Career Guidance: ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಬೇಕಾ? : ಹಾಗಿದ್ರೆ ಈ ಕೋರ್ಸ್ ಮಾಡಿ ಕೈ ತುಂಬಾ ಸಂಬಳ ಕೂಡ ಪಡೆಯಿರಿ!
Career Guidance: ಇಂದು ನೀವು ಯಾವುದೇ ವಿದ್ಯಾಭ್ಯಾಸ ಮಾಡಿದರು ಕೂಡ ಅದಕ್ಕೆ ಸರಿಯಾದ ನೌಕರಿ ಪಡೆಯಬೇಕು ಎಂದು ಬಯಸುವುದು ಸಹಜ. ದೇಶದಲ್ಲಿ ವಿದ್ಯಾರ್ಹತೆ ಹೊಂದಿದ್ದರು ಕೂಡ ಅಪೇಕ್ಷಿತ ಉದ್ಯೋಗ ಸಿಗದೇ ಹೆಚ್ಚಿನವರು ನಿರುದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ, ನಿರುದ್ಯೋಗ ಸಮಸ್ಯೆ( Unemployment)ಹೆಚ್ಚಾಗುತ್ತಿದೆ. ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಡಿಮೆ ಶುಲ್ಕದಲ್ಲಿ ಕೈ ತುಂಬಾ ಝಣ ಝಣ ಕಾಂಚಾಣ (High Paying Job in India)ಬರಲು ಅವಕಾಶ ನೀಡುವ ಕೋರ್ಸ್ ಯಾವುವು ಎಂದು ಯುವಜನತೆ ಅನ್ವೇಷಣೆ ಮಾಡುತ್ತಿದ್ದಾರೆ. ಈ ಕುರಿತ ಮುಖ್ಯ ಮಾಹಿತಿ(Career Guidance) ಇಲ್ಲಿದೆ ನೋಡಿ.
ಅಂತಾರಾಷ್ಟ್ರೀಯ ಸಂಬಂಧಗಳು (International Relations) ವಿವಿಧ ದೇಶಗಳ ನಡುವಿನ ರಾಜಕೀಯ ಸಂಬಂಧಗಳಿಗಷ್ಟೇ ಸೀಮಿತ ಎಂಬ ರೀತಿಯ ಒಂದು ಕಾಲವಿತ್ತು. ಆದರೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿ ಹೊಂದಿದೆ. ಅಂತಾರಾಷ್ಟ್ರೀಯ ಸಂಬಂಧವು ಒಂದು ರೀತಿಯಲ್ಲಿ ದೇಶಗಳ ನಡುವಿನ ಸಂಬಂಧಗಳ ಕುರಿತಾದ ಅಧ್ಯಯನವಾಗಿದ್ದು, ಇದು ಅಂತರ-ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ದೇಶಗಳೊಳಗಿನ ಬಹುರಾಷ್ಟ್ರೀಯ ಕಂಪನಿಗಳ( Foreign Companies) ಮಹತ್ವವನ್ನು ಕೂಡ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಮೂಲಕ ದೇಶದ ವಿದೇಶಾಂಗ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಂದು ದೇಶವನ್ನು ಪ್ರತಿನಿಧಿಸಲು ಕೂಡ ಅವಕಾಶವಿದೆ.
ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ವೃತ್ತಿಜೀವನವನ್ನು ಮಾಡಲು ರಾಜ್ಯಶಾಸ್ತ್ರ ಮತ್ತು ಮಾನವಿಕ ವಿಷಯಗಳೊಂದಿಗೆ ಸೆಕೆಂಡ್ ಪಿಯು ಪಾಸ್ ಮುಗಿಸಿರಬೇಕಾಗುತ್ತದೆ. ಮಾನವಿಕ ಅಧ್ಯಯನವನ್ನು ಅಭ್ಯಾಸ ಮಾಡದೇ ಅಥವಾ ಅರಿಸಿಕೊಳ್ಳದೆ ಇದ್ದಲ್ಲಿ ಇಂಟರ್ನ್ಯಾಷನಲ್ ರಿಲೇಶನ್ಸ್ ಕೋರ್ಸ್ (International Relationship Course)ಅನ್ನು ಕೂಡ ಮಾಡಬಹುದಾಗಿದೆ. ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ(Students) ವಿವಿಧ ರೀತಿಯ ಕೋರ್ಸ್ಗಳನ್ನೂ(course) ಮಾಡಲು ಅವಕಾಶವಿದೆ. ಈ ಕೋರ್ಸ್ ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ, ವಿದೇಶಾಂಗ ನೀತಿ, ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದಂತಹ ವಿಷಯಗಳನ್ನೊಳಗೊಂಡಿದ್ದು, ಹೀಗಾಗಿ, ಯುವಜನತೆ ಅಂತಾರಾಷ್ಟ್ರೀಯ ಸಂಬಂಧಗಳನ್ನ ವೃತ್ತಿಜೀವನವನ್ನು (Career) ಮಾಡಲು ಬಯಸುತ್ತಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳವೂ (Salary) ಕೂಡ ಲಭ್ಯವಾಗುತ್ತದೆ.
