Rahul Gandhi: ‘ರಾಹುಲ್ ಗಾಂಧಿ PM ಆಗೋವರ್ಗೂ ಸಾಲ ನೀಡಲ್ಲ’! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರೋ ಬೋರ್ಡು !
Rahul Gandhi: ಸಾಮಾನ್ಯವಾಗಿ ಹಳ್ಳಿಯ ಅಥವಾ ಸಣ್ಣ ಪುಟ್ಟ ಪಟ್ಟಣಗಳಲ್ಲ ಅಂಗಡಿಗಳಲೆಲ್ಲ ಊರಿನ ಜನರು ವಸ್ತುಗಳನ್ನು ಕೊಂಡು ಸಾಲ ಹೇಳಿ ಹೋಗುತ್ತಾರೆ. ಇತ್ತೀಚೆಗೆ ಸಾಲ ಕೊಟ್ಟು ಕೊಟ್ಟು ರೋಸಿ ಹೋದ ಅಂಗಡಿ ಮಾಲಿಕರು ಅಂಗಡಿ ಮುಂದೆ ‘ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ನಮಗೆ ದೇವರಿದ್ದಂತೆ-ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವರಲ್ಲ ಎಂಬಿತ್ಯಾದಿ ಬರಹಗಳನ್ನು ನೇತುಬಿಟ್ಟಿರುತ್ತಾರೆ. ಈ ಮೂಲಕ ಅವರ ಸಾಲ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತೆ. ಆದರೆ ಇಲ್ಲೊಂದೆಡೆ ಈ ಸಾಲದ ವಿಚಾರವಾಗಿಯೇ ಪಾನ್ ಅಂಗಡಿ ಮುಂದಿರುವ ಬೋರ್ಡ್ ಒಂದು ಸಾಕಷ್ಟು ವೈರಲ್ ಆಗ್ತಿದೆ. ಹಾಗಿದ್ರೆ ಏನಿದೆ ಗೊತ್ತಾ ಆ ಬೋರ್ಡ್ ಅಲ್ಲಿ?
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಕರ್ಬಲಾ ಚೌಕ್‌ನಲ್ಲಿರುವ ಪಾನ್ ಅಂಗಡಿಯ ಮಾಲೀಕ ಮೊಹಮ್ಮದ್ ಹುಸೇನ್ ಎಂಬುವರು ತಮ್ಮ ಪಾನ್ಅಂಗಡಿ ಮುಂದೆ ಗಮನ ಸೆಳೆಯುವ ರೀತಿಯಲ್ಲಿ ಸಾಲದ ಕುರಿತ ಪೋಸ್ಟರ್ ಒಂದನ್ನು ಅಳವಡಿಸಿದ್ದಾನೆ. ಯಾಕೆಂದರೆ ಅದರಲ್ಲಿ “ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಗ್ರಾಹಕರಿಗೆ ಸಾಲ ನೀಡಲು ಸಾಧ್ಯವಿಲ್ಲ” ಎಂದು ಬರೆದು ಅಂಗಡಿ ಮುಂದೆ ನೇತಾಡಿಸಿದ್ದಾರೆ.
ಹೌದು, ರಾಹುಲ್ ಗಾಂಧಿ (Rahul Gandhi) ಪ್ರಧಾನ ಮಂತ್ರಿಯಾಗುವವರೆಗೆ ತನ್ನ ಅಂಗಡಿಯಲ್ಲಿ ಸಾಲ ಕೊಡುವುದಿಲ್ಲ – ಉದುರಿ ಬಂದ್ ಎಂದು ಪೋಸ್ಟರ್ ಹಾಕಿದ್ದಾನೆ! ಇದು ನೋಡಿ ಅಲ್ಲಿಗೆ ಬಂದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಆ ಶಾಪ್‌ಗೆ ಬಂದ ಓ ವ್ಯಕ್ತಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿ ಮಾರ್ಪಟ್ಟಿದೆ. ಜೊತೆಗೆ ನಾನಾ ವ್ಯಾಖ್ಯಾನಗಳೂ ಬರುತ್ತಿವೆ.
ಅಂದಹಾಗೆ ಈ ಕುರಿತು ಪ್ರತಿಕ್ರಿಯಿಸಿದ ಅಂಗಡಿ ಮಾಲಿಕ ಹುಸೇನ್ ಅವರು ಗ್ರಾಹಕರು ಪಾನ್ ಖರೀದು ಮಾಡುತ್ತಾರೆ. ದುಡ್ಡು ಕೇಳಿದರೆ ಸಾಲ ಬರೆದಿಟ್ಟುಕೋ ಎನ್ನುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿ, ಕಳೆದ ಜನವರಿ 1ರಿಂದ ಸಾಲ ನೀಡುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಸದ್ಯಕ್ಕೆ ಪ್ರಧಾನ ಮಂತ್ರಿಯಾಗುವ ಅವಕಾಶವಿಲ್ಲ! ಆದ್ದರಿಂದ ಈ ಪೋಸ್ಟರ್ ಹಾಕಿರುವುದಾಗಿ ಆತ ಹುಳ್ಳಗೆ ನಕ್ಕು ಹೇಳಿದ್ದಾನೆ. ಹಾಗಂತ ರಾಹುಲ್ ಗಾಂಧಿ ಎಂದಿಗೂ ಪ್ರಧಾನಿ ಆಗುವುದಿಲ್ಲ ಎಂಬುದು ಅವರ ಉದ್ದೇಶವಲ್ಲ. ಪ್ರಸುತ ಸನ್ನಿವೇಶದಲ್ಲಿ ಅವರು ಪ್ರಧಾನಿ ಆಗಲಾರರು. ಅದರಿಂದ ತಾನು ತನ್ನ ಗ್ರಾಹಕರಿಗೆ ಸಾಲ ನೀಡುವುದು ತಪ್ಪುತ್ತದೆ ಎಂಬುದು ತಾವು ಪೋಸ್ಟರ್ ಹಾಕಿರುವುದರ ಒಳಾರ್ಥ ಎಂದು ಹುಸೇನ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಪೋಸ್ಟರ್ ಗೆ ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರಿಂದ ಹಾಸ್ಯಭರಿತ ವ್ಯಾಖ್ಯಾನಗಳು ನಡೆಯುತ್ತಿವೆ. ಪೋಸ್ಟರ್ ಕಂಡ ಕೆಲವರು ನೋ ವೇ, ಛಾನ್ಸೇ ಇಲ್ಲ! ರಾಹುಲ್ ಪ್ರಧಾನಿ ಆಗುವುದಿಲ್ಲ; ಅಷ್ಟರಮಟ್ಟಿಗೆ ಅಂಗಡಿ ಮಾಲೀಕ ಸೇಫ್ ಸೇಫ್ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : HD Revanna : ರೇವಣ್ಣ ಭವಾನಿ ಕಾಲಿಗೆ ಅಡ್ಡಡ್ಡ ಬಿದ್ದ ಸ್ವರೂಪ್, ಮುನಿಸು ಮಂಗ ಮಾಯ