Rahul Gandhi-Basavaraj Bommai: ರಾಹುಲ್ ಗಾಂಧಿಗೆ ತಾಕತ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಮಾಡಲಿ; ಸಿಎಂ ಬೊಮ್ಮಾಯಿ ತಿರುಗೇಟು
Rahul Gandhi-Basavaraj Bommai : ಬೀದರ್ : ವಿಧಾನಸಭೆ ಚುನಾವಣೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ಹೀಗಾಗಿ ರಾಜಕೀಯ ನಾಯಕರ ಚುನಾವಣಾ ಕಾವು ರಂಗೇರಿದೆ. ಈ ನಡುವೆಯೇ ಮೂರು ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದೆ.
ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಿಎಂ ಬಸವರಾಜ(Rahul Gandhi-Basavaraj Bommai) ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿಗೆ ತಾಕತ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಯಾವುದೇ ಡ್ಯಾಮೇಜ್ ಆಗಿಲ್ಲ, ಕಂಟ್ರೋಲ್ ಮಾಡೋದೆನಿದೆ. ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವಂತ ಕೆಲಸ ನಮ್ಮ ಸರ್ಕಾರ ಮಾಡಿದೆ. ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದೆ ಎಂದಿದ್ದಾರೆ.
ಲಿಂಗಾಯತ ಸಮಾಜವನ್ನ ಒಡೆಯುವಂತ ಕೆಲಸ ಕಾಂಗ್ರೆಸ್ ಮಾಡಿದೆ. . ಕಾಂಗ್ರೆಸ್ 50 ವರ್ಷದಿಂದ ಯಾವ ಲಿಂಗಾಯತರನ್ನು ಸಿಎಂ ಆಗಿ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಎಸ್.ನಿಜಲಿಂಗಪ್ಪ ಹೊರತುಪಡಿಸಿದರೇ ಲಿಂಗಾಯತ ಸಿಎಂ ಯಾರೂ ಕೂಡ ಆಗಿಲ್ಲ. ಇದರ ಜೊತೆ ಕಾಂಗ್ರೆಸ್ ವಿರೇಂದ್ರ ಪಾಟೀಲ್ರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎಂದು ಕಾಂಗ್ರೆಸ್ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಇತ್ತ, ವಿಜಯಪುರದಲ್ಲಿ ಲಿಂಗಾಯತ ಸಿಎಂ ಎಂಬ ಬೊಮ್ಮಾಯಿಯವರ ಹೇಳಿಕೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಲಿಂಗಾಯತ ನಾಯಕ ಎಂ.ಬಿ ಪಾಟೀಲ್ ಮಾತನಾಡಿ ‘ಬಸವರಾಜ ಬೊಮ್ಮಾಯಿಯವರು ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್. ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಕೆಳಗಿಳಿದಾಗ ನಾನೇ ಮೊದಲು ವಿರೋಧ ಮಾಡಿದೆ. ನಂತರ ಶಾಮನೂರು ಶಿವಶಂಕರಪ್ಪ ಹಾಗೂ ಸ್ವಾಮೀಜಿಗಳು ವಿರೋಧ ಮಾಡಿದರು. ಆಗ ಎಚ್ಚೆತ್ತುಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು.