Reserve Bank of India: ಎಂಟು ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಿದ ಆರ್ ಬಿಐ! ನಿಮ್ಮ ಖಾತೆ ಈ ಬ್ಯಾಂಕ್ ನಲ್ಲಿದೆಯೇ ಚೆಕ್ ಮಾಡಿ!
Reserve Bank of India Rules : ನೀವೇನಾದರೂ ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ಈ ಮಾಹಿತಿ ತಿಳಿದಿರುವುದು ಒಳ್ಳೆಯದು. ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಬ್ಯಾಂಕ್(Bank), ಸಹಕಾರಿ ಬ್ಯಾಂಕ್, ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಜೊತೆಗೆ ನಮ್ಮ ಬೆಲೆಬಾಳುವ ವಸ್ತುಗಳನ್ನು, ಆಭರಣಗಳನ್ನು ಲಾಕರ್ (locker) ಮೂಲಕ ಸುಭದ್ರವಾಗಿರುತ್ತದೆ ಎಂದು ನಂಬಿ ಇಡುವುದು ವಾಡಿಕೆ. ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುತ್ತಿದ್ದು, ಆದರೆ, ಈ ಬ್ಯಾಂಕ್‌ಗಳ ಮೇಲೆ ಆರ್‌ಬಿಐ (Reserve Bank of India)ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರೇ ಗಮನಿಸಿ, ನೀವೇನಾದರೂ ಈ ಕೆಳಕಂಡ ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ರಿಸರ್ವ್ ಬ್ಯಾಂಕ್ ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ. 2022-23ರ ಆರ್ಥಿಕ ವರ್ಷದ ಮಾರ್ಚ್ 31ಕ್ಕೆ ಅಂತ್ಯವಾಗುವ ವಹಿವಾಟು ಅವಧಿಯಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ಆರ್‌ಬಿಐ (RBI)ರದ್ದುಗೊಳಿಸಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ 114 ಬಾರಿ ದಂಡ ವಿಧಿಸಿದ್ದು, ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಸಲುವಾಗಿ ಕಾರ್ಯ ನಿರ್ವಹಿಸಿದರು ಕೂಡ ಈ ಬ್ಯಾಂಕ್‌ಗಳಲ್ಲಿ ಅಕ್ರಮಗಳು ವರದಿಯಾಗಿ ಬೆಳಕಿಗೆ ಬಂದ ಹಿನ್ನೆಲೆ ಆರ್‌ಬಿಐ ಕಠಿಣ ಕ್ರಮಗಳನ್ನು (Reserve Bank of India Rules)ಕೈಗೊಂಡಿದೆ.
ಕಳೆದ ಹಲವು ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್‌ಬಿಐ ನಿಗಾ ವಹಿಸಿದೆ. ಕೇಂದ್ರೀಯ ಬ್ಯಾಂಕ್ 2021-22ರಲ್ಲಿ 12 ಸಹಕಾರಿ ಬ್ಯಾಂಕ್‌ಗಳು, 2020-21ರಲ್ಲಿ 3 ಸಹಕಾರಿ ಬ್ಯಾಂಕ್‌ಗಳು ಮತ್ತು 2019-20ರಲ್ಲಿ ಎರಡು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದು ಮಾಡಿದೆ. ಸದ್ಯ,ಆರ್‌ಬಿಐ ಕೆಲವು ಬ್ಯಾಂಕ್‌ಗಳ ಲೈಸೆನ್ಸ್ ರದ್ದು ಮಾಡಿದ್ದು, ಜೊತೆಗೆ ಕೆಲವು ದೊಡ್ಡ ಬ್ಯಾಂಕ್ ಗಳ ಮೇಲೆಯು ಕೂಡ ಭಾರೀ ದಂಡ ವಿಧಿಸಿದೆ. ರಿಸರ್ವ್ ಬ್ಯಾಂಕ್ ನ ಈ ಕ್ರಮದಿಂದ ಸಹಕಾರಿ ಬ್ಯಾಂಕ್ ಗಳು ದೊಡ್ಡ ಪ್ರಮಾಣದ ನಷ್ಟ ಭರಿಸಬೇಕಾದ ಸ್ಥಿತಿ ಎದುರಾಗಿದೆ. ಹೆಚ್ಚಿನ ಬಂಡವಾಳದ ಕೊರ ತೆಯ ಸಮಸ್ಯೆ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ನಿಯಮಗಳನ್ನು ಪಾಲನೆ ಮಾಡದಿರುವ ಹಿನ್ನೆಲೆ ಕೆಲ ಸಹಕಾರಿ ಬ್ಯಾಂಕ್ ಗಳ ಪರವಾನಗಿಗಳನ್ನು RBI ರದ್ದುಗೊಳಿಸಿದೆ.ಕಳೆದ ಒಂದು ವರ್ಷದಲ್ಲಿ ಎಂಟು ಬ್ಯಾಂಕ್‌ಗಳ ಪರವಾನಗಿಯನ್ನ ಆರ್ ಬಿಐ ರದ್ದು ಮಾಡಿದೆ.
ಈ ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಲಾದ ಸಹಕಾರಿ ಬ್ಯಾಂಕ್ ಹೀಗಿದೆ:
1. ಮುಧೋಳ ಸಹಕಾರಿ ಬ್ಯಾಂಕ್
2. ಮಿಲತ್ ಕೋ-ಆಪರೇಟಿವ್ ಬ್ಯಾಂಕ್
3. ಶ್ರೀ ಆನಂದ್ ಕೋ-ಆಪರೇಟಿವ್ ಬ್ಯಾಂಕ್
4. ರೂಪಾಯಿ ಸಹಕಾರಿ ಬ್ಯಾಂಕ್
5. ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
6. ಲಕ್ಷ್ಮಿ ಸಹಕಾರಿ ಬ್ಯಾಂಕ್
7. ಸೇವಾ ವಿಕಾಸ ಸಹಕಾರಿ ಬ್ಯಾಂಕ್
8. ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್
ಭವಿಷ್ಯದಲ್ಲಿ ಆದಾಯದಲ್ಲಿ ಕೊರತೆಯಾಗುವ ಸಂಭವದ ಹಿನ್ನೆಲೆ ಈ ಸಹಕಾರಿ ಬ್ಯಾಂಕ್ ಗಳ ಲೈಸನ್ಸ್ ರದ್ದು ಮಾಡಲಾಗಿದ್ದು, ಈ ಬ್ಯಾಂಕ್‌ಗಳ ಇಬ್ಬಂದಿ ನಿಲುವು, ಹಣಕಾಸು ವ್ಯವಹಾರ ದುರ್ಬಲವಾಗಿರುವ ಜೊತೆಗೆ .ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ ಕೂಡ ಕಂಡು ಬಂದಿದೆ. ಹೀಗಾಗಿ, ಈ ಸಹಕಾರಿ ಬ್ಯಾಂಕ್ ಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಿಯಮಾವಳಿಗಳನ್ನು ಯಾವುದನ್ನು ಪಾಲಿಸದೇ ಕ್ಯಾರೇ ಎನ್ನದೇ ತನ್ನದೆ ಧೋರಣೆ ಪಾಲಿಸುತ್ತಿರುವ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್ ಗಳ ವಿರುದ್ದ ರಿಸರ್ವ್ ಬ್ಯಾಂಕ್ ಕ್ರಮಕೈಗೊಳ್ಳಲು ಮುಂದಾಗಿದೆ.