Belthangady Election: ಕಾಂಗ್ರೆಸ್ – ಬಿಜೆಪಿ ನಾಮಪತ್ರ ಸಲ್ಲಿಕೆಯ ವೇಳೆ ಘರ್ಷಣೆ, ವಾಹನ ಜಖಂ, ಕಾರ್ಯಕರ್ತರಿಗೆ ಗಾಯ !

ಅತ್ಯಂತ ಜಿದ್ದಾಜಿದ್ದಿನ ಚುನಾವಣಾ ಕಣವಾಗಿರುವ ಬೆಳ್ತಂಗಡಿಯಲ್ಲಿ ಇವತ್ತು ನಾಮಪತ್ರ ಸಲ್ಲಿಕೆಯ ಸಂಭ್ರಮ. ವಿರುದ್ಧ ಪಕ್ಷಗಳ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಇವತ್ತು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯ ತಿಕ್ಕಾಟ ಸಂಭವಿಸಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಹರೀಶ್ ಪೂಂಜಾ ಅವರು ಎರಡನೇ ಬಾರಿ ಆಯ್ಕೆ ಬಯಸಿದ್ದಾರೆ. ಅವರ ವಿರುದ್ಧವಾಗಿ ಕಾಂಗ್ರೆಸ್ಸಿನ ಯುವ ನೇತಾರ ರಕ್ಷಿತ್ ಶಿವರಾಮ್ ಅವರು ತೊಡೆ ತಟ್ಟಿ ಚುನಾವಣಾ ಅಂಕಣಕ್ಕೆ ಧುಮುಕಿದ್ದಾರೆ. ಇಂದು ಮುಂಜಾನೆ ಕುತ್ಯಾರು ದೇವಸ್ಥಾನದಿಂದ ಬಿಜೆಪಿಯ ಅಭ್ಯರ್ಥಿ ಹರೀಶ್ ಪೂಂಜಾ ಅವರ ತಂಡ ಬೃಹತ್ ಮೆರವಣಿಯೊಂದಿಗೆ ಮಿನಿ ವಿಧಾನಸೌಧಕ್ಕೆ ಸಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆನಂತರ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಅಷ್ಟರಲ್ಲಿ ಕಾಂಗ್ರೆಸ್ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಶುರುವಾಗಿತ್ತು.

ಕಿನ್ಯಮ್ಮ ಯಾನೆ ಸಭಾಂಗಣದಿಂದ ಹೊರಟ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮತ್ತು ಇತರ ಮುಖಂಡರುಗಳು ದೊಡ್ಡ ಮೆರವಣಿಗೆಯೊಂದಿಗೆ ಮಿನಿ ವಿಧಾನಸೌಧಕ್ಕೆ ನಾಮಪತ್ರ ಸಲ್ಲಿಸಲು ಹೊರಟಿದೆ. ಮಾರ್ಗಮಧ್ಯೆ, ಮಾಜಿ ಶಾಸಕ ವಸಂತ ಬಂಗೇರ ಅವರ ಮನೆಯ ಮುಂದಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಾಹನಗಳ ಮೂಲಕ ಸಾಗುತ್ತಿದ್ದರು. ಆಗ ಪರಸ್ಪರ ಘೋಷಣೆಗಳು ಮೊಳಗಿವೆ. ಬಿಜೆಪಿಗೆ ಜೈ, ಕಾಂಗ್ರೆಸ್ ಗೆ ಜೈ ಕಾರ ಕೂಡಾ ಹಾಕಲಾಗಿದೆ. ಆ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರು ಸಾಗುತ್ತಿದ್ದ ವಾಹನಕ್ಕೆ ಹಾನಿ ಸಂಭವಿಸಿದೆ ಎನ್ನಲಾಗಿದೆ.

ಆಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ತಿಕ್ಕಾಟ ಸಂಭವಿಸಿದೆ. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಿಜೆಪಿ ಕಾರ್ಯಕರ್ತರು ಸಾಗುತ್ತಿದ್ದ ವಾಹನವನ್ನು ಪುಡಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದೀಗ ಬೆಳ್ತಂಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಎಲ್ಲಾ ರಸ್ತೆಗಳು ಬ್ಲಾಕ್ ಆಗಿದ್ದು ಜನ ಸಂಚಾರದಿಂದ ವಾಹನಗಳ ಹೋರಾಟಕ್ಕೆ ಬಹುದೊಡ್ಡ ಅಡಚಣೆಯಾಗಿದೆ. ನಾಮಪತ್ರ ಸಲ್ಲಿಕೆಯಾದ ದಿನವೇ ಈ ರೀತಿ ಘರ್ಷಣೆ ಸಂಭವಿಸಿದ್ದು, ಸ್ವಾತಂತ್ರ್ಯಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಇದೀಗ ಯುವ ಜನತೆಯನ್ನು ತನ್ನ ಬಗಲಿಗೆ ಹಾಕಿಕೊಂಡು ಪ್ರಚಾರಕ್ಕೆ ಬಿರುಸಿನಿಂದ ಇಳಿದಿವೆ.

Leave A Reply

Your email address will not be published.