PM Kisan Yojana: ರೈತರೇ 14ನೇ ಪಿಎಂ ಕಿಸಾನ್‌ ಯೋಜನೆ ಕಂತಿನ ಬಿಡುಗಡೆಗೆ ಮೊದಲು ಈ ಕೆಲಸ ಮಾಡಿ!

PM Kisan Samman Yojana: ದೇಶದ ರೈತರನ್ನು(Farmers)ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity)ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan Samman Yojana) ಮೂಲಕ ಆರ್ಥಿಕ ನೆರವನ್ನು ಕೂಡ ನೀಡುತ್ತಿರುವುದು ಗೊತ್ತಿರುವ ಸಂಗತಿ.

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಏಪ್ರಿಲ್​ನಿಂದ ಜುಲೈ ನಡುವೆ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಆಗಬಹುದು. ಈ ಯೋಜನೆಯ ಫಲಾನುಭವಿಗಳು ಕೆಲ ವಿಚಾರಗಳ ಬಗ್ಗೆ ಮಾಹಿತಿ ತಿಳಿದಿರುವುದು ಒಳ್ಳೆಯದು.

ರೈತರ ನೆರವು ನೀಡುವಲ್ಲಿ ಬಹಳ ಜನಪ್ರಿಯವಾಗಿರುವ (Popular Scheme For Farmers)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಕೇಂದ್ರ ಸರ್ಕಾರ ಇಲ್ಲಿಯವರೆಗೆ 2,000 ರೂಗಳ 13 ಕಂತುಗಳನ್ನು ಬಿಡುಗಡೆ ಮಾಡಿದೆ. 2019ರ ಫೆಬ್ರವರಿಯಲ್ಲಿ ಜಾರಿ ಮಾಡಿದ ಅನುಸಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದೆ.

ಈ ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದರ ಜೊತೆಗೆ ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದೆ. ಇದೀಗ ಈ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದಿರಬೇಕಾದ ಕೆಲ ವಿಚಾರಗಳು ಹೀಗಿವೆ:

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ ಅತೀ ಸುಲಭ ಹಾಗೂ ಸರಳವಾಗಿದೆ.
# ಮೊದಲಿಗೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಪಿಎಂ ಕಿಸಾನ್ https://pmkisan.gov.in/ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಬೇಕು.
# ಆ ಬಳಿಕ, ನೀವು ಫಾರ್ಮರ್ ಕಾರ್ನರ್ ನಲ್ಲಿ ಹೊಸ ರೈತ ನೋಂದಣಿಯ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಪರದೆಯ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಎಲ್ಲಾ ಅವಶ್ಯಕ ವಿವರಗಳನ್ನು ನಮೂದಿಸಬೇಕು.

# ಮುಂದಿನ ಹಂತದಲ್ಲಿ ಇಮೇಜ್ ಕೋಡ್ ನಮೂದಿಸಿದ ಬಳಿಕ, ನೀವು ಒಟಿಪಿ ಬಟನ್ ಅನ್ನು ಕ್ಲಿಕ್ ಮಾಡಿಕೊಂಡು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿದರೆ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.

ಕೇಂದ್ರ ಸರ್ಕಾರ 14ನೇ ಕಂತಿನ ಹಣ ಬಿಡುಗಡೆಗೆ ಮೊದಲೇ ರೈತರು ಕೆಲವು ಪ್ರಕ್ರಿಯೆಗಳನ್ನು ಮುಗಿಸಿರುವುದು ಉತ್ತಮ.

* ಒಂದು ವೇಳೆ ನೀವು ಇ–ಕೆವೈಸಿ(E- KYC) ಮಾಡಿಸಿಲ್ಲ ಎಂದಾದರೆ ತಕ್ಷಣವೇ ಆ ಕೆಲಸ ಮಾಡಿಬಿಡಿ
* ನಿಮ್ಮ ಕೃಷಿ ಭೂಮಿಯ ದಾಖಲೆಯನ್ನು ಕೃಷಿ ವಿಭಾಗದಿಂದ ವೆರಿಫಿಕೇಶನ್ ಮಾಡಿಸುವುದನ್ನು ಮರೆಯದಿರಿ.
* ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಈ ಯೋಜನೆಯ ಬೆನಿಫಿಷಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಒಂದು ವೇಳೆ, ಬೆನಿಫಿಶಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ಈ ಯೋಜನೆಗೆ ಹೆಸರು ನೊಂದಾಯಿಸಬೇಕಾಗುತ್ತದೆ.
* ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಿ.

ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಆಗುವುದು ಯಾವಾಗ?
ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡುತ್ತಿದೆ. ರಾಜ್ಯ ಸರ್ಕಾರ 2 ಹೆಚ್ಚುವರಿ ಕಂತುಗಳನ್ನು ರಾಜ್ಯದ ರೈತರಿಗೆ ನೀಡುತ್ತಿದ್ದು, ಹೀಗಾಗಿ, ಕರ್ನಾಟಕದ ರೈತರು ಒಂದು ವರ್ಷದಲ್ಲಿ ಒಟ್ಟು 10,000 ರೂ ಹಣವನ್ನು ಪಡೆಯಬಹುದು.

ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 13 ಕಂತುಗಳು ಬಿಡುಗಡೆಯಾಗಿದ್ದು, ಮೊದಲ ಕಂತು 2018 ಡಿಸೆಂಬರ್​ನಲ್ಲಿ ಬಿಡುಗಡೆಯಾಗಿದೆ. ಈ ಸಂದರ್ಭ 3.16 ಕೋಟಿ ರೈತರ ಖಾತೆಗೆ ಹಣ ಜಮೆ ಆಗಿತ್ತು. ಏಪ್ರಿಲ್ 1ರಂದು ಆರಂಭವಾಗುವ ಹಣಕಾಸು ವರ್ಷದಲ್ಲಿ 3 ಬಾರಿ ಪಿಎಂ ಕಿಸಾನ್ ಯೋಜನೆಯ ಕಂತುಗಳು ಬಿಡುಗಡೆಯಾಗುವುದು ವಾಡಿಕೆ. ಏಪ್ರಿಲ್ 1ರಿಂದ ಜುಲೈ 31ರವರೆಗಿನ ಅವಧಿಯ ನಡುವೆ ರೈತರ ಖಾತೆಗೆ ಹಣ ಜಮಾ ಆಗುತ್ತದೆ. ಅದೇ ರೀತಿ, ಆಗಸ್ಟ್ 1ರಿಂದ ನವೆಂಬರ್ 30ರ ನಡುವೆ ಒಂದು ಕಂತು ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಡಿಸೆಂಬರ್ 1ರಿಂದ ಮಾರ್ಚ್ 31ರ ಅವಧಿಯಲ್ಲಿ ಮತ್ತೊಂದು ಕಂತು ಬಿಡುಗಡೆಯಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ತಿಳಿಯುವ ವಿಧಾನ ಹೀಗಿದೆ:

ಮೊದಲು ಪಿಎಂ ಕಿಸಾನ್ ಪೋರ್ಟಲ್​ಗೆ (https://pmkisan.gov.in/) ಭೇಟಿ ನೀಡಬೇಕು. ಅಲ್ಲಿ ಬೆನಿಫಿಷಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ, ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ನೊಂದಣಿ ಸಂಖ್ಯೆಯಲ್ಲಿ ಬಾಕ್ಸ್​ನಲ್ಲಿ ತುಂಬಬೇಕು. ಕ್ಯಾಪ್ಚಾ ಕೋಡ್ ಹಾಕಿ, ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆಯ ಬಳಿಕ, ಈ ಯೋಜನೆಯ ನಿಮ್ಮ ಎಲ್ಲಾ ವಿವರ ಪರದೆ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ: Reserve Bank of India: ಎಂಟು ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಿದ ಆರ್ ಬಿಐ! ನಿಮ್ಮ ಖಾತೆ ಈ ಬ್ಯಾಂಕ್ ನಲ್ಲಿದೆಯೇ ಚೆಕ್ ಮಾಡಿ!

Leave A Reply

Your email address will not be published.