Hassan Politics: ಬಿಜೆಪಿ ರಣತಂತ್ರ ಬದಲು: ಹೊಳೆ ನರಸಿಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಟಕ್ಕರ್ !

Hassan Politics:  ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಹಾಸನದಲ್ಲಿ ತನ್ನ ರಣ ತಂತ್ರವನ್ನು ಬದಲು ಮಾಡಿದೆ ಬಿಜೆಪಿ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯು, ಹಾಸನದಲ್ಲಿ ಕೊನೆ ಕ್ಷಣದಲ್ಲಿ ಆಟಕ್ಕೆ ಅನೂಹ್ಯ ತಿರುವು ನೀಡಿದೆ.

ಹಾಸನದಲ್ಲಿ, ಇನ್ನೇನು ನಾಮಪತ್ರ ಸಲ್ಲಿಕೆಗೆ ಗಡುವು ಮುಕ್ತಾಯಗೊಳ್ಳಲು ಕೆಲವೇ ಗಂಟೆಗಳಿದ್ದಾಗ ಹಾಸನ(Hassan Politics) ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಪ್ರೀತಂ ಗೌಡ ಅವರ ಪತ್ನಿ ಕಾವ್ಯ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ತಾನೆ ಬಂದ ಮಾಹಿತಿಯ ಪ್ರಕಾರ ಈಗ ಮತ್ತೊಂದು ಅಚ್ಚರಿಯ ಹೆಜ್ಜೆಯಿಟ್ಟಿದೆ ರಾಜ್ಯ ಬಿಜೆಪಿ. ಅಂದ ಹಾಗೆ ಹಾಸನದಲ್ಲಿ ಜೆಡಿಎಸ್ ನಲ್ಲಿ ಸ್ವರೂಪ್ ಎಂಬ ಹುಡುಗ ಸ್ಪರ್ಧೆಗೆ ನಿಂತಿರೋದು ಪಕ್ಕಾ ಆಗಿದೆ.

ಹೊಳೆನರಸಿಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ರೇವಣ್ಣ ಅವರ ಭದ್ರಕೋಟೆ. ಅದು ಒಂದು ಕಾಲದಲ್ಲಿ ದೇವೇಗೌಡರು ಪ್ರತಿನಿಧಿಸಿದ ಕ್ಷೇತ್ರ. ಇಂತಹ ಹೊಳೆ ನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧವೇ ಸಮರ ಸಾರಲು ಬಿಜೆಪಿ ಸಜ್ಜಾಗಿದೆ. ರೇವಣ್ಣ ವಿರುದ್ಧ ಬಿಜೆಪಿ ಪ್ರೀತಮ್ ಗೌಡ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದೆ.

ಚಾಲೆಂಜ್ ರಾಜಕೀಯಕ್ಕೆ ಹೆಸರಾದ ಬಿಜೆಪಿಯಿ ಕನಕಪುರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಆರ್ ಅಶೋಕ್ ಹಾಗೂ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿ ಪ್ರಯೋಗಿಸಿದ್ದ ಅಸ್ತ್ರವನ್ನೇ ಹೊಳೆನರಸಿಪುರದಲ್ಲೂ ಬಿಜೆಪಿ ಪ್ರಯೋಗಿಸುತ್ತಿರುವ ಬಿಜೆಪಿ ಪ್ರೀತಮ್ ಗೌಡ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.ಪ್ರೀ

ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಹಾಸನದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇಂದು ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಹೊಳೆನರಸೀಪುರ ಕ್ಷೇತ್ರಕ್ಕೂ ನಾಮಪತ್ರ ಸಲ್ಲಿಸಲಿದ್ದಾರೆ. ತನ್ನ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು ಬಿಜೆಪಿ. ಆದರೆ ದಿಢೀರ್ ಆಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಟ್ಟುಗಳು ಬದಲಾಗಿದೆ. ಪ್ರೀತಂ ಪತ್ನಿ ಕಾವ್ಯ ಕೂಡಾ ಈಗ ನಾಮಪತ್ರ ಸಲ್ಲಿಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಸೆಳೆದ ಪ್ರೀತಂ ಹಾಸನದಲ್ಲಿ ಕಮಲಕ್ಕೆ ಬಲವಾದ ಓಟ್ ಬ್ಯಾಂಕ್ ಅನ್ನು. ಸೃಷ್ಟಿಸಿದ್ದಾರೆ. ಚುನಾವಣೆಗೆ ನಾಮಪತ್ರಕ್ಕೂಮುನ್ನ, ‘ ಸ್ವತಃ ರೇವಣ್ಣ ಹಾಸನಕ್ಕೆ ಬಂದು ಸ್ಪರ್ಧಿಸಿದರೂ ಅವರ ವಿರುದ್ಧ ನಾನು 50,000 ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ‘ ಎಂದು ಪ್ರೀತಮ್ ಗೌಡ ಸವಾಲು ಹಾಕಿದ್ದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರೇವಣ್ಣ ಪತ್ನಿ ಭವಾನಿಯವರು ಜೆಡಿಎಸ್ ಟಿಕೆಟ್ ಗಾಗಿ ಕಾದಿದ್ದರು. ಕೊನೆಗೆ ಆ ಟಿಕೆಟ್ ಸ್ವರೂಪ್ ಎಂಬ ಯುವಕನ ಪಾಲಾಗಿದೆ.

 

ಇದನ್ನು ಓದಿ:  Akshaya Trithiya: ಅಕ್ಷಯ ತೃತೀಯದಂದು ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡ್ಬೇಡಿ 

Leave A Reply

Your email address will not be published.