Karnataka Elections: ಶೆಟ್ಟರ್​​​ ಹೋದ್ರೆ ಏನಾಯ್ತು, ನಮ್ಮಲ್ಲಿ ಇನ್ನೊಬ್ಬ ಲಿಂಗಾಯತ ಲೀಡರ್​ ಜನನ – ಸಚಿವ ಅಶ್ವಥ್ ನಾರಾಯಣ್​ ಕೌಂಟರ್​

Ashwath Narayan: 2023 ರ ಚುನಾವಣೆ (Elections 2023) ಹಿನ್ನೆಲೆಯಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ (Malleshwaram) ಬಿಜೆಪಿ ಅಭ್ಯರ್ಥಿಯಾಗಿ, ಉನ್ನತ ಶಿಕ್ಷಣ ಸಚಿವ ಅಶ್ವಥ್​ ನಾರಾಯಣ್ (Ashwath Narayan )​​ ಅವರು ನಾಮಪತ್ರ (Nomination ) ಇಂದು ಸಲ್ಲಿಕೆ ಮಾಡಿದ್ದಾರೆ.

ನಾಮ ಪತ್ರ ಸಲ್ಲಿಕೆಯೊಂದಿಗೆ ಭಾರೀ ಪ್ರಚಾರದೊಂದಿಗೆ ಮಲ್ಲೇಶ್ವರ 18ನೇ ಕ್ರಾಸ್ ನಲ್ಲಿರುವ ಆರ್.ಓ ಕಚೇರಿಗೆ ಆಗಮಿಸಿದ ಅಶ್ವಥ್ ನಾರಾಯಣ್ ಅವರು 12:32ಕ್ಕೆ ಸರಿಯಾಗಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್​ ನಾರಾಯಣ್ ಅವರು, ಇಂದು ಕಾಂಗ್ರೆಸ್ (Congress)​ ಸೇರ್ಪಡೆಯಾದ ಜಗದೀಶ್​ ಶೆಟ್ಟರ್ (Jagadish Shettar)​ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಶೆಟ್ಟರ್​​ ಹೋದರೆ ಇನ್ನೊಬ್ಬ ಲಿಂಗಾಯತ (Lingayat) ನಾಯಕ ನಮ್ಮಲ್ಲಿ ಹುಟ್ಟಿಕೊಳ್ತಾರೆ ಎಂದು ತಿರುಗು ಬಾಣದಂತೆ ಹೇಳಿದ್ದಾರೆ ​.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಥ್​ ನಾರಾಯಣ್​​, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಶೆಟ್ಟರ್ ನಡೆಗೆ ಕೌಂಟರ್ ನೀಡಿದ್ದು, ಶೆಟ್ಟರ್ ಬಿಜೆಪಿ ಬಿಟ್ಟಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಅವರ ನಿರ್ಗಮನದಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ ಎಂದು ಭರವಸೆಯೊಂದಿಗೆ ಹೇಳಿದರು.

ಬಿಜೆಪಿ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಅನುಭವಿಸಬಹುದಾದ ಪರಮೋನ್ನತ ಅಧಿಕಾರವನ್ನು ಅವರು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗಿಂತ ಇನ್ಯಾವ ಹುದ್ದೆ ಒಬ್ಬರಿಗೆ ಕೊಡಲು ಸಾಧ್ಯ? ಈಗ ಟಿಕೆಟ್ ಕೊಟ್ಟಿಲ್ಲ ಎನ್ನುವ ಸಣ್ಣ ವಿಚಾರಕ್ಕೆ ಬಿಟ್ಟುಹೋಗಿರೋದಕ್ಕೆ ಜನರು ಪಾಠ ಕಲಿಸ್ತಾರೆ ಎಂದಿದ್ದಾರೆ.

ಶೆಟ್ಟರ್ ಹೋಗಿರುವುದರಿಂದ ಯಾವುದೇ ಹೊಡೆತ ನಮ್ಮ ಪಕ್ಷಕ್ಕಿಲ್ಲ. ಇದುವರೆಗೂ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿರಲಿಲ್ಲ. ಆದರೆ ಈಗಿನ ಬೆಳವಣಿಗೆ ನೋಡಿದರೆ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಶೆಟ್ಟರ್​​ ಅವರಿಂದ ಲಿಂಗಾಯತ ಸಮುದಾಯ ಬಿಜೆಪಿ ಬೆಂಬಲಿಸುವುದು ನಿಲ್ಲಿಸಲ್ಲ. ಇಡೀ ಲಿಂಗಾಯತ ಸಮುದಾಯ ಈಗಲೂ ಮುಂದೆಯೂ ನಮ್ಮ ಜೊತೆಗಿರುತ್ತೆ. ಅವರು ಹೋದರೆ ಇನ್ನೊಬ್ಬ ಲಿಂಗಾಯತ ನಾಯಕ ನಮ್ಮಲ್ಲಿ ಹುಟ್ಟಿಕೊಳ್ಳುತ್ತಾರೆ ಎಂದು ಉದ್ಘರಿಸಿದ್ದಾರೆ.

Leave A Reply

Your email address will not be published.