Priyanka Chopra : ರೋಮ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ರೊಮ್ಯಾಂಟಿಕ್ ಸೀನ್! ವಿಡಿಯೋ ವೈರಲ್

Priyanka Chopra : ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್ ಸೆಲೆಬ್ರಿಟಿ ದಂಪತಿ ಇತ್ತೀಚಿಗೆ ತಮ್ಮ ಪ್ರೀತಿಯ ಕ್ಷಣಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಶುಕ್ರವಾರ ಬೆಳಗ್ಗೆ ಹೊಸ ವಿಡಿಯೋವೊಂದನ್ನು ನಿಕ್​ ಜೋನಾಸ್​ ತಮ್ಮ ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

 

ಈ ವಿಡಿಯೋದಲ್ಲಿ ದಂಪತಿಯು ಇಟಲಿಯ ರೋಮ್​ನ ಬೀದಿಗಳಲ್ಲಿ ನಡೆದುಕೊಂಡು ಹೋಗುವುದು, ಒಬ್ಬರನ್ನೊಬ್ಬರು ಚುಂಬಿಸುವುದು ಮತ್ತು ಜೊತೆಯಾಗಿ ಐಸ್​ಕ್ರೀಮ್​ ಸೇವಿಸುವುದನ್ನು ಕಾಣಬಹುದು. ನಿಕ್​ ಗುಲಾಬಿ ಬಣ್ಣದ ಶರ್ಟ್​ ಧರಿಸಿದ್ದು, ಪ್ರಿಯಾಂಕಾ ಚೋಪ್ರಾ ತಿಳಿ ಹಸಿರು ಬಣ್ಣದ ಉಡುಪಿನ ಮೇಲೆ ಕಪ್ಪು ಜಾಕೆಟ್​ ಧರಿಸಿದ್ದರು. ಈ ವಿಡಿಯೋ ಗೆ ‘ರೋಮ್​’ ಎಂದು ಶೀರ್ಷಿಕೆ ಸಹ ನಿಕ್ ಅವರು ನೀಡಿದ್ದಾರೆ.

ಒಟ್ಟಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ನಿಕ್ ಜೋನಸ್ ಜೊತೆ ಹಾಯಾಗಿ ಸಂಸಾರ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಇವರು ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ರೋಮ್ ನಗರಕ್ಕೆ ತೆರಳಿರುವ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತಿದೆ .

ಸದ್ಯ ಈ ವಿಡಿಯೋ ನೋಡಿದ ಕೆಲವೇ ಗಂಟೆಗಳಲ್ಲಿ (Priyanka Chopra Viral Video) ಲಕ್ಷಾಂತರ ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಜೊತೆಗೆ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

 

 

 

 

ಇದನ್ನು ಓದಿ: Railway station: ರೈಲ್ವೆ ನಿಲ್ದಾಣದ ಎಲ್ಲಾ ಕರ್ತವ್ಯಗಳನ್ನು ಗ್ರಾಮಸ್ಥರೇ ನೋಡಿಕೊಳ್ತಾರಂತೆ!

 

Leave A Reply

Your email address will not be published.