Mobile: ಫೋನ್ ಕಳೆದುಹೋದ್ರೆ ಚಿಂತೆಬೇಡ, ಹೀಗೆ ಮಾಡಿದ್ರೆ ಕೆಲವೇ ಗಂಟೆಯಲ್ಲಿ ನಿಮ್ಮ ಫೋನ್ ಮರಳಿ ಸಿಗುತ್ತೆ!!

Mobile: ಇತ್ತೀಚೆಗೆ ಜನರಿಗೆ ಮರೆವು, ಕಳ್ಳತನ (theft) ಇವೆಲ್ಲಾ ಹೆಚ್ಚಾಗಿಯೇ ಇದೆ. ದುಡಿಯಲು ಉದಾಸೀನತೆ ಇರೋರು ಕಳ್ಳತನಕ್ಕೆ ಕೈ ಹಾಕುತ್ತಾರೆ.‌ ಇವರ ಕೆಲಸವೇ ಒಡವೆ, ಫೋನ್ ಕಳ್ಳತನ. ಇನ್ನು ಫೋನ್ ಕಳ್ಳತನವಾದರೆ ಗಾಬರಿಗೊಳ್ಳೋದು ಸಾಮಾನ್ಯ‌. ಕೆಲವೊಮ್ಮೆ ಮರೆತು ಕೂಡ ಫೋನ್ (mobile) ಎಲ್ಲೋ ಬಿಟ್ಟು ಬಂದಿರುತ್ತೀರಾ!!. ಹಾಗಾದ್ರೆ ಆ ಫೋನ್ ಮರುಪಡೆಯೋದು ಹೇಗೆ? ಇನ್ನುಮುಂದೆ ‘ಫೋನ್’ ಕಳೆದು ಹೋದ್ರೆ ಚಿಂತಿಸ್ಬೈಡಿ. ಯಾಕಂದ್ರೆ ಕಳೆದುಹೋದ ಫೋನ್ 24 ಗಂಟೆಯಲ್ಲೇ ನಿಮ್ಮ ಕೈ ಸೇರುತ್ತೆ!!. ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಸಿಇಐಆರ್ (Central Equipment Identity Register) ಎಂಬ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ನಿಮ್ಮ ಮೊಬೈಲ್ ಮರುಪಡೆಯಬಹುದು. ಹೌದು, ಈ ಆಪ್ ನಲ್ಲಿ ಫೋನ್ ನ ವಿವರಗಳನ್ನು ನಮೂದಿಸಿ, ನಂತರ ಕೆಲವೇ ಗಂಟೆಗಳಲ್ಲಿ ಫೋನ್ ಎಲ್ಲಿದೆ ಎಂದು ಟ್ರ್ಯಾಕ್ ಮಾಡಿ, ನಿಮ್ಮ ಕೈ ಸೇರುತ್ತೇ!!.

ಮೊಬೈಲ್ ಕಳೆದುಹೋದಾಗ ಮರುಪಡೆಯೋದು ಹೇಗೆ?
• ಪಿಎಸ್ ನಲ್ಲಿ ದೂರು ದಾಖಲಿಸಬೇಕು.
• ಎಫ್‌ಐಆರ್‌ನ ಪ್ರತಿಯನ್ನು ಸ್ವೀಕರಿಸಬೇಕು.
https://www.ceir.gov.in ವೆಬ್‌ಸೈಟ್ ಗೆ ಭೇಟಿ ನೀಡಿ.
• ಎಡಭಾಗದಲ್ಲಿ ಲಾಸ್ಟ್ ಮೊಬೈಲ್, ಬ್ಲ್ಯಾಕ್ ಸ್ಟೋಲನ್ ಎಂಬ ಆಯ್ಕೆಗೆ ಕ್ಲಿಕ್ ಮಾಡಿ.
• ಫೋನ್ ನ ವಿವರಗಳನ್ನು ನಮೂದಿಸಿ.
• ನಂತರ ನಿಮಗೆ ದೂರು ಸಂಖ್ಯೆ ಸಿಗುತ್ತದೆ.
• ಈ ರೀತಿ ಮಾಡಿದರೆ ಫೋನಿನಲ್ಲಿ ಇನ್ಸರ್ಟ್‌ ಮಾಡಿದ ಬೇರೆ ಸಿಮ್ ಕಾರ್ಡ್ ಕೆಲಸ ಮಾಡುವುದಿಲ್ಲ.
• ಹಾಗೂ ದೂರು ನೀಡಿದವರಿಗೆ ಆ ವಿವರಗಳು SMS ಮೂಲಕ ತಲುಪುತ್ತವೆ.

ನೀವು ಮಾಡಬೇಕಾದ ಕೆಲಸ ಇಷ್ಟೇ. ಈ ರೀತಿ ಮಾಡಿ ನಿಮ್ಮ ಫೋನ್ ಯಾರು ಕೈ ಸೇರಿದೆ ಎಂದು ತಿಳಿದುಕೊಳ್ಳಿ ಮತ್ತು ಬೇಗನೆ ಮರುಪಡೆದುಕೊಳ್ಳಿ. ಹಾಗಾಗಿ ಇನ್ಮುಂದೆ ಫೋನ್ ಕಳೆದುಹೋದರೆ ಚಿಂತೆಪಡಬೇಡಿ.

ಇದನ್ನೂ ಓದಿ: Dasara Film: ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಒಟಿಟಿಯಲ್ಲಿ ಬಿಡುಗಡೆ ; ಯಾವಾಗ?!

Leave A Reply

Your email address will not be published.