Surya Grahana 2023: ಸೂರ್ಯಗ್ರಹಣದ ನಂತರ ಈ ಕೆಲಸ ಮಾಡಿದರೆ ನಕಾರಾತ್ಮಕ ಪರಿಣಾಮ ಬೀಳುತ್ತೆ! ತಲೆ ಸ್ನಾನ ಮಾಡಿದ್ರೆ ಏನಾಗುತ್ತೆ ಗೊತ್ತಾ?

Surya Grahana 2023 : ಚಂದ್ರನು ತನ್ನ ಕಕ್ಷೆಯ ಚಲನೆಯ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವಿನ ಪ್ರವೇಶವೇ ಸೂರ್ಯ ಗ್ರಹಣ ಸಂಭವಿಸುವ ವಿದ್ಯಾಮಾನವಾಗಿದೆ. ಮುಖ್ಯವಾಗಿ ಸೂರ್ಯಗ್ರಹಣವನ್ನು ಖಗೋಳ ಘಟನೆ ಎಂದು ಸಹ ವಿಶ್ಲೇಷಣೆ ಮಾಡಲಾಗಿದೆ. ಹಿಂದೂ ಧರ್ಮದಲ್ಲಿ ಗ್ರಹಣಗಳಿಗೆ ತನ್ನದೇ ಆದ ಮಹತ್ವವಿದೆ.

ಗ್ರಹಣ ಸಮಯದಲ್ಲಿ ಕೆಲವು ದಿನನಿತ್ಯ ಚಟುವಟಿಕೆ ಮಾಡುವುದರಿಂದ ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಸದ್ಯ 2023 ವರ್ಷದ ಮೊದಲ ಸೂರ್ಯಗ್ರಹಣವು (Surya Grahana 2023) ಏಪ್ರಿಲ್ 20ರ ಗುರುವಾರ ವೈಶಾಖ ಅಮವಾಸ್ಯೆಯಂದು ಸಂಭವಿಸಲಿದ್ದು, ಸೂರ್ಯ ಗ್ರಹಣವು ಬೆಳಗ್ಗೆ 7.5ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ12.29ಕ್ಕೆ ಕೊನೆಗೊಳ್ಳುತ್ತದೆ. ಆದರೆ ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡುವುದರಿಂದ ಆಗುವ ಪರಿಣಾಮವನ್ನು ಇಲ್ಲಿ ತಿಳಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣದ ಸೂತಕ ಅವಧಿಯು 12ಗಂಟೆ ಮೊದಲು ಪ್ರಾರಂಭವಾಗುತ್ತದೆ. ಇನ್ನು ಗ್ರಹಣದ ಸಮಯದಲ್ಲಿ ಮತ್ತು ನಂತರ ಮಾಡುವ ಕೆಲವು ಕೆಲಸಗಳು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗಳಿಂದ ಕಾಪಾಡುತ್ತವೆ. ಅಲ್ಲದೆ ಗ್ರಹಣದ ದುಷ್ಪರಿಣಾಮಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ.

ಶಾಸ್ತ್ರ ಪ್ರಕಾರ ಗ್ರಹಣ ಮುಗಿದ ನಂತರ ತಲೆ ಸ್ನಾನ ಮಾಡಬೇಕು ಎಂದು ತಿಳಿಸಲಾಗಿದೆ. ಯಾಕೆಂದರೆ ಗ್ರಹಣದ ನಂತರ ತಲೆ ಸ್ನಾನ ಮಾಡುವುದರಿಂದ ರಾಹುವಿನ ಅಪವಿತ್ರ ಛಾಯೆಯು ಮಾಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು ಎನ್ನಲಾಗಿದೆ.

ಅದಲ್ಲದೆ ಗ್ರಹಣದ ನಂತರ ಸ್ನಾನ ಮಾಡುವುದು ಅದರ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ಸೂಕ್ಷ್ಮಜೀವಿಗಳು ಹೆಚ್ಚಾಗುತ್ತದೆ, ಹೀಗಾಗಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಇತ್ಯಾದಿ ನಾಶಪಡಿಸಲು ಸಹಕಾರಿಯಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.

ಇನ್ನು ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಪರಿಸರದಲ್ಲಿ ನೆಲೆಸುತ್ತವೆ ಆದ್ದರಿಂದ ಈ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಲು ಸೂರ್ಯಗ್ರಹಣದ ನಂತರ ಬಟ್ಟೆ ಒಗೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಅಲ್ಲದೆ ಮನೆಯ ಮೂಲೆ ಮೂಲೆಗಳಲ್ಲಿ ಗಂಗಾಜಲ ಸ್ಪರ್ಶ ಮಾಡಲಾಗುತ್ತದೆ.

Leave A Reply

Your email address will not be published.