Viral video: ಕುದುರೆ ಏರಿ ಬಂದ, ದರೋಡೆ ಮಾಡಿ ಹೋದ! ವೀಡಿಯೋ ವೈರಲ್!!!
Robbery viral video: ಸಾಮಾನ್ಯವಾಗಿ ಬೈಕ್ ನಲ್ಲಿ ಬಂದು ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಒಬ್ಬ ಕುದುರೆ ಏರಿ ಮಹಿಳೆಯರ ಕೈಚೀಲ ಕಸಿದುಕೊಂಡು ಹೋಗಿರುವ ವೀಡಿಯೋ( Robbery viral video) ವೈರಲ್(viral) ಆಗಿದೆ.
ಈ ರೀತಿಯ ದರೋಡೆಕೋರರನ್ನು ಈ ಹಿಂದೆ ನೀವು ನೋಡಿರಲು ಸಾಧ್ಯವಿಲ್ಲ, ದರೋಡೆಕೋರ ಕುದುರೆ ಮೇಲೆ ಬಂದು ಮಹಿಳೆಯ ಬ್ಯಾಗ್(bag) ಕಿತ್ತುಕೊಂಡು ಓಡಿ ಹೋಗಿದ್ದಾನೆ.
ಈ ವೀಡಿಯೋ ಸಾಮಾಜಿಕ ಜಾಲತಾಣ(social media) ದಲ್ಲಿ ಸಖತ್ ವೈರಲ್ (viral) ಆಗುತ್ತಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಇತ್ತೀಚೆಗೆ ಕಳ್ಳತನದ ವಿಧಾನವು ಬದಲಾಗುತ್ತಿದೆ. ಕಳ್ಳರು ಲೂಟಿ ಮಾಡಿ ಓಡಿ ಹೋಗುವವರೆಗೆ ಜನರಿಗೆ ಕಳ್ಳತನ ಆಗಿದೆ ಎಂದು ತಿಳಿದೆ ಇರುವುದಿಲ್ಲ.
ಕಳ್ಳರು ಬೈಕ್(bike) ನಲ್ಲಿ ಬಂದು ದಾರಿಯಲ್ಲಿ ಓಡಾಡುವ ಜನರ ಬಳಿ ಇರುವ ವಸ್ತು ಗಳನ್ನು ಚಾಕು, ಚೂರಿ ತೋರಿಸಿ ಲೂಟಿ ಮಾಡುತ್ತಿದ್ದರು. ಆದರೆ ಇಲ್ಲಿ ಒಬ್ಬ ಕುದುರೆ ಮೇಲೆ ಸವಾರಿ ಮಾಡಿಕೊಂಡು ಬಂದು ದರೋಡೆ ಮಾಡಿದ್ದಾನೆ. ಬಹಳ ಹಿಂದಿನ ಕಾಲದಲ್ಲಿ ದರೋಡೆಕೋರರು ಹಿಂಡು ಹಿಂಡಾಗಿ ಕುದರೆಯ ಮೇಲೆ ಬಂದು ಕಳ್ಳತನ ಮಾಡುವುದನ್ನು ನಾವು ಸಿನೆಮಾ(cinema) ದಲ್ಲಿ ನೋಡಿದ್ದೇವೆ.
ಆದರೆ ಸಾಮಾಜಿಕ ಜಾಲತಾಣ (social media) ದಲ್ಲಿ ವೈರಲ್ (viral) ಆಗಿರುವ ವೀಡಿಯೋ(video) ದಲ್ಲಿ ನಿರ್ಜನ ರಸ್ತೆಯಲ್ಲಿ ಮಹಿಳೆ ನೆಡೆದುಕೊಂಡು ಹೋಗುವಾಗ ಕಳ್ಳನೊಬ್ಬ ಕುದರೆ ಸವಾರಿ ಮಾಡಿಕೊಂಡು ಬಂದು ಲೂಟಿ ಮಾಡಿ ಅಲ್ಲಿಂದ ಓಡಿದ್ದಾನೆ.
https://twitter.com/HasnaZarooriHai/status/1648214588876365826?ref_src=twsrc%5Etfw%7Ctwcamp%5Etweetembed%7Ctwterm%5E1648214588876365826%7Ctwgr%5E0fd5459700b4e573eaad6d0b30690759975dc330%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Ftv9kann5901569935123-epaper-dh6c7d9be2cbc7498b9c28a20ecf87eacb%2Fsaamaanyavaagibaikeribandudarodemaadtaareaadareillikudureyamelebandumahileyakaichilakasidukonduhodhavidiyovairal-newsid-n491894448
ನೀವು ಈಗಾಗಲೇ ಈ ವೀಡಿಯೋ ನೋಡಿರಬಹುದು. ವೀಡಿಯೋ(video) ದಲ್ಲಿ ಮಹಿಳೆ ನೆಡೆದುಕೊಂಡು ಹೋಗುವಾಗ ಕಳ್ಳ ಅವಳನ್ನು ಹಿಂಬಾಲಿಸಿ ಬರುತ್ತಾನೆ. ಇದನ್ನು ಗಮನಿಸಿದ ಮಹಿಳೆ ಓಡಿಹೋಗಲು ಪ್ರಯತ್ನಿಸುತ್ತಾಳೆ. ಆದರೆ ಕಳ್ಳ ಅವಳಿಗೆ ಓಡಿಹೋಗುವ ಅವಕಾಶ ನೀಡದೆ ಬಲವಂತವಾಗಿ ಮಹಿಳೆಯಿಂದ ಅವಳ ಹಂಡ್ ಬ್ಯಾಗ್ ಅನ್ನು ಕಸಿದುಕೊಂಡು ಅಲ್ಲಿಂದ ಆರಾಮವಾಗಿ ತಪ್ಪಿಸಿಕೊಳ್ಳತ್ತಾನೆ. ಈ ವಿಡಿಯೋ (video) ನಿಜವೋ ಅಥವಾ ಸ್ಕ್ರಿಪ್ಟ್ ಎಂಬುವುದು ತಿಳಿದಿಲ್ಲ. ಆದರೆ ಈ ವೀಡಿಯೋ ದ ಘಟನೆಯನ್ನು ರಸ್ತೆ ಬದಿ ಇರುವ ಕಂಬದಲ್ಲಿ ಅಳವಡಿಸಲಾದ ಸಿಸಿಟಿವಿ (CCTV) ಕ್ಯಾಮೆರಾ(camera) ದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಈ ವೀಡಿಯೋ ಟ್ವಿಟರ್ HasnaZarooriHai ಖಾತೆಯಲ್ಲಿ ಶೇರ್ (share) ಮಾಡಲಾಗಿದೆ.
Police Raid: ಬೆಂಗಳೂರಿನಲ್ಲಿ ಪೊಲೀಸರಿಂದ 500ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಹಠಾತ್ ದಾಳಿ!