Actor Salman Khan: ಟ್ಯಾಕ್ಸಿಗೆ ಹಣ ನೀಡದೆ, ‘ ಈಗ ಬರ್ತೇನೆ ‘ ಎಂದು ಮುಂಡಾಯಿಸಿದ್ದ ಸಲ್ಮಾನ್ ಖಾನ್, ನಂತ್ರ ಏನಾಯ್ತು ಗೊತ್ತಾ ?

Actor Salman Khan: ಬಾಲಿವುಡ್ (Bollywood) ನಟ, ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಎಂದೇ ಫೇಮಸ್​ ಆಗಿರೋ ಸಲ್ಮಾನ್ ಖಾನ್ (Actor Salman Khan) ಪ್ರಸ್ತುತ ಫುಲ್​ ಜೋಶ್​ನಲ್ಲಿದ್ದಾರೆ. ಅವರ ಮುಂಬರುವ ಫ್ಯಾಮಿಲಿ ಎಂಟರ್​ಟೇನ್​ಮೆಂಟ್​ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ತಮ್ಮ ಬಾಲ್ಯದ ಜೀವನದ ನೋವಿನ ದಿನಗಳ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಕಡುಬಡತನದ ನಡುವೆ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡಿದ್ದು ಕೂಡ ಇತ್ತು ಎಂದು ತಮ್ಮ ಜೀವನದ ಕಹಿ ದಿನಗಳ ಬಗ್ಗೆ ಸಲ್ಲು ಮಾಹಿತಿ ನೀಡಿದ್ದಾರೆ. ಅದರಲ್ಲಿಯೂ ಅವರ ಪಾಡು ಹೇಗಿತ್ತು ಅನ್ನೋದಕ್ಕೆ ಒಂದು ಸಣ್ಣ ನಿದರ್ಶನ ಕೂಡ ನೀಡಿದ್ದಾರೆ. ಸಲ್ಮಾನ್ ಖಾನ್ ಟ್ಯಾಕ್ಸಿಗೆ ಹಣ ನೀಡದೆ, ‘ ಈಗ ಬರ್ತೇನೆ ‘ ಎಂದು ಮುಂಡಾಯಿಸಿದ್ದರಂತೆ.

 

ಇತ್ತೀಚೆಗೆ ಕಪಿಲ್ ಶರ್ಮಾ ಶೋನ ಸೆಟ್‌ ನಲ್ಲಿ ಸಲ್ಲು ಅವರು ಭಾಗಿಯಾಗಿದ್ದು, ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿನಾಲಿ ಭಟ್ನಾಗರ್, ಸಿದ್ಧಾರ್ಥ್ ನಿಗಮ್, ರಾಘವ್ ಜುಯಲ್ ಮತ್ತು ಜಸ್ಸಿ ಗಿಲ್ ಅವರೊಂದಿಗೆ ಚಲನಚಿತ್ರವನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೇ, ಸಲ್ಮಾನ್ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಸುಶೀಲಾ ಚರಕ್ ಅಲಿಯಾಸ್ ಸಲ್ಮಾ ಖಾನ್ (Salman Khan) ಅವರ ಸುಪುತ್ರನಾಗಿದ್ದು, ಅವರಿಗೆ ನಾಲ್ಕು ಒಡಹುಟ್ಟಿದವರಿದ್ದಾರೆ. ಖಾನ್ ಅವರ ತಂದೆ ಸಲೀಂ ಖಾನ್ (Saleem Khan) ಅವರಿಗೆ ಇಬ್ಬರು ಪತ್ನಿಯರಾಗಿದ್ದು, ತುಂಬು ಕುಟುಂಬದಲ್ಲಿ ಬಡತನ, ಮದುವೆ ಹೀಗೆ ನಾನಾ ಕಾರಣಗಳಿಂದ ಮನೆಯ ವಾತಾವರಣ ಕೆಟ್ಟು ಹೋಗಿತ್ತು.

ಮೈನೆ ಪ್ಯಾರ್ ಕಿಯಾ(1989) ಸಿನಿಮಾದಲ್ಲಿ ನಟಿಸಿ ಫೇಮಸ್ ಆಗುವ ಮೊದಲೇ ನಡೆದ ಘಟನೆಯೊಂದರ ಬಗ್ಗೆ ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ. ಕ್ಯಾಬ್​ಗೆ ಹಣ ಪಾವತಿ ಮಾಡುವುದಕ್ಕೂ ಆಗದ ಪರಿಸ್ಥಿತಿ ಇತ್ತು ಎನ್ನುವುದನ್ನು ಸಲ್ಲು ರಿವೀಲ್ ಮಾಡಿದ್ದು, ತನ್ನ ಕಾಲೇಜ್ ದಿನಗಳಲ್ಲಿ ಕ್ಯಾಬ್ ಡ್ರೈವರ್​ಗೆ ಹೇಗೆ ಮೋಸ ಮಾಡಿದ್ದರು ಎಂಬ ಕಹಾನಿಯನ್ನು ರಿವಿಲ್ ಮಾಡಿದ್ದಾರೆ.

