Men Not Allowed: ಭಾರತದಲ್ಲಿ ಇರೋ ಈ ದೇವಸ್ಥಾನಗಳಿಗೆ ಪುರುಷರಿಗೆ ಎಂಟ್ರಿ ಇಲ್ಲ!

Men Not Allowed : ಸಾಮಾನ್ಯವಾಗಿ ಎಲ್ಲಾ ದೇವಸ್ಥಾನದಲ್ಲಿ ಮಹಿಳೆಯರಿಗೆ ಕೆಲವು ಸ್ಥಳಗಳಿಗೆ ಪ್ರವೇಶ (entry)ಇರುವುದಿಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಒಂದು ದೇವಸ್ಥಾನದಲ್ಲಿ (temple) ಪುರುಷರಿಗೆ ದೇವಸ್ಥಾನದ ಒಳಗೆ ಪ್ರವೇಶ ಇಲ್ಲವಂತೆ. ಹಾಗಾದರೆ ಆ ದೇವಸ್ಥಾನವಾದರೂ ಯಾವುದು ಎಂಬ ಪ್ರಶ್ನೆ(question) ನಿಮ್ಮನ್ನು ಕಾಡುವುದಿಲ್ಲವೇ. ಇಲ್ಲಿದೆ ನೋಡಿ ಅಂತಹ ದೇವಸ್ಥಾನವಾದರೂ ಯಾವುದೆಂದು.

ಹೌದು, ತಮಿಳುನಾಡಿನ (Tamil Nadu) ಕನ್ಯಾಕುಮಾರಿಯಲ್ಲಿರುವ (Kanyakumari) ಭಗವತಿ ದೇವಸ್ಥಾನದಲ್ಲಿ ಭಗವತಿ ದೇವಿಯ ಕನ್ಯಾ ರೂಪದ ಮೂರ್ತಿ ಇದೆ. ಈ ದೇವಸ್ಥಾನಕ್ಕೆ ಯಾವುದೇ ಕಾರಣಕ್ಕೂ ಪುರುಷರ(gents) ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ(men not allowed). ಆದರೆ ಇದರಲ್ಲೂ ವಿಸ್ಮಯ ಏನಂದರೆ ಬ್ರಹ್ಮಚಾರಿಗಳು(celibacy) ಯಾರೆಲ್ಲ ಇದ್ದಾರೆ ಅವರು ದೇಗುಲದ ದ್ವಾರದ ತನಕ ಹೋಗಬಹುದಾಗಿದೆ. ಆದರೆ ಆ ದ್ವಾರವನ್ನು ದಾಟಿ ಅವರು ಅದಕ್ಕಿಂತ ಮುಂಚೆ ಹೋಗಬಾರದು ಎಂಬ ಕಾನೂನನ್ನು(rules) ಆ ದೇವಸ್ಥಾನದಲ್ಲಿ ತಂದಿದ್ದಾರೆ.

ಈ ದೇವಾಲಯದ ಒಂದು ಪರಿಧಿವರೆಗೆ ಮಾತ್ರ ಮಹಿಳೆಯರಿಗೆ (womens)ಪ್ರವೇಶವಿದೆ. ಅವರಿಗೂ ಅದ್ರಿಕ್ಕಿಂತ ಮುಂಚೆ ಹೋಗಲು ಪ್ರವೇಶವಿಲ್ಲ. ಆದರೆ ಈ ಹಿಂದೆ ಪುರುಷರಿಗೆ(gents) ದೇವಸ್ಥಾನ ಪ್ರವೇಶಿಸಲು ಸಂಪೂರ್ಣ ಸ್ವಾತಂತ್ರ್ಯವಿತ್ತು. ಇಲ್ಲಿನ ಅಸಮಾನತೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇದೀಗ ಬಾಂಬೆ ಹೈಕೋರ್ಟ್​(Bombay High court) ಪುರುಷರ ಪ್ರವೇಶವು ಬೇಡ ಎಂಬ ಕಾನೂನನ್ನು ಕಟ್ಟುನಿಟ್ಟಾಗಿ ತಂದಿದೆ.

