Sumalatha and HD Kumaraswamy : ಸೇಡಿಗೆ ಸೇಡು ಹೊಸತಲ್ಲ ಅಂದ ಸುಮಲತಾ | ಮಂಡ್ಯದಲ್ಲಿ ಕೂಡಾ ಕುಮಾರಸ್ವಾಮಿ ಸ್ಪರ್ಧೆ ಹಿನ್ನೆಲೆ
Sumalatha and HD Kumaraswamy : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸ್ಪರ್ಧೆಗಿಳಿದಿರುವ ಕುಮಾರಸ್ವಾಮಿ ಅವರು ತಮ್ಮ ಎರಡನೇ ಕ್ಷೇತ್ರವಾಗಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏ. 20ರಂದು ಅಮಾವಾಸ್ಯೆ ದಿನ ಎಚ್.ಡಿ.ಕುಮಾರಸ್ವಾಮಿ ಅವರು ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಮಂಡ್ಯ ಕ್ಷೇತ್ರಕ್ಕೆ ಪಿ.ರವಿಕುಮಾರ್ ಗಣಿಗ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಅವರಿಗಿನ್ನೂ ಬಿ-ಫಾರಂ ನೀಡಿಲ್ಲ. ಈ ಹಿನ್ನೆಲೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೂಡ ಬದಲಾವಣೆಯಾಗಲಿದ್ದಾರೆ ಎನ್ನಲಾಗಿದೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶೋಕ್ ಜಯರಾಂ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದು ಸ್ಪರ್ಧಿಸುತ್ತಿರುವುದು ದೇಶದ ರಾಜಕಾರಣ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧಿಸುವುದನ್ನು ಸ್ವಾಗತಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು, ದ್ವೇಷದ ರಾಜಕಾರಣ ನನಗೆ ಹೊಸದಲ್ಲ. ಅದನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದಿದ್ದಾರೆ. ಅಲ್ಲದೆ ನಾನು ಮತ್ತು ನನ್ನ ಪುತ್ರ ಅಭಿಷೇಕ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ (Sumalatha and HD Kumaraswamy) ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಅವರನ್ನು ಎದುರಿಸೋ ಶಕ್ತಿ ನಮಗಿದೆ, ಸ್ವಾರ್ಥದ ರಾಜಕಾರಣಿಗಳಿಗೆ ಉತ್ತರ ಕೊಡೋ ಟೈಮ್ ಬಂದಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಇತ್ತೀಚೆಗೆ ಬಿಜೆಪಿಗೆ ನನ್ನ ಬೆಂಬಲ ಎಂದು ಸುಮಲತಾ ಘೋಷಣೆ ಮಾಡಿದ್ದರು. ಮತ್ತು ಬಿಜೆಪಿ ಸೂಚಿಸಿದರೆ ಮಂಡ್ಯದಲ್ಲಿ ಸ್ಪರ್ಧಿಸಲು ನಾನು ರೆಡಿ ಎಂದಿದ್ದರು. ಟಿಕೆಟ್ ಸುಮಲತಾ. ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿದೆ, ಇದು ನಿಜವೇ ಆದರೆ ಪಕ್ಷ ಒಪ್ಪಿದರೆ ನಾನು ಎಚ್‌ಡಿಕೆ ಎದುರಿಸೋಕೆ ಸಿದ್ಧ. ಈವರೆಗೂ ಪಕ್ಷ ನನಗೆ ಯಾವ ಸೂಚನೆಯನ್ನು ಕೊಟ್ಟಿಲ್ಲ ಎಂದಿದ್ದಾರೆ.
ಮಂಡ್ಯದಲ್ಲಿ ಪತಿ ಅಂಬರೀಷ್ ಅಭಿಮಾನಿಗಳು ಹೆಚ್ಚಿದ್ದಾರೆ. ಮಂಡ್ಯ ಜನರಿಗೆ ಅಭಿವೃದ್ಧಿ ಮಾಡೋದು ಯಾರು ಎನ್ನುವುದು ಜನರಿಗೆ ಈಗ ಗೊತ್ತಾಗಿದೆ ಎಂದು ಹೇಳಿದ್ದಾರೆ. ಇಡೀ ದೇಶವೇ ನರೇಂದ್ರ ಮೋದಿಯವರ ಸಾಧನೆಯನ್ನು ಕಂಡು ಅವರ ಕೈ ಹಿಡಿಯಲು ನಿಂತಿದೆ. ಅವರ ಸಾಧನೆಯನ್ನು ಇಟ್ಟುಕೊಂಡು ಅಭಿವೃದ್ಧಿಯನ್ನು ಮುಂದು ಮಾಡಿಕೊಂಡು ನಾವು ಮತ ಕೇಳುತ್ತೇವೆ ಎಂದಿದ್ದಾರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್.
ಇದನ್ನು ಓದಿ : Nikhil Kumaraswamy : ನಿಖಿಲ್, ಅಪ್ಪ ಕುಮಾರಸ್ವಾಮಿಗೇ ಸಾಲ ಕೊಟ್ಟ ಸಿರಿವಂತ : ಆತನ ಅಸ್ತಿ ಮೌಲ್ಯ ಎಷ್ಟು ಗೊತ್ತಾ ?