Education system: 1 ನೇ ತರಗತಿ ಪ್ರವೇಶ ವಯೋಮಿತಿ 6 ವರ್ಷ ನಿಗದಿ ಮಾಡಿದ 21 ರಾಜ್ಯಗಳು!

Education system: ದೇಶದ 21 ರಾಜ್ಯಗಳು 2023-24 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು 6 ವರ್ಷಗಳ ವಯೋಮಿತಿ ಇರಬೇಕು ಎಂದು ಅನುಷ್ಠಾನ(Implementation) ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿ ಕೇಂದ್ರ ಶಿಕ್ಷಣ ಇಲಾಖೆಯು (education system) ಎಲ್ಲ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ 6 ವರ್ಷ ಪೂರೈಸಿರಬೇಕು ಎಂದು ಸೂಚಿಸಿದೆ. ಅದರಂತೆ ಹೆಚ್ಚಿನ ರಾಜ್ಯಗಳು ಈ ನಿಯಮವನ್ನು ಅನುಷ್ಠಾನ (Implementation) ಮಾಡುತ್ತಿವೆ.

 

ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ್ ಹವೇಲಿ, ಲಕ್ಷದ್ವೀಪ, ಡಿಯು ಮತ್ತು ಡಾಮನ್, ಚಂಡೀಗಢ ಹಾಗೂ ಅರುಣಾಚಲ ಪ್ರದೇಶ, ಬಿಹಾರ, ಅಸ್ಸಾಂ, ಛತ್ತೀಸಗಢ, ಮಣಿಪುರ, ಜಾರ್ಖಂಡ್, ಮೇಘಾಲಯ, ಮಹಾರಾಷ್ಟ, ನಾಗಾಲ್ಯಾಂಡ್, ವಿಜೋರಾಂ, ಓಡಿಸ್ಸಾ, ಸಿಕ್ಕಿಂ, ತ್ರಿಪುರ, ಪಶ್ಚಿಮ, ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅನುಷ್ಠಾನ(Implementation) ಮಾಡಲಾಗಿದೆ. ಇನ್ನು ಗೋವಾ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಅನುಷ್ಠಾನ (Implementation) ಮಾಡಬೇಕಾಗಿದೆ.

ದಕ್ಷಿಣ ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಯೋಮಿತಿ ಮಾನದಂಡ ಅನುಷ್ಠಾನ(Implementation) ಮಾಡಲು ಒಪ್ಪಿಗೆ ನೀಡಿಲ್ಲ. ಹಾಗಾಗೀ ಕೇಂದ್ರದ ಶಾಲಾ ಶಿಕ್ಷಣ(education) ಮತ್ತು ಸಾಕ್ಷರತಾ ಇಲಾಖೆಯು ಮತ್ತೋಮ್ಮೆ ಜ್ಞಾಪನಾ ಪತ್ರವನ್ನು ಕಳುಹಿಸಿದೆ. ಹರಿಯಾಣ ವು ಮುಂದಿನ ವರ್ಷ ಈ ಅನುಷ್ಠಾನ(Implementation) ಮಾಡುವ ಬಗ್ಗೆ ಖಚಿತ ಪಡಿಸುತ್ತವೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ 5.5 ವರ್ಷದಿಂದ 7 ವರ್ಷದೊಳಗಿನ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳತ್ತಿದೆ. 2025-26 ರಿಂದ ಒಂದನೇ ತರಗತಿಗ ಪ್ರವೇಶ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿ ಮಾಡುತ್ತವೆ ಎಂದು ಶಿಕ್ಷಣ(education) ಇಲಾಖೆ ತಿಳಿಸಿದೆ.

 

ಇದನ್ನು ಓದಿ: CM Bommai: ನಾಳೆ ಸಿಎಂ ಬೊಮ್ಮಾಯಿ ಬೀದರ್ ಜಿಲ್ಲಾ ಪ್ರವಾಸ

Leave A Reply

Your email address will not be published.