Karnataka Election: ಕೊನೆಯ ಹಂತದಲ್ಲಿ ನಡೆದೇ ಹೋಯಿತು ಈ ಕ್ಷೇತ್ರದ ಅಭ್ಯರ್ಥಿ ಬದಲಾವಣೆ! ಯಾಕೆ?

Congress candidate: ರಾಜ್ಯ ಚುನಾವಣೆಗೆ (Karnataka election) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಮಧ್ಯೆ ಇದೀಗ ಕಾಂಗ್ರೆಸ್​ ಪಕ್ಷದಿಂದ ಕೋಲಾರ ಜಿಲ್ಲೆಯ ಮುಳಬಾಗಿಲ ಅಭ್ಯರ್ಥಿಯನ್ನು (Congress candidate) ಬದಲಾವಣೆ ಮಾಡಲಾಗಿದೆ.

 

ಕಾಂಗ್ರೆಸ್​ ಪಕ್ಷ (Congress) ಬುಧವಾರ (ನಿನ್ನೆ) 5ನೇ ಪಟ್ಟಿ ಬಿಡುಗಡೆ ಮಾಡಿದ್ದು (Congress 5th list released), ಪುಲಕೇಶಿನಗರ, ಕೆಆರ್ ಪುರಂ, ಮುಳಬಾಗಿಲು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಮುಳಬಾಗಿಲು ಕ್ಷೇತ್ರಕ್ಕೆ ಡಾ.ಬಿ.ಸಿ. ಮುದ್ದು ಗಂಗಾಧರ್ (Dr. B.C. Muddu Gangadhar) ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಆದರೆ, ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಕೊನೆ ಕ್ಷಣದಲ್ಲಿ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಗಂಗಾಧರ್ ಅವರನ್ನು ಬದಲಾವಣೆ ಮಾಡಲಾಗಿದೆ. ಹೌದು, ಕಾಂಗ್ರೇಸ್ ಪಕ್ಷ ಡಾ.ಬಿ.ಸಿ ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣ (Adinarayan) ಎಂಬವರಿಗೆ ಟಿಕೆಟ್ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Military Hotel: ಮಿಲಿಟರಿ ಹೋಟೆಲ್’ನಿಂದ ಮೋದಿ ಚುನಾವಣಾ ಪ್ರಚಾರ, ಡಿಕೆಶಿಗೆ ಟಾಂಗ್ ಟಾಂಗ್ !

Leave A Reply

Your email address will not be published.