Suhana Khan Uses The F Word: ಇಶಾನ್ ಕಿಶನ್ ಔಟ್ ಆದ ಕೂಡಲೆ ‘ಆ’ ತರದ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ! ವೈರಲ್ ಆದ ವಿಡಿಯೋ ನೋಡಿ ನೆಟ್ಟಿಗರಿಂದ ಕ್ಲಾಸ್!

Suhana Khan Uses The F Word : ಇತ್ತೀಚೆಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಒಂದಿಲ್ಲೊಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಅಂತೆಯೇ ಇದೀಗ ಈ ಸೆನ್ಸೇಷನ್ ಸುಹಾನಾ ಐಪಿಎಲ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ನಡುವಿನ ಪಂದ್ಯದ ವೇಳೆ ಸುಹಾನಾ ಖಾನ್‌ ಕೆಟ್ಟ (Suhana Khan Uses The F Word) ಪದ ಬಳಸಿದ್ದಾರೆ. ಸುಹಾನಾ ಹೀಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

 

ಹೌದು, ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮಾಲೀಕ ಶಾರೂಖ್‌ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು, ಮುಂಬೈ ಇಂಡಿಯನ್ಸ್ ಆರಂಭಿಕ ಇಶಾನ್‌ ಕಿಶನ್‌ ಬೌಲ್ಡ್‌ ಆದ ಬಳಿಕ ಅಸಹ್ಯ ಪದವೊಂದನ್ನು ಬಳಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಸುಹಾನಾ ಖಾನ್ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

ಅಂದಹಾಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯವನ್ನು ವೀಕ್ಷಿಸಲು ಸುಹಾನಾ ಖಾನ್ ಅವರು ತಮ್ಮ ಕಿರಿಯ ಸಹೋದರ ಅಬ್ರಾಮ್‌ ಜೊತೆ ಮೈದಾನಕ್ಕೆ ಆಗಮಿಸಿದ್ದರು. ಆ ಮೂಲಕ ತಮ್ಮ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಹುರಿದುಂಬಿಸುತ್ತಿದ್ದರು. ಮುಂಬೈ ಇಂಡಿಯನ್ಸ್ ಆರಂಭಿಕ ಇಶಾನ್‌ ಕಿಶನ್‌ ಬೌಲ್ಡ್ ಆದ ಬಳಿಕ ಸುಹಾನಾ ಖಾನ್ ಅವರು ಎಫ್‌ ಪದದಿಂದ ಆರಂಭವಾಗುವ ಅಸಹ್ಯ ಪದವನ್ನು ಬಳಸಿದರು. ಸುಹಾನಾಳ ಈ ವಿಡಿಯೋಗೆ ನೆಟ್ಟಿಗರ ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಒಂದಲ್ಲೊಂದು ವಿಚಾರಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗುವ ಸುಹಾನಾ ಈ ಬಾರಿ ಕೆಟ್ಟ ಪದ ಬಳಿಸಿ ತಗಲಾಕ್ಕೊಂಡಿದ್ದಾರೆ.

ಅಂದಹಾಗೆ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು ಆದರೂ 185 ರನ್‌ ದಾಖಲಿಸಿತ್ತು. ಕೆಕೆಆರ್ ತಂಡದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 17.4 ಓವರ್‌ಗಳಿಗೆ 186 ರನ್‌ ಗಳಿಸಿ 5 ವಿಕೆಟ್‌‌ಗಳ ಗೆಲುವು ದಾಖಲಿಸಿತು.

ಇನ್ನು ಸುಹಾನಾ ಕ್ರೀಡೆ ಜೊತೆಗೆ ನಟನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ನೆಟ್‌ಫ್ಲಿಕ್ಸ್‌ನ ದಿ ಆರ್ಚೀಸ್‌ ಸಿನಿಮಾದಲ್ಲಿ ಸುಹಾನಾ ನಟಿಸಿದ್ದಾರೆ. ಈ ಚಿತ್ರಕ್ಕೆ ಜೋಯಾ ಅಖ್ತರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅಮೆರಿಕಾದ ಜನಪ್ರಿಯ ಕಾಮಿಕ್ ಪುಸ್ತಕ ಸರಣಿಯೆ ಭಾರತೀಯ ರೂಪಾಂತರವಾಗಿದೆ. ಈ ಸಿನಿಮಾದಲ್ಲಿ ಸುಹಾನಾ ಜೊತೆಗೆ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಖುಷಿ ಕಪೂರ್ ಮಿಹಿರಿ ಅಹುಜಾ ಸೇರಿದಂತೆ ಅನೇಕರು ನಟಿಸಿದ್ದಾರೆ.

 

 

 

 

 

ಇದನ್ನು ಓದಿ : Sravanthi Chokarapu: ಕೆಳಗಡೆ ಏನೂ ಹಾಕದೆ ರಸ್ತೆಯಲ್ಲಿ ಸುತ್ತಾಡಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್!  

Leave A Reply

Your email address will not be published.