ವಿದ್ಯಾರ್ಥಿಗಳು ಪದವಿ ಪೂರೈಸಲು ಅಂತಾರಾಷ್ಟ್ರೀಯ ಆರ್ಥಿಕತೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಇತಿಹಾಸ, ಜಾಗತಿಕ ಮತ್ತು ತುಲನಾತ್ಮಕ ರಾಜಕೀಯ, ಯುರೋಪಿಯನ್ ಸಮಾಜಗಳ ಸಮಾಜಶಾಸ್ತ್ರ, ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಂತಹ ಕೋರ್ಸ್ಗಳನ್ನು ಆರಿಸಿಕೊಳ್ಳಬಹುದು. ಆದರೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲು ರಾಜಕೀಯ ವಿಜ್ಞಾನದಲ್ಲಿ ಎಂಎ, ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಎಂಎ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಎಂಎ ಆಯ್ಕೆಗಳು ಕೂಡ ಇವೆ ಎಂಬುದನ್ನು ಗಮನಿಸಬೇಕು.ಈ ಕೋರ್ಸ್ ಮಾಡಿದರೆ ಯಾವೆಲ್ಲ ಹುದ್ದೆ ಪಡೆಯಲು ಅವಕಾಶವಿದೆ?
ಯಾವ ರೀತಿಯ ಉದ್ಯೋಗ ಮಾಡಬಹುದು?
ಕೋರ್ಸ್ಗಳು ಪೂರ್ಣಗೊಂಡ ಬಳಿಕ ವ್ಯವಹಾರ ಮತ್ತು ಕಾನೂನಿನಲ್ಲೂ ಉತ್ತಮ ವೃತ್ತಿಜೀವನವನ್ನು ಮಾಡಲು ಅವಕಾಶವಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಬಿಯಾಗಿ ಕೆಲಸ ಮಾಡಬಹುದುಇದಲ್ಲದೆ, ರಾಜತಾಂತ್ರಿಕರು, ಗುಪ್ತಚರ ತಜ್ಞರು ಅಥವಾ ರಾಜಕೀಯ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸಬಹುದು. ರಾಜತಾಂತ್ರಿಕರ ಕೆಲಸವು ಇತರ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು. ಗುಪ್ತಚರ ತಜ್ಞರು ನಿರ್ದಿಷ್ಟ ಕಾರ್ಯಾಚರಣೆಗಾಗಿ ಇತರ ದೇಶಗಳಿಂದ ಡೇಟಾ ಮತ್ತು ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಾರೆ.
ರಾಜಕೀಯ ವಿಶ್ಲೇಷಕರ ಕೆಲಸವೆಂದರೆ ನೀತಿಗಳನ್ನು ವಿಶ್ಲೇಷಿಸುವುದು, ಸಂಶೋಧನೆಗಾಗಿ ರಾಜಕೀಯ ಸಮಸ್ಯೆಗಳನ್ನು ಕಂಡುಹಿಡಿದು ವಿದೇಶಿ ಸರ್ಕಾರಗಳ ನೀತಿಗಳ ಬಗ್ಗೆ ನಿಮ್ಮ ಸರ್ಕಾರಕ್ಕೆ ಸರಿಯಾದ ಸಲಹೆ ಸೂಚನೆ ನೀಡುವುದು. ಸಾಮಾನ್ಯವಾಗಿ ತಮ್ಮ ದೇಶ, ಸಂಸ್ಥೆ ಅಥವಾ ಸಂಸ್ಥೆಯನ್ನು ಇತರ ದೇಶದ ಸರ್ಕಾರಿ ಅಧಿಕಾರಿಗಳ ಮುಂದೆ ಪ್ರತಿನಿಧಿಸುತ್ತಾರೆ. ಸ್ವದೇಶದಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡುವ ಕಾರ್ಯ ಕೂಡ ನಿರ್ವಹಣೆ ಮಾಡುತ್ತಾರೆ. ಅಂತಾರಾಷ್ಟ್ರೀಯ ವಕೀಲರು ಎರಡು ದೇಶಗಳ ನಡುವಿನ ವಿವಾದಗಳನ್ನು ಬಗೆಹರಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸುವುದರ ಜೊತೆಗೆ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನು, ಬ್ಯಾಂಕಿಂಗ್ ಮತ್ತು ಹಣಕಾಸುಗಳೊಂದಿಗೆ ವ್ಯವಹರಿಸಲು ಅವಕಾಶವಿದೆ. ಹೀಗಾಗಿ, ಈ ಕೋರ್ಸ್ ಮಾಡುವುದರಿಂದ ವಿಪುಲ ಉದ್ಯೋಗ ಅವಕಾಶಗಳಿವೆ.