Upasana Ramacharan: ರಾಮ್ ಚರಣ್ ಪತ್ನಿಯಿಂದ ಡೆಲಿವರಿ ಬಗ್ಗೆ ಸೀಕ್ರೆಟ್ ರಿವೀಲ್ !!

Upasana: ಟಾಲಿವುಡ್ ಸ್ಟಾರ್ ರಾಮ್ ಚರಣ್ (Ram charan) ಮತ್ತು ಪತ್ನಿ ಉಪಾಸನಾ (Upasana) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 10 ವರ್ಷದ ನಂತರ ಉಪಾಸನಾ ಇದೀಗ ಗರ್ಭಿಣಿಯಾಗಿದ್ದಾರೆ. ಈ ಸಿಹಿಸುದ್ದಿ ತಿಳಿದು ರಾಮ್ ಅಭಿಮಾನಿಗಳೂ ಸಖತ್ ಖುಷಿಪಟ್ಟಿದ್ದಾರೆ.

 

ಈ ಹಿಂದೆ ದಂಪತಿಗಳು ವಿದೇಶಕ್ಕೂ (foreign) ಹೋಗಿ ಸಿಹಿಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ವಿದೇಶದಲ್ಲಿ ಉಪಾಸನಾ ಬೇಬಿಶವರ್ (baby shower) ಕಾರ್ಯಕ್ರವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ಕ್ಯೂಟ್ ಜೋಡಿಯ ಫೋಟೋಸ್ ಕೂಡ ವೈರಲ್ ಆಗಿತ್ತು. ಇದೀಗ ನಟ ರಾಮ್ ಚರಣ್ ಅವರ ಪತ್ನಿ ಡೆಲಿವರಿ ಬಗ್ಗೆ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಉಪಾಸನಾ ಡೆಲಿವರಿ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದು, ಜುಲೈನಲ್ಲಿ ಹೆರಿಗೆ ಆಗಲಿದೆ ಎಂದು ತಿಳಿಸಿದ್ದಾರೆ. ಈ ಸುದ್ಧಿ ಕೇಳಿ ರಾಮ್ ಅಭಿಮಾನಿಗಳು ಇನ್ನಷ್ಟು ಖುಷಿ ಪಟ್ಟಿದ್ದು, ರಾಮ್ ದಂಪತಿ ಮಗುವಿನ ಆಗಮನದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ರಾಮ್ ಚರಣ್ ಪತ್ನಿಯ ಆರೈಕೆಗಾಗಿ ಸಿನಿಮಾದ ಕಡೆಗಿನ ಗಮನದಿಂದ ಹಿಂದೆ ಸರಿಯಲಿದ್ದಾರೆ. ಪತ್ನಿಯ ಹೆರಿಗೆ ಸಮಯದಲ್ಲಿ ಆಕೆಯ ಜೊತೆಗೇ ಇರಲು 3 ತಿಂಗಳ ಕಾಲ ಚಿತ್ರೀಕರಣದಿಂದ ಬಿಡುವು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ರಾಮ್ ಚರಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. RRR ಹಿಟ್ ಸಿನಿಮಾದ ಬಳಿಕ ನಟ ರಾಮ್ ಚರಣ್ ಗೆ ಸಿನಿಮಾಗಳು ಅರಸಿ ಬರುತ್ತಿವೆ. RRR ನಟ ನಿಗೆ ಭಾರೀ ದೊಡ್ಡ ಯಶಸ್ಸು ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು. ಹೌದು, ಆಸ್ಕರ್ ಪ್ರಶಸ್ತಿ ಪಡೆದ RRR ಬಗ್ಗೆ ಹೆಮ್ಮೆ ಎನಿಸದಿರದು. ಇದೀಗ ರಾಮ್ ಚರಣ್ ಶಂಕರ್ ಜೊತೆ ಗೇಮ್ ಚೇಂಜರ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರ ರಾಮ್ ಚರಣ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡಿತ್ತು. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ (kiyara advani) ನಾಯಕಿಯಾಗಿ ನಟಿಸುತ್ತಿದ್ದು, ಸಿನಿಪ್ರಿಯರು ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

 

ಇದನ್ನು ಓದಿ: Ban on sale of liquor : ಮದ್ಯಪ್ರಿಯರೇ ಗಮನಿಸಿ! ರಾಜ್ಯಾದ್ಯಾಂತ ಈ ಮೂರು ದಿನ ಮದ್ಯ ಬಂದ್‌! 

Leave A Reply

Your email address will not be published.