Marriage viral Video: ‘ನೋಡ್ಲಿಕೆ ಮಾತ್ರ, ಮುಟ್ಲಿಕೆ ಇಲ್ಲ ‘ : ವರನ ಕೈ ತುಟಿ ಸವರಿತು ಎಂದು ವರನಿಗೆ ಮಂಟಪದಲ್ಲಿ ಹೊಡೆದ ವಧು !

Share the Article

Marriage viral Video: ಇತ್ತೀಚಿನ ಮದುವೆಗಳು ಆಧುನಿಕತೆಯನ್ನು ರೂಢಿ ಮಾಡಿಕೊಳ್ಳುತ್ತಿವೆ. ಮದುವೆಗೆ ಮುನ್ನವೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಅರಶಿನ ಸ್ನಾನ, ಡಿಜೆ, ಮದುವೆಯ ಬಳಿಕ ಫೋಟೋ ಶೂಟ್, ಮಂಟಪದಲ್ಲಂತೂ ಗೆಳೆಯರೆಲ್ಲಾ ಸೇರಿ ಮಾಡುವ ಸಣ್ಣ ಗೇಲಿ ಮಂಟಪಕ್ಕೆ ಚೆಂಡೆ ನಾದದೊಂದಿಗೆ ಎತ್ತಿಕೊಂಡು ಆಗಮನ ಹೀಗೆ ಕೆಲವೊಂದು ವಿಭಿನ್ನತೆ ಕಂಡು ಬರುತ್ತದೆ. ಅದರಲ್ಲೂ ಈಗ ಡೈವೋರ್ಸ್ ಫೋಟೋ ಶೂಟ್ ಕೂಡಾ ಕೆಲವೆಡೆಗಳಲ್ಲಿ ಟ್ರೆಂಡ್ ಆಗಿದೆ. ಅದರ ಜತೆಗೆ ಟ್ರೆಂಡಿಂಗ್ ನಲ್ಲಿ ಇರೋದು(Marriage viral Video) ಮದುಮಕ್ಕಳ ಮಧ್ಯೆ ಮಂಟಪದಲ್ಲೇ ನಡೆಯುವ ಜಗಳ, ಹೊಡೆದಾಟ !

ಹೀಗೆ ಇಲ್ಲೊಂದು ಮದುವೆಯಲ್ಲೂ ಅದೇ ರೀತಿಯಾದ ಘಟನೆಯೊಂದು ನಡೆದಿದ್ದು, ಅಲ್ಲಿ ಪತಿಯಾಗಬೇಕಾದವನ ಕೈ ತುಟಿಗೆ ತಾಕಿತು ಎನ್ನುವ ಕಾರಣಕ್ಕೆ ವಧು ಪತಿಗೆ ಹೊಡೆದಿದ್ದಾಳೆ. ನಂತರ ನವ ದಂಪತಿಗಳ ಮಧ್ಯ ಜಗಳ ಜೋರಾಗಿ ಹತ್ತಿಕೊಂಡಿದೆ. ಮಂಟಪದಲ್ಲಿ ಅವರು ಸರಿಯಾಗಿ ಹೊಡೆದಾಡಿಕೊಂಡ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚಲಾವಣೆಯಲ್ಲಿದೆ.

ಹೌದು, ಇಂತಹದೊಂದು ಘಟನೆ ನಡೆದಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಕ್ಕೆ ಕಾರಣ ಶುಲ್ಲಕವಾದದ್ದು. ಮದುಮಗ ಮದುಮಗಳಿಗೆ ಒತ್ತಾಯಪೂರ್ವಕವಾಗಿ ಸಿಹಿ ತಿನ್ನಿಸಲು ಪ್ರಯತ್ನಿಸಿದ. ಆಗ ಆತನ ಕೈ ಆಕೆಯ ತುಟಿ ಸವರಿದೆ ಎನ್ನುವ ಕಾರಣಕ್ಕೆ ವಾಗ್ವಾದ ಉಂಟಾಗಿದ್ದು, ವಧು ವರನಿಗೆ ಪಟ ಪಟನೆ ಹೊಡೆದಿದ್ದಾಳೆ. ನಂತರ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ವರ ಕೂಡಾ ತಿರುಗಿಸಿ ಬಿಟ್ಟಿದ್ದಾನೆ. ಕಡೆಗೆ ದೊಡ್ಡ ಜಗಳವೇ ವಧು ವರರ ಮಧ್ಯೆ ನಡೆದು ಹೋಗಿದೆ. ಕಡೆಗೆ ವಧು ವರರ ಕಡೆಯವರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದು, ಮದುವೆಗೆ ಮುನ್ನವೇ ಹೀಗೆ ನಡೆದುಕೊಂಡವಳು ಮದುವೆಯ ಬಳಿಕ ಹೇಗೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ.

ಇಂತಹಾ ಘಟನೆ ಕೆಲ ಸಮಯಗಳ ಹಿಂದೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದ್ದು, ಹೂವಿನ ಮಾಲೆ ಹಾಕುವಾಗ ವರನ ಕೈ ತಾಗಿತ್ತು ಎನ್ನುವ ಕಾರಣಕ್ಕೆ ವಧು ಕೋಪಿಸಿಕೊಂಡು ಹಾರ ಮುರಿದುಕೊಂಡು ಜಗಳ ಕಾದು ಮದುವೆ ಮಂಟಪದಿಂದ ನಿರ್ಗಮಿಸಿದ್ದಳು. ಕೊನೆಗೆ ಮದುವೆಯೇ ಮುರಿದುಬಿದ್ದು, ಅದು ದೊಡ್ಡ ಸುದ್ದಿಯಾಗಿತ್ತು.

 

ಇದನ್ನು ಓದಿ: Rahul Gandhi-Basavaraj Bommai: ರಾಹುಲ್‌ ಗಾಂಧಿಗೆ ತಾಕತ್‌ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಮಾಡಲಿ; ಸಿಎಂ ಬೊಮ್ಮಾಯಿ ತಿರುಗೇಟು

Leave A Reply