ರಾಜಸ್ಥಾನದ ಪುಷ್ಕರ್​ನಲ್ಲಿರುವ ಬ್ರಹ್ಮ(Brahma) ದೇವಸ್ಥಾನವನ್ನು 14 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ಇದು ಏಕೈಕ ಬ್ರಹ್ಮ ದೇವರ ದೆಗುಲವಾಗಿದೆ. ಇಲ್ಲಿನ ಪುಷ್ಕರ್(Pushkar) ಸರೋವರದಲ್ಲಿ ದೇವಿ ಸರಸ್ವತಿಯೊಂದಿಗೆ ಬ್ರಹ್ಮ ದೇವ ಯಜ್ಞ ಮಾಡಿದ್ದರು. ಈ ವೇಳೆ ಸರಸ್ವತಿ ದೇವಿಯು ಯಾವುದೋ ವಿಷಯಕ್ಕೆ ಬ್ರಹ್ಮ ದೇವರ ಮೇಲೆ ಕೋಪಗೊಂಡು ಈ ದೇವಾಲಯಕ್ಕೆ ಶಾಪ ನೀಡಿದ್ದರು ಎಂದು ಹೇಳಲಾಗುತ್ತದೆ.

ಹಾಗಾಗಿ ಈ ಹಿಂದೆ ಇದ್ದ ಶಾಪದ ಮೇರೆಗೆ ಈ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಅನುಮತಿ ನಿಷೇಧಿಸಲಾಗಿದೆ. ಇದನ್ನು ಕಡೆಗಾನಿಸಿ ಎಲ್ಲಾದರೂ ಪ್ರವೇಶ ಮಾಡಿದರು ಅವರ ವೈವಾಹಿಕ ಜೀವನದಲ್ಲಿ ಯಾವುದಾದರೂ ರೀತಿಯ ಬಿರುಕು (problem)ಉಂಟಾಗುತ್ತದೆ. ಇಲ್ಲಿ ಅವಿವಾಹಿತರಿಗೆ ಪ್ರವೇಶವಿದ್ದು ಆದರೆ ವಿವಾಹಿತರಿಗೆ(marriage) ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೇರಳದ(Kerala) ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ದೇವರಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಈ ದೇವಾಲಯದಲ್ಲಿ ಇನ್ನೂ ವಿಶೇಷ ಏನೆಂದರೆ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಿಸಿ ಗಿನ್ನಿಸ್ (Guinness)ದಾಖಲೆಯನ್ನು ಬರೆದಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಇರುವುದರಿಂದ ಈ ದೇವಾಲಯಕ್ಕೆ ಪುರುಷರಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ.

ಹಾಗೆಯೇ ಇನ್ನೊಂದು ಅಸ್ಸಾಂ(Assam) ರಾಜ್ಯದಲ್ಲಿರುವ ಈ ದೇವಾಲಯದ ಆವರಣಕ್ಕೆ ಮಹಿಳೆಯರ ಪ್ರವೇಶಕ್ಕೆ ಮಾತ್ರ ಅನುಮತಿ ಇದೆ. ಎಲ್ಲ ದೇವಸ್ಥಾನದಲ್ಲಿ ಪುರುಷರು ಅರ್ಚಕರಾದರೆ ಈ ದೇವಸ್ಥಾನದಲ್ಲಿ ಮಾತ್ರ ಪುರುಷರ ಬದಲಾಗಿ ಮಹಿಳಾ ಆರ್ಚಕರನ್ನು ನೇಮಿಸಲಾಗುತ್ತದೆ. ಭಗವಾನ್​ ವಿಷ್ಣು(lord Vishnu) ಅವರ ತಾಯಿ ಸತಿ ಮಾತೆಯ ನೆನಪಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಇಲ್ಲಿ ಪುರುಷರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Gas Cylinder: ಅಡುಗೆ ಗ್ಯಾಸ್ ಸಿಲಿಂಡರ್ ಎಷ್ಟು ಖಾಲಿ ಆಗಿದೆ ಎಂಬುದನ್ನು ನಿಮಿಷಗಳಲ್ಲಿ ತಿಳಿದುಕೊಳ್ಳೋ ಟ್ರಿಕ್ ಇಲ್ಲಿದೆ !

Leave A Reply

Your email address will not be published.