Jagadish Shettar : ಸುದೀರ್ಘ 35 ವರ್ಷಗಳ ಬಿಜೆಪಿ ಜತೆಗಿನ ಗಂಟು ಬಿಚ್ಚಿಕೊಂಡಿತು, ಜಗದೀಶ್ ಶೆಟ್ಟರ್ ಅಧಿಕೃತ ಕಾಂಗ್ರೆಸ್ ಸೇರ್ಪಡೆ

Jagadish Shettar join congress : ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ (Jagadish Shettar join congress). ಸುಧೀರ್ಘ ಕಾಲದಿಂದ ಇದ್ದ ಬಿಜೆಪಿಯ ಮೂರೂವರೆ ದಶಕಗಳ ಸಂಪರ್ಕ ಇಂದಿಗೆ ಅಂತ್ಯವಾಗಿದೆ ಎಂದೇ ಹೇಳಬಹುದು. ಈ ಸಂದರ್ಭ ಡಿ ಕೆ ಶಿವಕುಮಾರ್ ಅವರು ಶೆಟ್ಟರ್ ಅವರನ್ನು ಹಾಡಿ ಹೊಗಳಿದ್ದಾರೆ.

 

35 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಯಲ್ಲಿ ಪಕ್ಷ ಸಂಘಟನೆ, ರಾಜಕಾರಣ ಮುಂತಾದ ಕೆಲಸಗಳನ್ನು ಮಾಡಿದ್ದರುಜಗದೀಶ್ ಶೆಟ್ಟರ್. ರಾಜ್ಯದ ಮುಖ್ಯಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಇವತ್ತು ಬಿಜೆಪಿಯ ಎಲ್ಲ ಸ್ಥಾನಮಾನಗಳಿಗೆ ಗುಡ್ ಬೈ ಹೇಳಲಿರುವ ಜಗದೀಶ್ ಶೆಟ್ಟರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಇಂದು ಬೆಳಿಗ್ಗೆ 8.30 ಕ್ಕೆ ಕೆಪಿಸಿಸಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು ಈ ವೇಳೆ ಸಿದ್ದರಾಮಯ್ಯ, ಎಂಬಿ ಪಾಟೀಲ್ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಡಿಕೆ ಶಿವಕುಮಾರ್, ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಕಾಂಗ್ರೆಸ್ ಸೇರಲು ಶೆಟ್ಟರ್ ಯಾವುದೇ ಪೂರ್ವ ಷರತ್ತು ವಿಧಿಸಿಲ್ಲ. ಇನ್ನೂ ಹಲವಾರು ಬಿಜೆಪಿ ನಾಯಕರು ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಇಂದು ವಿಶೇಷವಾದ ಐತಿಹಾಸಿಕ ದಿನ. ಇಡೀ ದೇಶವನ್ನು ಒಗ್ಗೂಡಿಸುವ ದಿನ. ಆಡಳಿತಕ್ಕೆ ಬದಲಾವಣೆ ತರುವ ದಿನ. ಜಗದೀಶ್ ಶೆಟ್ಟರ್ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಉಳ್ಳವರು.
ಕಾಂಗ್ರೆಸ್ ಸೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು ಜಗದೀಶ್ ಶೆಟ್ಟರ್.

ಶೆಟ್ಟರ್ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ವೇಣುಗೋಪಾಲ್ ಮುಂತಾದ ಹಿರಿಯ ನಾಯಕರು ಉಪಸ್ಥಿತರಿದ್ದು ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು.

Leave A Reply

Your email address will not be published.