟಿ ಮಾಡಲು ಹೇಳಿದ ಏರ್ ಇಂಡಿಯಾ ಪೈಲೆಟ್, DGCA ಗೆ ದೂರು ಕೊಟ್ಟ ಗಗನ ಗೆಳತಿ ! 

Leave A Reply

Your email address will not be published.