Peacock Viral video: ನವಿಲಿನ ಮೊಟ್ಟೆ ಕದಿಯಲು ಬಂದ ಹೆಣ್ಮಕ್ಕಳು! ಗತಿ ಕಾಣಿಸಿದ ತಾಯಿ ನವಿಲು!
Peacock Viral video: ನಮ್ಮ ರಾಷ್ಟೀಯ ಪಕ್ಷಿ ನವಿಲಿನ (peacock) ಬಗ್ಗೆ ಗೊತ್ತೇ ಇದೆ. ನವಿಲು ತುಂಬಾ ಸಾದು ಪಕ್ಷಿ ಎಂದು ಹೇಳುತ್ತಾರೆ. ಆದರೆ ನವಿಲು (peacock) ಕೂಡ ಮನುಷ್ಯರ ಮೇಲೆ ಹಲ್ಲೆ ಮಾಡುತ್ತದೆ. ನೀವು ಇನ್ನೂ ಎಲ್ಲೇ ಹೋದರೂ ನವಿಲನ್ನು ಕೆಣಕ ಬೇಡಿ.
ನೀವೇನಾದರೂ ನವಿಲನ್ನು (peacock) ಕೆಣಕಿದರೆ ಅದು ನಿಮ್ಮನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಹೌದು ಇಲ್ಲಿ ಇಬ್ಬರು ಹುಡುಗಿಯರು ಇರಲಾರದೆ ಇರುವೆ ಬಿಟ್ಟುಕೊಂಡ್ರು ಅನ್ನೊ ಹಾಗೇ ನವಿಲನ್ನು (peacock) ಕೆಣಕಿ ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣ (social media) ದಲ್ಲಿ ಈ ನವಿಲಿನ ವೀಡಿಯೋ ಫುಲ್ ವೈರಲ್ (Peacock Viral video) ಆಗಿದೆ. ನವಿಲಿನ (peacock) ಮೊಟ್ಟೆಯನ್ನು ಕದಿಯಲು ಹೋಗಿದ್ದ ಯುವತಿಯರಿಗೆ ಏನ್ ಆಯ್ತು ನೋಡಿ.
ಯುವತಿಯರಿಬ್ಬರು ಮರದಲ್ಲಿದ್ದ ನವಿಲಿನ ಮೊಟ್ಟೆ(egg) ಯನ್ನು ಕದಿಯಲು ಹೋಗಿದ್ದರು, ಒಬ್ಬಳು ಮರ ಹತ್ತಿ ಮೊಟ್ಟೆಯನ್ನು ನವಿಲಿನ ಗೂಡಿನಿಂದ ಕದಿಯುತ್ತಿದ್ದಳು ಮತ್ತೊಬ್ಬಳು ಮರದ ಕೆಳಗೆ ನಿಂತಿದ್ದಳು, ಅಷ್ಟರಲ್ಲಿ ನವಿಲು(peacock) ಸ್ಥಳಕ್ಕೆ ಸರಿಯಾಗಿ ಬಂದಿದೆ. ಮೊಟ್ಟೆ( egg) ಕದಿಯುತ್ತಿದ್ದ ಮಹಿಳೆಯ ಮೇಲೆ ನವಿಲು ಹಾರಿ ದಾಳಿ ಮಾಡಿದೆ. ಇಷ್ಟೇ ಅಲ್ಲದೆ ಮರದ ಕೆಳಗೆ ಇದ್ದ ಮಹಿಳೆ ಮೇಲೆಯೂ ಕೂಡ ದಾಳಿ ಮಾಡಿದೆ.
ಈ ವಿಡಿಯೋವನ್ನು ದಿ ಫಿಲಿಸ್ ಎಂಬ ಟ್ವಿಟರ್ (twitter) ಖಾತೆಯಲ್ಲಿ ಶೇರ್ (share) ಮಾಡಲಾಗಿದೆ. ಇಲ್ಲಿವರೆಗೆ ಈ ವಿಡಿಯೋ 1 ಲಕ್ಷ 27 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮತ್ತು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ (comments) ಗಳು ಕೂಡ ಸಿಕ್ಕಿದೆ. ಈ ಘಟನೆ ಎಲ್ಲಿ ನಡೆದಿದೆ ಎಂದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
https://twitter.com/TheFigen_/status/1648058830830424091?ref_src=twsrc%5Etfw%7Ctwcamp%5Etweetembed%7Ctwterm%5E1648058830830424091%7Ctwgr%5Ee019f6ae9fc0dafcae8ccd89a037603ebc7638bb%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fsuvarnanewstv-epaper-dh161e333039824748ba6e915b443e0ba8%2Fmottekalliyaramelenavilinaroshaaveshaeejanmadalliavrumottetinnalla-newsid-n491375194
ಇದನ್ನು ಓದಿ : Fruits : ಹಣ್ಣುಗಳನ್ನು ಯಾವಾಗ ತಿನ್ನಬೇಕು? ಇಲ್ಲಿದೆ ಫುಲ್ ಡೀಟೇಲ್ಸ್