HD Revanna : ರೇವಣ್ಣ ಭವಾನಿ ಕಾಲಿಗೆ ಅಡ್ಡಡ್ಡ ಬಿದ್ದ ಸ್ವರೂಪ್, ಮುನಿಸು ಮಂಗ ಮಾಯ

HD Revanna  : ಹಾಸನ ವಿಧಾನಸಭಾ ಕ್ಷೇತ್ರದ(Karnataka Elections 2023) ಟಿಕೆಟ್‌ಗೆ ಸಂಬಂಧಿಸಿ ಕಳೆದ ಕೆಲವು ಸಮಯಗಳಿಂದ ಗೊಂದಲ ವಾತಾವರಣ ಮತ್ತು ವಾದಗಳು ನಡೆಯುತ್ತಲೇ ಇದ್ದು, ಅದಲ್ಲದೆ
ಹಾಸನದ ಟಿಕಟ್ ತನಗೇ ಬೇಕೆಂದು ಭವಾನಿ ರೇವಣ್ಣ ಅವರು ಹಠ ಹಿಡಿದಿದ್ದರು. ಆದರೆ ಸದ್ಯ ಎಚ್.ಡಿ. ಕುಮಾರಸ್ವಾಮಿ ಅವರು ಮಾತ್ರ ಈ ಟಿಕೆಟ್ ಎಚ್.ಪಿ. ಸ್ವರೂಪ್ ಅವರಿಗೇ ಟಿಕೆಟ್ ಎಂದು ಸ್ಪಷ್ಟಪಡಿಸಿದ್ದರು.

ಇವೆಲ್ಲದರ ನಡುವೆ ದೇವೇಗೌಡರ ಕುಟುಂಬ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತವೆ ಎನ್ನುವಷ್ಟು ಗಂಭೀರ ತಿರುವುಗಳನ್ನು ಪಡೆದ ಪ್ರಕರಣದಲ್ಲಿ ಅಂತಿಮವಾಗಿ ಎಚ್.ಡಿ ಕುಮಾರಸ್ವಾಮಿ ನಿಲುವಿಗೆ ಜಯವಾಗಿತ್ತು. ಅಂದರೆ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಎಚ್‌.ಡಿ. ರೇವಣ್ಣ ಅವರು ಸ್ವಲ್ಪ ಬೇಸರದಿಂದಲೇ ಈ ನಿರ್ಧಾರವನ್ನು ಸ್ವೀಕರಿಸಿದ್ದರು.

ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಗೆ ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಸ್ವರೂಪ್ ಅವರು ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ಎಲ್ಲರ ಗಮನ ಸೆಳೆದಿದೆ. ಅದೇ ಸಂದರ್ಭದಲ್ಲಿ ರೇವಣ್ಣ (HD Revanna )ಮತ್ತು ಭವಾನಿ ಅವರು ಕೂಡಾ ಮನಸಾರೆ ಆಶೀರ್ವಾದ ಮಾಡಿದರು.

ಮುಖ್ಯವಾಗಿ ಜೆಡಿಎಸ್‌ನ ಈ ಸಭೆ ಹೆಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊದಲು ಸ್ವರೂಪ್ ಅವರು ಎಚ್.ಡಿ. ರೇವಣ್ಣ ಅವರ ಕುಟುಂಬದ ಜತೆ ಮಾತನಾಡುವ ಮೂಲಕ ಯಾವ ಬೇಸರವನ್ನೂ ಇಟ್ಟುಕೊಳ್ಳದೆ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು. ನಾನು ಯಾವ ತಪ್ಪನ್ನೂ ಮಾಡಿಲ್ಲ ನಿಮ್ಮ ವಿಚಾರದಲ್ಲಿ ಒಂದು ತಪ್ಪು ಮಾತನಾಡಿಲ್ಲ, ನಿಮ್ಮಬಗ್ಗೆ ತುಂಬ ಗೌರವವಿದೆ ಎನ್ನುವುದನ್ನು ಸ್ಪಷ್ಟಪಡಿಸಿದರು.

ಒಟ್ಟಾರೆ ಪ್ರಕರಣದಲ್ಲಿ ಸ್ವರೂಪ್ ಅವರ ನಡೆ ನುಡಿಗಳು ಕೂಡಾ ಅದೇ ರೀತಿಯಲ್ಲಿದ್ದವು. ಯಾರು ಎಷ್ಟೇ ಕೆದಕಿದರೂ ರೇವಣ್ಣ ಕುಟುಂಬದ ವಿರುದ್ಧ ಒಂದೇ ಒಂದು ಮಾತು ಆಡಿರಲಿಲ್ಲ. ಸದ್ಯ ಸ್ವರೂಪ್ ಅವರು ಗುರುವಾರ ಹಾಸನದಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸುವ ಕ್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾಗಿಯಾಗುವ ಸಾಧ್ಯತೆ ಇದೆ.

 

ಇದನ್ನು ಓದಿ : Ayanur Manjunath: ಬಿಜೆಪಿ ಕೈ ತಪ್ಪಿದಕ್ಕೆ ಆಯನೂರು ಮಂಜುನಾಥ್‌ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ

Leave A Reply

Your email address will not be published.