Education: ಮಾನ್ಯತೆ ಪಡೆಯದ ಶಾಲೆಗಳಿಗೆ ಸರ್ಕಾರ ವಿಧಿಸಿದೆ ಡೆಡ್ ಲೈನ್, ಇನ್ನು ಕೇವಲ 45 ದಿನಗಳಲ್ಲಿ……!!

Education: ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಸನ್ಮಾರ್ಗದಲ್ಲಿ ನಡೆಯಲು ವಿದ್ಯಾಭ್ಯಾಸ ನೆರವಾಗುತ್ತದೆ. ಇದೀಗ, ಶೈಕ್ಷಣಿಕ ವರ್ಷ ಶುರುವಾಗುವ ಮೊದಲೇ ಶಿಕ್ಷಣ (Education)ಇಲಾಖೆ ಕೆಲವು ಮಹತ್ವದ ಆದೇಶಗಳನ್ನು ಪ್ರಕಟಿಸಿದೆ.

2023 – 24ನೇ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿದೆ. ಮಾನ್ಯತೆ ಪಡೆಯಲು ವಿಧಿಸಲಾಗಿರುವ 45 ದಿನಗಳ ಗಡುವಿನ ಅವಕಾಶ ಮುಗಿದ ನಂತರ ಈ ರೀತಿಯ ಶಾಲೆಗಳ ಮಾನ್ಯತೆ ಹಿಂಪಡೆಯಲಾಗುವ ಕುರಿತು ಎಚ್ಚರಿಕೆ ನೀಡಲಾಗಿದೆ. ನೋಂದಣಿ ಆಗದೇ ನಡೆಸುತ್ತಿರುವ ಖಾಸಗಿ ಶಾಲೆಗಳನ್ನು(Schools) ಮುಚ್ಚಲು ಶೀಘ್ರವೇ ಕ್ರಮ ಕೈಗೊಳ್ಳುವ ಜೊತೆಗೆ ಅನಧಿಕೃತ ಶಾಲೆಗಳಿಗೆ ಮಾನ್ಯತೆ ಪಡೆಯಲು 45 ದಿನಗಳ ಗಡುವು ನೀಡಲಾಗಿದೆ.

ಅನುಮತಿ ಪಡೆದ ಶಾಲೆಗಳು ಉನ್ನತೀಕರಿಸಿದ ತರಗತಿಗಳಿಗೆ ಅನುಮತಿ ನೀಡಲಾಗಿದ್ದು, ಒಂದು ವೇಳೆ ಅನುಮತಿ ಪಡೆಯದೆ ಇದ್ದಲ್ಲಿ 45 ದಿನಗಳ ಕಾಲವಕಾಶದ ಒಳಗೆ ಅನುಮತಿ ಪಡೆಯಬೇಕು. ಇದರ ಜೊತೆಗೆ ನೋಂದಣಿ ಹಾಗೂ ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಲೂ ಸೂಚನೆ ನೀಡಲಾಗಿದೆ.

 

ಇದನ್ನು ಓದಿ : Naga Sadhus : ನಾಗಾ ಸಾಧುಗಳು ಅಂದ್ರೆ ಯಾರು? ಇವರ ಸಂಪೂರ್ಣ ಜೀವನ ಪಯಣ ಹೇಗಿದೆ ನೋಡಿ 

Leave A Reply

Your email address will not be published.