ಸಲೀಂ ಖಾನ್ ಅವರು ಜಾವೇದ್ ಅಖ್ತರ್ ಅವರ ಬಳಿ ಸೋಲೂ ರೈಟರ್ ಆಗಿದ್ದ ಸಂದರ್ಭ ಹಣ ಉಳಿತಾಯ ಮಾಡುವುದು ಸುಲಭವಾಗಿರಲಿಲ್ಲ. ಹಾಗಾಗಿ ಖಾನ್ ಕುಟುಂಬದಲ್ಲಿ ಹಣಕ್ಕೆ ಭಾರೀ ತಾಪತ್ರಯವಿತ್ತಂತೆ. ಸಲ್ಲು ತಮ್ಮ ಸಿನಿಮಾವನ್ನು ಟಿವಿ ಶೋ ಒಂದರಲ್ಲಿ ಪ್ರಮೋಟ್ ಮಾಡುವುದಕ್ಕೆ ಹೋದ ಸಂದರ್ಭಲ್ಲಿ ಪ್ರಯಾಣಿಸಿದ ಕ್ಯಾಬ್​ ಡ್ರೈವರ್ ಗೆ ಟೋಪಿ ಹಾಕಿ ಬಂದಿದ್ದರಂತೆ. ಕಾಲೇಜಿಗೆ ಹೋಗುವ ಸಂದರ್ಭ ಟ್ರೈನ್​ನಲ್ಲಿ ಹೋಗುತ್ತಿದ್ದುದರಿಂದ ಒಂದು ದಿನವಾದರೂ ಟ್ಯಾಕ್ಸಿಯಲ್ಲಿ (Taxi) ಹೋಗುವ ಬಯಕೆಯಾಗಿ ಹೊರಟಿದ್ದರಂತೆ. ಆದರೆ ಇಲ್ಲಿ ತಮಾಷೆ ಏನಪ್ಪಾ ಅಂದರೆ ಅವರ ಬಳಿ ಚಿಲ್ಲರೆ ಹಣವೂ ಇರಲಿಲ್ಲ. ಆದರೂ ಕ್ಯಾಬ್ ಅಲ್ಲಿ ಕುಳಿತ ಸಲ್ಮಾನ್ ಖಾನ್ ತಮ್ಮ ಮುಂಬೈನ (Mumbai) ಸೇಂಟ್ ಕ್ಸೇವಿಯರ್ ಕಾಲೇಜಿಗಿಂತ ಸ್ವಲ್ಪ ದೂರದಲ್ಲೇ ಕ್ಯಾಬ್ ನಿಲ್ಲಲು ಹೇಳಿ ನಾನೀಗ ಹೋಗಿ ಹಣ ತರುತ್ತೇನೆ ಎಂದು ಹೇಳಿ ಕ್ಯಾಬ್ ಡ್ರೈವರ್ ಗೆ ಮಕ್ಮಾಲ್ ಟೋಪಿ ಹಾಕಿದ್ದರಂತೆ.

ಆ ಬಳಿಕ ಮಾಡೆಲಿಂಗ್ ಆರಂಭಿಸಿದ ಸಲ್ಲು, ಸ್ವಲ್ಪ ಸಂಪಾದಿಸಲು ಅರಂಭಿಸಿದರಂತೆ. ಒಮ್ಮೆ ಟ್ಯಾಕ್ಸಿಯಲ್ಲಿ ಮನೆಗೆ ಬರಲು ನಿರ್ಧರಿಸಿದ್ದ ಸಲ್ಲು, ಟ್ಯಾಕ್ಸಿ ಹತ್ತಿದ್ದಾರೆ. ಆದರೆ ದಾರಿಯಲ್ಲಿ ಹೋಗುವ ಸಂದರ್ಭ ಡ್ರೈವರ್ ನಿಮ್ಮನ್ನು ಎಲ್ಲಿಯೋ ನೋಡಿದ್ದೇನೆ ಎಂದು ಬಡಬಡಾಯಿಸುತ್ತಿದ್ದರಂತೆ. ಮನೆ ತಲುಪಿದಾಗ ನಾನು ಮೇಲೆ ಹೋಗಿ ಹಣ ತರುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿ ಮನೆ ಕಡೆಗೆ ಹೊರಟಿದ್ದಾರೆ. ಆಗ ಆತ ಸ್ವಲ್ಪ ಹೊತ್ತು ಇವರನ್ನೇ ನೋಡುತ್ತಾ ನಿಂತಿದ್ದು, ಆಗ ಇಬ್ಬರು ನಾವಿಬ್ಬರೂ ಜೋರಾಗಿ ನಗಲಾರಂಭಿಸಿದೆವು. ಆದರೆ ಈ ಬಾರಿ ಸಲ್ಮಾನ್ ಖಾನ್ ಬಡ್ಡಿ ಸಮೇತ ಹಣವನ್ನು ಪಾವತಿ ಮಾಡಿದ್ದರಂತೆ. ಹೀಗೆ, ತಾನು ಬಾಲ್ಯದ ನೆನಪನ್ನು ಮೆಲುಕು ಹಾಕುತ್ತಾ ತಾನು ಹೇಗೆ ಡ್ರೈವರ್ ಅನ್ನು ಮುಂಡಾಯಿಸಿದೆ ಎಂಬುದನ್ನು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ಕಾರ್ಯಾಚರಣೆ ವೇಳೆ ʼಮಹಿಳಾಧಿಕಾರಿಯನ್ನು ಎಳೆದೊಯ್ದ ಆಘಾತಕಾರಿ Video Viral

Leave A Reply

Your email address will not be published.