Prathap Simha: ಸಿದ್ರಾಮಣ್ಣ ನೀವೇನಾದ್ರೂ ಬಾದಾಮಿಯಲ್ಲಿ ಹುಟ್ಟಿ, ಗೋಲಿ ಆಡ್ತಾ ಬೆಳುದ್ರಾ? ಸಿದ್ದುಗೆ ಗುದ್ದಿದ ಪ್ರತಾಪ್ ಸಿಂಹ!

Prathap Simha : ಕಾಂಗ್ರೆಸ್(Congress) ನಾಯಕರು ಏನೇ ಹೇಳಿಕೆ ಹರಿಬಿಟ್ಟರೂ ಖಾರವಾಗಿಯೇ ಪ್ರತ್ಯುತ್ತರ ನೀಡಲು ಸದಾ ಸಿದ್ಧರಿರುವ ಬಿಜೆಪಿ(BJP) ನಾಯಕ, ಸಂಸದ ಪ್ರತಾಪ್ ಸಿಂಹ(Prathap Simha) ಅವರು ಇದೀಗ ಸಿದ್ದುಗೆ ಗುದ್ದು ಕೊಡುವ ನಿಟ್ಟಿನಲ್ಲಿ ‘ಇಟಲಿ(Itali)ಯಲ್ಲಿ ಹುಟ್ಟಿದ ಸೋನಿಯಾಗಾಂಧಿ(Sonia Gandhi) ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಬಹುದು, ಅಲಹಾಬಾದ್​(Alahabad) ನಲ್ಲಿ ಜನಿಸಿದ ಇಂದಿರಾ ಗಾಂಧಿ(Indhira Gandhi) ಚಿಕ್ಕಮಗಳೂರಿಗೆ(Chikkamagalure) ಬರಬಹುದು. ವಿದೇಶಿ ಅಮ್ಮನಿಗೆ ದಿಲ್ಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ(Rahul Gandhi) ಕೇರಳದ ವಯನಾಡಿಗೆ ಹೋಗಬಹುದು’ ಎಂದು ಮಾತಿನಲ್ಲೇ ಕುಟುಕಿದ್ದಾರೆ.

ಹೌದು, ವರುಣಾ(Varuna) ಕ್ಷೇತ್ರಕ್ಕೆ ಸೋಮಣ್ಣ(V Somanna) ನವರನ್ನು ತನ್ನ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದಾಗಿನಿಂದಲೂ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯನವರು ಸೋಮಣ್ಣನವರು ವರುಣಾ ಕ್ಷೇತ್ರಕ್ಕೆ ನಂಟು ಇಲ್ಲದವರು, ಇಲ್ಲಿನ ಜನರೊಂದಿಗೆ ಬಾಂಧವ್ಯ ಹೊಂದಿಲ್ಲದವರು, ಒಟ್ಟಾರೆಯಾಗಿ ಹೊರಗಿನವರು ಎಂದು ಬಿಂಬಿಸಲು ಯತ್ನಿಸುತ್ತಿದೆ. ಇದರ ಬೆನ್ನಲೇ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ಇದನ್ನು ಸಮರ್ಥಿಸಿದ್ದರು. ಮಇದಕ್ಕೆ ಟಾಂಗ್ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ,ಎಂದಿನ ತಮ್ಮ ಶೈಲಿಯಲ್ಲೇ ಟೀಕೆ ಮಾಡಿ “ಕಳೆದ ಚುನಾವಣೆಯಲ್ಲಿ ನೀವೂ ಬಾದಾಮಿಗೆ ಹೋಗಿದ್ದಿರಿ. ನೀವು ಅಲ್ಲಿನ ಮಣ್ಣಿನೊಂದಿಗೆ ನಂಟು ಹೊಂದಿದವರಾಗಿದ್ದಿರಾ, ನೀವೇನು ಅಲ್ಲಿ ಗೋಲಿ ಆಡಿ ಬೆಳೆದಿದ್ದಿರಾ?” ಎಂದು ಕೇಳಿದ್ದಾರೆ.

ಅಂದಹಾಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಟ್ವೀಟ್ ಮಾಡಿ, ರಾಮನಗರ ಮೂಲದ, ಬೆಂಗಳೂರು ನಗರದಲ್ಲಿ ರಾಜಕೀಯ ಮಾಡಿಕೊಂಡಿದ್ದ ಸೋಮಣ್ಣ ಅವರನ್ನು ಬಿಜೆಪಿ ಒತ್ತಾಯಪೂರ್ವಕವಾಗಿ ವರುಣ ಕ್ಷೇತ್ರಕ್ಕೆ ಕರೆತಂದು ಕಣಕ್ಕಿಳಿಸಿದೆ. ಇದು ಬಿಜೆಪಿಯ ಹರಕೆಯ ಕುರಿ ಮತ್ತು ವರುಣಾದ ಮನೆ ಮಗನ ನಡುವಿನ ಚುನಾವಣೆ. ನನ್ನ ಜನ ಹಣಕ್ಕೆ ಮರುಳಾಗಿ ತಮ್ಮವರನ್ನು ಕೈಬಿಡುವವರಲ್ಲ ಎಂದು ಹೇಳಿದ್ದರು.

ಅಲ್ಲದೆ, ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ‌ ಮಣ್ಣಿನ‌ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ನನ್ನ ಗೆಲುವಿಗೆ ಇದಕ್ಕಿಂತ ಹೆಚ್ಚೇನು ಬೇಕು? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ಟೀಟ್ ಮಾಡುವ ಮೂಲಕವೇ ಸಿದ್ದುವನ್ನು ಕೆಣಕಿರೋ ಸಿಂಹ “ಸಿದ್ರಾಮಣ್ಣ, ಇಟಲಿಯಲ್ಲಿ ಹುಟ್ಟಿದ ಸೋನಿಯಾಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಬಹುದು, ಅಲಹಾಬಾದ್ನಲ್ಲಿ ಜನಿಸಿದ ಇಂದಿರಾ ಗಾಂಧಿ ಚಿಕ್ಕಮಗಳೂರಿಗೆ ಬರಬಹುದು, ವಿದೇಶಿ ಅಮ್ಮನಿಗೆ ದಿಲ್ಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಹೋಗಬಹುದು, ಸೋಮಣ್ಣ ವರುಣಾಕ್ಕೆ ಬರಬಾರದಾ? ಅದಿರಲಿ, ಬದಾಮಿಯಲ್ಲೂ ನೀವು ಹುಟ್ಟಿ ಗೋಲಿ ಆಡಿದ್ದಿರಾ?” ಎಂದು ಅವರು ಕೇಳಿದ್ದಾರೆ.

ಇಷ್ಟೇ ಅಲ್ಲದೆ ಸಿದ್ದರಾಮಯ್ಯನವರ ಈ ಟ್ವೀಟ್ ಗೆ ಕೇವಲ ಪ್ರತಾಪ್ ಸಿಂಹ ಮಾತ್ರವಲ್ಲ, ಅನೇಕ ಟ್ವೀಟರಿಗರು ವ್ಯಂಗ್ಯವಾಡಿದ್ದಾರೆ. ಪ್ರತಾಪ್ ಸಿಂಹ ಅವರು ಟ್ವೀಟ್ ಮೂಲಕ ಟೀಕಿಸುವ ಮುನ್ನವೇ, ಅನೇಕ ಜನರು, ನಿಮ್ಮನ್ನು ಚಾಮುಂಡೇಶ್ವರಿಯಿಂದ ಒದ್ದು ಓಡಿಸಿದ್ದಾಗ, ನೀವು ಬಾದಾಮಿಗೆ ಹೋಗಿ ರಾಜಕೀಯವಾಗಿ ಪುನರ್ಜನ್ಮ ಪಡೆದು ಬಂದಿರಿ. ಆ ಬಾದಾಮಿಯು ನೀವು ಹುಟ್ಟಿದ ಜಾಗವೋ ಅಥವಾ ನಿಮ್ಮ ಪಿತೃಗಳ, ಪೂರ್ವಿಕರ ಊರೋ ಎಂದು ಕೇಳಿದ್ದರು. ಇನ್ನೂ ಕೆಲವರು, ಸಿದ್ದರಾಮಯ್ಯನವರು, ಕ್ಷೇತ್ರದ ಜನತೆ ನನ್ನನ್ನು ಕೈ ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿರುವುದನ್ನು ನೋಡಿದರೆ ಅವರು ಸೋಲುವುದು ಗ್ಯಾರಂಟಿ ಅಂತ ಅನ್ನಿಸಿರಬೇಕು. ಅದಕ್ಕೇ ಭಯದಿಂದ ಹೀಗೆ ಟ್ವೀಟ್ ಮಾಡಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

Leave A Reply

Your email address will not be published.